More

    ಸರ್ವರೋಗಕ್ಕೆ ಯೋಗ ಪರಿಹಾರ; ಕೃಷ್ಣಾ ಮೇಲ್ದಂಡೆ ಯೋಜನೆ ಭೂಸ್ವಾಧೀನಾಧಿಕಾರಿ ಅಬೀದ್ ಗದ್ಯಾಳ ಅಭಿಮತ

    ಯಲಬುರ್ಗಾ: ಯೋಗ ಸರ್ವರೋಗಕ್ಕೆ ಪರಿಹಾರವಾಗಿದ್ದು, ದೇಹ ಮತ್ತು ಮನಸಿನ ಮೇಲೆ ಹಿಡಿತ ಸಾಧಿಸಲು ಸಾಧ್ಯ ಎಂದು ಬಾಗಲಕೋಟೆಯ ಕೃಷ್ಣಾ ಮೇಲ್ದಂಡೆ ಯೋಜನೆ ಭೂಸ್ವಾಧೀನಾಧಿಕಾರಿ ಅಬೀದ್ ಗದ್ಯಾಳ ಹೇಳಿದರು.

    ಹಿರೇವಂಕಲಕುಂಟಾದ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಶ್ವ ಬಂಧು ಸೇವಾ ಗುರು ಬಳಗ ಏರ್ಪಡಿಸಿದ್ದ ಹತ್ತು ದಿನಗಳ ಯೋಗ ಶಿಬಿರದ ಸಮಾರೋಪದಲ್ಲಿ ಭಾನುವಾರ ಮಾತನಾಡಿದರು. ಹತ್ತು ದಿನಗಳ ಯೋಗ ಶಿಬಿರದಿಂದ ಕಲಿತದ್ದನ್ನು ನಿತ್ಯ ಅಭ್ಯಾಸ ಮಾಡಬೇಕು. ಇಂಥ ಸಮಾಜಮುಖಿ ಕೆಲಸಗಳಿಗೆ ಸಹಾಯ, ಸಹಕಾರ ಇರುತ್ತದೆ ಎಂದು ತಿಳಿಸಿದರು.

    ಶಿರಹಟ್ಟಿ ಪದವಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಬಸವರಾಜ ಕುರಗುಂದ ಮಾತನಾಡಿ, ಸ್ವಸ್ಥ ಹಾಗೂ ಸದೃಢ ಸಮಾಜ ನಿರ್ಮಾಣವಾಗಲು ಆರೋಗ್ಯ ಬಹಳ ಮುಖ್ಯವಾಗಿದ್ದು, ಪ್ರತಿಯೊಬ್ಬರೂ ಕಾಳಜಿವಹಿಸಬೇಕು ಎಂದರು.

    ಶಿಕ್ಷಕರಾದ ವೀರೇಶ ಪಾಟೀಲ್, ಶಿವಕುಮಾರ ಹೊಂಬಳ, ಸಂಗಯ್ಯ ಹಿರೇಮಠ, ಸಿದ್ದಪ್ಪ ಸಜ್ಜಗಾರ, ಕೃಷ್ಣ ಪತ್ತಾರ ಮಾತನಾಡಿದರು. ಬಳಗದ ಮುಖ್ಯಸ್ಥ ಸಿದ್ದಲಿಂಗಪ್ಪ ಶ್ಯಾಗೋಟಿ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕರ ದಿನಾಚರಣೆ ಅಂಗವಾಗಿ ಸ್ಲೋ ಬೈಕ್ ರೈಡ್ ಮತ್ತು ರಂಗೋಲಿ ಸ್ಪರ್ಧೆ ವಿಜೇತರಿಗೆ ಟ್ರೋಫಿ ವಿತರಿಸಲಾಯಿತು. ಗ್ರಾಪಂ ಅಧ್ಯಕ್ಷೆ ಹುಸೇನ್‌ಬಿ ಅತ್ತಾರ, ನೌಕರರ ಸಂಘದ ರಾಜ್ಯ ಪರಿಷತ್ ಸದಸ್ಯ ಬಸವರಾಜ ಮೆಣಸಗಿ, ಉಪಪ್ರಾಚಾರ್ಯ ಚಂದ್ರಕಾಂತಯ್ಯ ಕಲ್ಯಾಣಮಠ, ಶಿಕ್ಷಕರ ಸಂಘದ ಮಹಾಂತೇಶ ಹಿರೇಮಠ, ಶಿಕ್ಷಕರಾದ ಮಲ್ಲಪ್ಪ ಮಾಸ್ತಿ, ಮಹೇಂದ್ರ, ಮರ್ದಾನ್‌ಸಾಬ್ ನದಾಫ್, ನಾಗರಾಜ ಶೆಟ್ಟರ್, ವೀರಯ್ಯ ಶಶಿಮಠ, ರೇವಪ್ಪ ಕುರಿಬಾನಿ, ಆಂಜನೇಯ ಈಳಿಗೇರ, ಮಹಾವೀರ ಕಲಬಾವಿ, ಮೆಹಬೂಬ್ ಬಾದಷಾ, ಮಹಾದೇವಪ್ಪ ಪೂಜಾರ, ಶಂಕ್ರಪ್ಪ ಹಳ್ಳಿ, ಕನಕಪ್ಪ ಕಂಬಳಿ, ಸಂಗಮೇಶ ತೋಟದ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts