More

    ಕರೊನಾ ವೈರಸ್‌ನ ಭಯ ಬೇಡ; ವೈದ್ಯಾಧಿಕಾರಿ ಶೇಖರ್ ಭಜಂತ್ರಿ ಹೇಳಿಕೆ

    ಯಲಬುರ್ಗಾ: ಪಟ್ಟಣದ ಸಾರ್ವಜನಿಕ ಆಸ್ಪತ್ರೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಕರೊನಾ ವೈರಸ್ ಕುರಿತು ಜನಜಾಗೃತಿ ಕಾರ್ಯಕ್ರಮ ಸೋಮವಾರ ನಡೆಯಿತು.

    ವೈದ್ಯಾಧಿಕಾರಿ ಶೇಖರ್ ಭಜಂತ್ರಿ ಮಾತನಾಡಿ, ಪ್ರತಿಯೊಬ್ಬರೂ ತಮ್ಮ ಆರೋಗ್ಯದ ಕಡೆಗೆ ಹೆಚ್ಚು ಗಮನ ಹರಿಸಬೇಕು. ವೈಯಕ್ತಿಕ ಸ್ವಚ್ಛತೆ ಕಾಪಾಡಿಕೊಳ್ಳಬೇಕು. ಕೆಮ್ಮು ಹಾಗೂ ಸೀನುವಾಗ ಮಾಸ್ಕ್, ಕೈವಸ್ತ್ರ ಉಪಯೋಗಿಸಬೇಕು. ಸಾರ್ವಜನಿಕ ಸ್ಥಳದಲ್ಲಿ ಉಗುಳಬಾರದು. ಉಸಿರಾಟದ ತೊಂದರೆಯಾದಲ್ಲಿ ವೈದ್ಯರ ಸಲಹೆ ಪಡೆಯಬೇಕು. ಕೊಪ್ಪಳ ಭಾಗದಲ್ಲಿ ಕರೊನಾ ಪತ್ತೆಯಾಗಿಲ್ಲ. ಸಾರ್ವಜನಿಕರು ವದಂತಿಗಳಿಗೆ ಕಿವಿಗೊಡದೆ ಜಾಗ್ರತವಾಗಿರಬೇಕು ಎಂದರು.

    ಪಟ್ಟಣದ ನಾನಾ ವೃತ್ತಗಳ ಮೂಲಕ ಜಾಗೃತಿ ಜಾಥಾ ನಡೆಯಿತು. ಡಾ.ವಿವೇಕ, ಆಪ್ತ ಸಮಾಲೋಚಕರಾದ ಅರುಣಕುಮಾರ ಹಿರೇಮಠ, ಕಾಳಪ್ಪ ಬಡಿಗೇರ್, ಟೆಕ್ನಿಷಿಯನ್ ಚಂದ್ರಪ್ಪ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts