More

    ಹಿರೇವಡ್ರಕಲ್ ಭಾಗದಲ್ಲಿ ಕಾಡುಪ್ರಾಣಿಗಳ ಹಾವಳಿ: ರೈತರೊಬ್ಬರ ಜಮೀನಿನಲ್ಲಿ ಚಿರತೆ ಪ್ರತ್ಯಕ್ಷ

    ಯಲಬುರ್ಗಾ: ತಾಲೂಕಿನ ಹಿರೇವಡ್ರಕಲ್ ಭಾಗದ ಗುಡ್ಡಗಾಡು ಪ್ರದೇಶದಲ್ಲಿ ಕಾಡು ಪ್ರಾಣಿಗಳ ಹಾವಳಿ ಹೆಚ್ಚಾಗಿದೆ. ಎರಡ್ಮೂರು ದಿನಗಳಿಂದ ಚಿರತೆ ಕಾಣಿಸಿಕೊಂಡು ರೈತರಲ್ಲಿ ಭೀತಿ ಹುಟ್ಟಿಸಿದೆ.

    ಹಿರೇವಂಲಕುಂಟಾ ಹೋಬಳಿ ವ್ಯಾಪ್ತಿಯ ಹಿರೇವಡ್ರಕಲ್‌ನ ರೈತರು ಕಾಡು ಪ್ರಾಣಿಗಳ ಉಪಟಳದಿಂದ ಸಮಸ್ಯೆ ಎದುರಿಸುತ್ತಾರೆ. ಸಾವಿರಾರು ರೂ. ಖರ್ಚು ಮಾಡಿ ಬಿತ್ತನೆ ಮಾಡಿದ ಬೆಳೆಗಳು ಕೈಸೇರಬೇಕೆನ್ನುವಾಗ ಕರಡಿಗಳ ದಾಳಿಯಿಂದ ಹಾನಿಯಾಗಿರುತ್ತದೆ. ಈ ಭಾಗದಲ್ಲಿ ಬೀಜೋತ್ಪಾದನೆ ಹೆಚ್ಚು. ಅದನ್ನು ಕಾಡುಪ್ರಾಣಿಗಳಿಂದ ರಕ್ಷಿಸಿಕೊಳ್ಳಲು ರೈತರು ಜಮೀನಲ್ಲಿ ಇರುವುದು ಜಾಸ್ತಿ. ರಾತ್ರಿ ವೇಳೆ ಕಾಡು ಪ್ರಾಣಿಗಳು ಮೈಮೇಲೆ ಎರಗಿದರೆ ಪ್ರಾಣ ಕಳೆದುಕೊಳ್ಳುವ ಸಂಭವ ಇದೆ. ಹೀಗಾಗಿ ಅರಣ್ಯ ಇಲಾಖೆ ಅಧಿಕಾರಿಗಳು ಕ್ರಮಕೈಗೊಳ್ಳಬೇಕು. ರಾತ್ರಿಹೊತ್ತು ಹೊಲದಲ್ಲಿ ವಿದ್ಯುತ್ ಸೌಕರ್ಯ ಕಲ್ಪಿಸಬೇಕೆಂಬುದು ರೈತರ ಒತ್ತಾಯವಾಗಿದೆ.

    ಸಿಸಿ ಟಿವಿಯಲ್ಲಿ ಪತ್ತೆ: ಹೊಲದಲ್ಲಿ ವಾಸ ಮಾಡಿದ ರೈತರೊಬ್ಬರ ಮನೆಗೆ ಅಳವಡಿಸಿದ ಸಿಸಿ ಟಿವಿಯಲ್ಲಿ ಚಿರತೆ ಸೆರೆಯಾಗಿದೆ. ಹಿರೇವಡ್ರಕಲ್‌ನ ಜಮೀನುಗಳು ಗುಡ್ಡದಂಚಿನಲ್ಲಿ ಇರುವುದರಿಂದ ಕೋಳಿ, ಕುರಿಯನ್ನು ಹೊತ್ತೊಯ್ದು ತಿನ್ನುತ್ತಿದೆ. ಇದರಿಂದ ರೈತರು ಭಯಭೀತರಾಗಿದ್ದಾರೆ. ರಾತ್ರಿವೇಳೆ ಹೊಲದಲ್ಲಿ ಬೆಳಕಿನ ಅವಶ್ಯಕತೆ ಇದ್ದು, ಸಂಬಂಧಿಸಿದ ಅಧಿಕಾರಗಳು ಗಮನಹರಿಸಬೇಕು ಎಂದು ಹಿರೇವಡ್ರಕಲ್‌ನ ಹನುಮೇಶ ಹನುಮನಾಳ, ಯಮನೂರಪ್ಪ ಹನುಮನಾಳ, ಹನುಮೇಶ ಸುಣಗಾರ, ಅಹ್ಮದ್‌ಸಾಬ್ ಅಂಗಡಿ, ಗುಂಡಪ್ಪ ಹನುಮನಾಳ, ಫಕಿರೇಶ ತಳವಾರ, ದುರಗಪ್ಪ ಸುಣಗಾರ ಇತರರು ಒತ್ತಾಯಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts