More

    ಪ್ರವಚನ ಆಲಿಕೆಯಿಂದ ಮನಸ್ಸಿಗೆ ನೆಮ್ಮದಿ

    ಯಲಬುರ್ಗಾ: ಪುರಾಣ, ಪ್ರವಚನ ಆಲಿಕೆಯಿಂದ ಮನಸ್ಸಿಗೆ ನೆಮ್ಮದಿ ಲಭಿಸುತ್ತದೆ ಎಂದು ಹಾಲಕೆರೆ ಅನ್ನದಾನೇಶ್ವರ ಮಠದ ಶ್ರೀ ಮುಪ್ಪಿನ ಬಸವಲಿಂಗ ಸ್ವಾಮೀಜಿ ಹೇಳಿದರು.

    ತಾಲೂಕಿನ ಬಂಡಿಹಾಳ ಗ್ರಾಮದ ಶ್ರೀಕಾಲಕಾಲೇಶ್ವರ ದೇವಸ್ಥಾನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸಂಚಾರಿ ಶಿವಾನುಭವ ಗೋಷ್ಠಿಯಲ್ಲಿ ಮಾತನಾಡಿದರು. ಮನುಷ್ಯ ಜೀವನದಲ್ಲಿ ಪುರಾಣ, ಕೀರ್ತನೆ ಕೇಳುವುದರಿಂದ ತಾಮಸ ಗುಣಗಳು ಮಾಯವಾಗಿ ಸದ್ವಿಚಾರಗಳನ್ನು ಅಳವಡಿಸಿಕೊಳ್ಳಲು ಸಹಕಾರಿಯಾಗುತ್ತದೆ. ಇಂದಿನ ಯುವ ಸಮೂಹ ದುಶ್ಚಟಗಳ ದಾಸರಾಗುತ್ತಿದ್ದು, ಮಾನಸಿಕ ಸ್ವಾಸ್ಥ್ಯ ಹಾಳುಮಾಡಿಕೊಳ್ಳುತ್ತಿದ್ದಾರೆ. ಆಧ್ಯಾತ್ಮಿಕ ಕಡೆಗೆ ಹೆಚ್ಚು ಗಮನಹರಿಸಿದಾಗ ಆರೋಗ್ಯವಂತ ಬದುಕು ರೂಪಿಸಿಕೊಳ್ಳಲು ಸಾಧ್ಯ. ಗ್ರಾಮೀಣ ಪ್ರದೇಶದಲ್ಲಿ ಪಾಲಕರು ತಮ್ಮ ಮಕ್ಕಳಿಗೆ ಸಂಸ್ಕಾರ, ಸಂಸ್ಕೃತಿ ಕಲಿಸುವ ಮೂಲಕ ಉತ್ತಮ ನಾಗರಿಕರನ್ನಾಗಿ ಮಾಡಬೇಕು ಎಂದರು.

    ಧರೂರಿನ ಶ್ರೀಕೊಟ್ಟೂರು ಸ್ವಾಮೀಜಿ, ಶ್ರೀಧರ ಗಡ್ಡಿಯ ಶ್ರೀ ಮರಿಕೊಟ್ಟೂರು ದೇವರು, ಸೋಮಸಮುದ್ರದ ಶ್ರೀ ನಾಗನಾಥ ದೇವರು, ಬುದಗುಂಪಿಯಶ್ರೀ ವಿಜಯ ಪ್ರಭುದೇವರು, ವೀರಾಪುರದ ಶ್ರೀ ಚನ್ನಬಸವ ತಾತ ಸಾನ್ನಿಧ್ಯ ವಹಿಸಿದ್ದರು.

    ತಬಲಾ ವಾದಕ ಕುಬೇರಪ್ಪ ಹೊಸಳ್ಳಿ, ಬಸಪ್ಪ ಮಾಸ್ತರ ಶ್ರೀಗಿರಿ, ಸಂಗೀತ ಬಳಗದ ಬಸವರಾಜ ಬಂಡ್ರಿ, ಗಣ್ಯರಾದ ಬಸನಗೌಡ ಪೊಲೀಸ್ ಪಾಟೀಲ್ ದಳಪತಿ, ಅಂದಪ್ಪ ನಿಡಗುಂದಿ, ಕೊಟ್ರೇಶ ಶ್ರೀ ಗಿರಿ, ಕಲ್ಲಿನಾಥ ಲಿಂಗಣ್ಣವರ್, ರಾಮನಗೌಡ ಮಾಳಗೌಡ್ರ, ಬಸವರಾಜ ಸಿ.ಕಳಸಪ್ಪನವರ್, ಕೆರಿಬಸಯ್ಯ ಬೆಣಕಲ್ಲಮಠ, ಕೆರಿಬಸಪ್ಪ ಪಟ್ಟೇದ, ಗೂಳಪ್ಪ ದಿಂಡೂರು, ಮಂಜು ಸಂಗಣ್ಣವರ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts