More

    ಶೀಘ್ರವೇ ಮೋಟಾರ್ ದುರಸ್ತಿಗೆ ಕ್ರಮ; ಯಲಬುರ್ಗಾ ಪಪಂ ಅಧ್ಯಕ್ಷ ಅಮರೇಶ ಹುಬ್ಬಳ್ಳಿ ಹೇಳಿಕೆ

    ಯಲಬುರ್ಗಾ: ಕಲ್ಲೂರು ಬಳಿ ಇರುವ ನೀರು ಶುದ್ಧೀಕರಣ ಘಟಕಕ್ಕೆ ಮಳೆ ನೀರು ನುಗ್ಗಿದ ಪರಿಣಾಮ ಪಟ್ಟಣಕ್ಕೆ ನೀರು ಪೂರೈಕೆಯಲ್ಲಿ ಸಮಸ್ಯೆಯಾಗಿದ್ದು, ಸ್ಥಳಕ್ಕೆ ಪಪಂ ಅಧ್ಯಕ್ಷ ಅಮರೇಶ ಹುಬ್ಬಳ್ಳಿ, ಸ್ಥಾಯಿ ಸಮಿತಿ ಅಧ್ಯಕ್ಷ ಕಳಕಪ್ಪ ತಳವಾರ, ಸದಸ್ಯ ವಸಂತ ಬಾವಿಮನಿ ಮತ್ತು ಮುಖ್ಯಾಧಿಕಾರಿ ಶಿವಕುಮಾರ ಕಟ್ಟಿಮನಿ ಗುರುವಾರ ಭೇಟಿ ನೀಡಿ ಪರಿಶೀಲಿಸಿದರು.

    ಪಪಂ ಅಧ್ಯಕ್ಷ ಅಮರೇಶ ಹುಬ್ಬಳ್ಳಿ ಮಾತನಾಡಿ, ನಿರಂತರ ಮಳೆಯಿಂದ ಹಳ್ಳದ ನೀರು ಘಟಕದ ಒಳಭಾಗಕ್ಕೆ ನುಗ್ಗಿದೆ. ಪರಿಣಾಮ ಮೋಟಾರ್ ಇರುವ ಜಾಗ ಜಲಾವೃತಗೊಂಡು ಪಟ್ಟಣದ ನಿವಾಸಿಗಳಿಗೆ ಪೂರೈಸುವ ನೀರು ಸರಬರಾಜಿನಲ್ಲಿ ವ್ಯತ್ಯಯವಾಗಿದೆ. ಕೂಡಲೇ ಮೋಟಾರ್ ದುರಸ್ತಿಗೊಳಿಸಿ, ನೀರು ಪೂರೈಕೆಗೆ ಕ್ರಮ ವಹಿಸಲಾಗುವುದು. ಭಾರಿ ಮಳೆ ಬಂದಾಗೊಮ್ಮೆ ಸಮಸ್ಯೆ ಉಂಟಾಗುತ್ತಿದ್ದು, ಶಾಶ್ವತ ಪರಿಹಾರಕ್ಕೆ ತಡೆಗೋಡೆ ನಿರ್ಮಾಣದ ಅವಶ್ಯಕತೆ ಇದೆ. ಈ ಕುರಿತು ಸಚಿವ ಹಾಲಪ್ಪ ಆಚಾರ್ ಜತೆ ಚರ್ಚಿಸಿ, 2 ಕೋಟಿ ರೂ. ಅನುದಾನ ಮಂಜೂರಾತಿಗೆ ಮನವಿ ಮಾಡಲಾಗುವುದು ಎಂದರು.

    ಪಪಂ ಮುಖ್ಯಾಧಿಕಾರಿ ಶಿವಕುಮಾರ ಕಟ್ಟಿಮನಿ ಮಾತನಾಡಿ, ನೀರು ಶುದ್ಧೀಕರಣ ಘಟಕದಲ್ಲಿ ಸಣ್ಣಪುಟ್ಟ ದುರಸ್ತಿ ಕಾಮಗಾರಿ ನಡೆಯಬೇಕಿದೆ. ಸ್ವಚ್ಛತೆ ಬಗ್ಗೆ ಗಮನಹರಿಸಲು ಸಿಬ್ಬಂದಿಗೆ ಸೂಚಿಸಲಾಗಿದೆ. ಘಟಕದ ಪ್ರವೇಶದ್ವಾರದ ಮುಂದಿನ ರಸ್ತೆ ಕಿತ್ತಿದ್ದು, ಸರಿಪಡಿಸಲಾಗುತ್ತದೆ. ಹಳ್ಳದ ನೀರು ಸರಾಗವಾಗಿ ಹರಿಯಲು ಸೂಕ್ತ ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts