More

    ಪೋಕ್ಸೋ ಕಾಯ್ದೆ ಅನುಷ್ಠಾನಗೊಳಿಸಿ


    ಯಲಬುರ್ಗಾ: ಮೂಲಭೂತ ಹಕ್ಕುಗಳನ್ನು ಮಕ್ಕಳಿಗೆ ಒದಗಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ಮಕ್ಕಳ ಹಕ್ಕುಗಳ ಆಯೋಗದ ಸದಸ್ಯ ಶೇಖರಗೌಡ ರಾಮತ್ನಾಳ ಹೇಳಿದರು.

    ಮೂಲಭೂತ ಹಕ್ಕುಗಳನ್ನು ಮಕ್ಕಳಿಗೆ ಒದಗಿಸಿ

    ತಾಲೂಕಿನ ಲಿಂಗಬಂಡಿ ಸರ್ಕಾರ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಮಕ್ಕಳ ಹಕ್ಕುಗಳ ಗ್ರಾಮಸಭೆ ಉದ್ಘಾಟಿಸಿ ಮಾತನಾಡಿದರು.
    ಬಾಲ್ಯ ವಿವಾಹ ಪದ್ಧತಿಯಿಂದ ರಾಜ್ಯದಲ್ಲಿ ಬಾಲ ತಾಯಂದಿರ ಸಂಖ್ಯೆ ಹೆಚ್ಚಾಗುತ್ತಿದೆ. ಶಾಲೆ, ವಸತಿ ನಿಲಯದಲ್ಲಿ ಮಕ್ಕಳಿಗೆ ಗುಣಮಟ್ಟದ ಆಹಾರ, ಕುಡಿವ ನೀರು, ಶೌಚಗೃಹ ವ್ಯವಸ್ಥೆ ಕಲ್ಪಿಸಬೇಕು. ಮಕ್ಕಳ ರಕ್ಷಣೆಗಾಗಿ ವಿಶ್ವಸಂಸ್ಥೆ ಜಾರಿಗೊಳಿಸಿದ ಪೋಕ್ಸೋ ಕಾಯ್ದೆ ಅನುಷ್ಠಾನಕ್ಕೆ ಮುಂದಾಗಬೇಕು. ಶಿಕ್ಷಣ ನೀಡಿದರೆ ಮಾತ್ರ ಉತ್ತಮ ಸಮಾಜ ನಿರ್ಮಿಸಲು ಸಾಧ್ಯವಾಗುತ್ತದೆ ಎಂದರು.

    ಇದನ್ನೂ ಓದಿ: ದೆಹಲಿಯ ಪ್ರಾಚೀನ ದೇವಾಲಯದ ದ್ವಾರದ ಬಾಗಿಲು ಕೆಡವಿದ್ದಕ್ಕೆ ಲೆಫ್ಟಿನೆಂಟ್ ಗವರ್ನರ್ ಪ್ರತಿಕ್ರಿಯೆ ಹೀಗಿತ್ತು…

    ಗ್ರಾಪಂ ಪಿಡಿಒ ಸೋಮಪ್ಪ ಪೂಜಾರ, ಮಕ್ಕಳ ಹಕ್ಕುಗಳ ರಕ್ಷಣಾ ಸಮಾಲೋಚಕ ರವಿ ಬಡಿಗೇರ ಮಾತನಾಡಿದರು. ಗ್ರಾಪಂ ಅಧ್ಯಕ್ಷೆ ದೇವಮ್ಮ ಶರಣಪ್ಪ ಭೂತಲ್, ಸದಸ್ಯ ತೀರ್ಥಪ್ಪ ಭಜಂತ್ರಿ, ಸಮಾಜ ಕಲ್ಯಾಣ ಅಧಿಕಾರಿ ವಿ.ಕೆ.ಬಡಿಗೇರ್, ಪ್ರಮುಖರಾದ ಪ್ರಭುಗೌಡ ಮಾಲಿಪಾಟೀಲ್, ಮರಿಯಪ್ಪ ಬಡಿಗೇರ್, ಮಹಾಂತೇಶ ವಾದಿ, ಮಹಾದೇವಪ್ಪ ಹುಡೇದ, ದೇವಪ್ಪ ಮನ್ನಾಪೂರ, ಶಿಕ್ಷಕರು, ವಿದ್ಯಾರ್ಥಿಗಳು ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts