More

    ಗುತ್ತಿಗೆಯಲ್ಲಿ ಶೇ.25 ಮೀಸಲು ಕಲ್ಪಿಸಿ; ಎಸ್ಸಿ, ಎಸ್ಟಿ ಸಿವಿಲ್ ಗುತ್ತಿಗೆದಾರರ ಸಂಘ ಒತ್ತಾಯ, ಉಪವಾಸ ನಿರಶನ

    ಯಲಬುರ್ಗಾ: ಪರಿಶಿಷ್ಟ ಜಾತಿ ಮತ್ತು ಪಂಗಡ ಗುತ್ತಿಗೆದಾರರಿಗೆ ಕಾಮಗಾರಿ ಗುತ್ತಿಗೆಯಲ್ಲಿ ಶೇ.25 ಮೀಸಲು ಕಲ್ಪಿಸುವಂತೆ ಒತ್ತಾಯಿಸಿ ಪಟ್ಟಣದ ತಾಪಂ ಆವರಣದಲ್ಲಿ ಎಸ್ಸಿ, ಎಸ್ಟಿ ಸಿವಿಲ್ ಗುತ್ತಿಗೆದಾರರ ಸಂಘ ಬುಧವಾರ ಉಪವಾಸ ನಿರಶನ ನಡೆಸಿತು.

    ಸಂಘದ ಅಧ್ಯಕ್ಷ ಮುತ್ತಣ್ಣ ಬಾರಿನಾಳ ಮಾತನಾಡಿ, ಸರ್ಕಾರ ಎಸ್ಸಿ, ಎಸ್ಟಿ ಸಮುದಾಯದ ಗುತ್ತಿಗೆದಾರರಿಗೆ ಕಾಮಗಾರಿಯಲ್ಲಿ ಶೇ.25 ಮೀಸಲು ಕಲ್ಪಿಸಿದೆ. ನಿಯಮಾವಳಿ ಪ್ರಕಾರ ಸಿವಿಲ್ ಕಾಮಗಾರಿಗಳನ್ನು ಸಮುದಾಯಕ್ಕೆ ನೀಡದೆ ಅಧಿಕಾರಿಗಳು ತಾರತಮ್ಯ ನೀತಿ ಅನುಸರಿಸುತ್ತಿದ್ದಾರೆ. ತಾಪಂ ವಿವಿಧ ಅನುದಾನದನ್ವಯ ಪ್ರತಿ ವರ್ಷ ಶೇ.25 ಕಾಮಗಾರಿ ನೀಡಬೇಕಿದೆ. ತಾಪಂ ಆಡಳಿತ ಮಂಡಳಿ ಮತ್ತು ಸದಸ್ಯರು ಕಾಮಗಾರಿ ಮಾಡುತ್ತಿದ್ದು, ನಮಗೆ ಅನ್ಯಾಯವಾಗುತ್ತಿದೆ. ಕೂಡಲೇ ಈ ವ್ಯವಸ್ಥೆ ತಡೆಗಟ್ಟಿ, ತಾಪಂನ ಎಲ್ಲ ಕಾಮಗಾರಿಗಳನ್ನು ಟೆಂಡರ್ ಮೂಲಕ ಕರೆದು ಸರ್ಕಾರದ ನಿಯಮಾವಳಿ ಅನುಸಾರ ಹಂಚಿಕೆ ಮಾಡಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಆಗ್ರಹಿಸಿದರು.

    ಪದಾಧಿಕಾರಿಗಳಾದ ಹನುಮಂತಪ್ಪ ಮುತ್ತಾಳ, ದೇವೇಂದ್ರಪ್ಪ ಭಾವಿಮನಿ, ಮುದಕಪ್ಪ ಹೊಸಮನಿ, ಹನುಮಪ್ಪ ಹಿರೇಬೀಡನಾಳ, ಲಕ್ಷ್ಮಣ ಕಾಳಿ, ಯಮನೂರಪ್ಪ ಅರಬರ, ಶಿವಪ್ಪ ಮಂಗಳೂರು, ಗಾಳೆಪ್ಪ ವೀರಾಪುರ, ಮಲ್ಲಿಕಾರ್ಜುನ, ಮುದಕಪ್ಪ ಹೊಸಮನಿ, ರಾಮಣ್ಣ ಮನ್ನಾಪುರ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts