More

    ಜಾತಿ ವ್ಯವಸ್ಥೆ ಹೆಚ್ಚಳಕ್ಕೆ ರಾಜಕಾರಣಿಗಳು ಕಾರಣ: ಮಾಜಿ ಸಚಿವ ಬಸವರಾಜ ರಾಯರಡ್ಡಿ ಅಭಿಮತ


    ಯಲಬುರ್ಗಾ: ಶರಣರು ಎಂದೂ ಜಾತಿ ಮಾಡಿದವರಲ್ಲ. ಚುನಾವಣೆ ಮತ್ತು ರಾಜಕಾರಣಿಗಳಿಂದ ಜಾತಿ ವ್ಯವಸ್ಥೆ ಹೆಚ್ಚಾಗಿದೆ ಎಂದು ಮಾಜಿ ಸಚಿವ ಬಸವರಾಜ ರಾಯರಡ್ಡಿ ಹೇಳಿದರು.

    ತಾಲೂಕಿನ ಗೆದಗೇರಿ ಗ್ರಾಮದ ಶ್ರೀಶರಣ ಬಸವೇಶ್ವರ ಜಾತ್ರೋತ್ಸವ ಮತ್ತು ವೀರಶೈವ ಧಾರ್ಮಿಕ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಸೋಮವಾರ ಮಾತನಾಡಿದರು. ಶರಣರು ಹಾಕಿಕೊಟ್ಟ ತತ್ವದಡಿ ಪ್ರತಿಯೊಬ್ಬರೂ ಮುನ್ನಡೆಯಬೇಕು. ಒಳ್ಳೆಯ ಆಚಾರ-ವಿಚಾರ, ಸಂಸ್ಕಾರ-ಸಂಸ್ಕೃತಿ ತಿಳಿದುಕೊಳ್ಳುವ ಸಲುವಾಗಿ ಧಾರ್ಮಿಕ ಕಾರ್ಯಕ್ರಮ ನಡೆಸಲಾಗುತ್ತದೆ. ಶರಣರ ಹಾದಿಯಲ್ಲಿ ಭಕ್ತರು ಮಾಡುವ ಘನ ಕಾರ್ಯ ಮುಂದುವರಿಯಲಿ ಎಂದರು.

    ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕುದರಿಮೋತಿಯ ಮೈಸೂರುಮಠದ ವಿಜಯಮಹಾಂತ ಸ್ವಾಮೀಜಿ, ದಾಂಪತ್ಯ ಜೀವನಕ್ಕೆ ಕಾಲಿಟ್ಟ ನವ ಜೋಡಿಗಳು ಅನ್ಯೋನ್ಯವಾಗಿ ಜೀವನ ನಡೆಸಬೇಕು. ಗಳಿಸಿದ ಹಣದಲ್ಲಿ ಇನ್ನೊಬ್ಬರಿಗೆ ಸಹಾಯ ಮಾಡುವ ಮನೋಭಾವ ರೂಢಿಸಿಕೊಳ್ಳಬೇಕು ಎಂದರು. ಜಿಪಂ ಮಾಜಿ ಉಪಾಧ್ಯಕ್ಷ ಶಿವಶಂಕರ ದೇಸಾಯಿ ಮಾತನಾಡಿದರು.

    ದೇವಸ್ಥಾನ ಕಮಿಟಿ ಅಧ್ಯಕ್ಷ ಬಸಪ್ಪ ಬೆದವಟ್ಟಿ, ಕಾರ್ಯದರ್ಶಿ ರುದ್ರಪ್ಪ ಕೊಪ್ಪದ, ಗ್ರಾಪಂ ಉಪಾಧ್ಯಕ್ಷ ಶರಣಪ್ಪ ಕೊಪ್ಪದ, ಸದಸ್ಯರಾದ ಶರಣಪ್ಪ ನಾಗೂರು, ಫಕೀರವ್ವ ನಡುಲಮನಿ, ಪಿಡಿಒ ಫಕೀರಪ್ಪ ಕಟ್ಟಿಮನಿ, ಪ್ರಮುಖರಾದ ಶರಣಪ್ಪ ಇಟಗಿ, ಶರಣಪ್ಪ ಹಾಳಕೇರಿ, ಅಶೋಕ ಕೋಳಿಹಾಳ, ಮಂಜುನಾಥ ಕಲ್ಲೂರು, ಕೆರಿಬಸಪ್ಪ ನಿಡಗುಂದಿ, ಎ.ಜಿ.ಬಾವಿಮನಿ, ಮಂಜುನಾಥ ಮಾಸ್ತಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts