More

    ಬಸವಾದಿ ಶರಣರು ಸಮಾಜ ತಿದ್ದಿದರು

    ಯಲಬುರ್ಗಾ: ಮಾನವ ಜನ್ಮ ಪಾವನವಾಗಬೇಕಾದರೆ ಸತ್ಪುರುಷರ ಸಂಗದಲ್ಲಿರಬೇಕು ಎಂದು ಮುಖಂಡ ಬಸಣ್ಣ ಹೊಸಳ್ಳಿ ಹೇಳಿದರು. ತಾಲೂಕಿನ ಗುಳೆ ಗ್ರಾಮದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ 76ನೇ ಮಾಸಿಕ ಹುಣ್ಣಿಮೆಯ ಬಸವಾನುಭವ ಕಾರ್ಯಕ್ರಮದಲ್ಲಿ ಮಾತನಾಡಿದರು.

    ಯಾರ ಸಹವಾಸದಲ್ಲಿದ್ದೇವೆ ಎಂಬುದರ ಮೇಲೆ ನಮ್ಮ ಬದುಕಿನ ಮೌಲ್ಯ ನಿರ್ಣಯವಾಗುತ್ತದೆ. ಬಸವಾದಿ ಶರಣರು ತಮ್ಮ ವಚನಗಳ ಮೂಲಕ ಸಮಾಜದಲ್ಲಿ ಅಂಕು ಡೊಂಕು ತಿದ್ದುವ ಕೆಲಸ ಮಾಡಿದ್ದಾರೆ. ವಚನಗಳ ಸಾರವನ್ನು ಜನ ಮನಗಳಿಗೆ ಬಿತ್ತರಿಸಿದ್ದಾರೆ ಎಂದರು.

    ಬಸವದಳದ ಕಾರ್ಯದರ್ಶಿ ಬಸವರಾಜ ಹೂಗಾರ ಮಾತನಾಡಿ, ಭಗವಂತನ ನಾಮಸ್ಮರಣೆ ಪ್ರತಿ ಹಂತದಲ್ಲೂ ಮಾಡುವ ಅಗತ್ಯವಿದೆ. ಬಸವಣ್ಣನವರು ದೇಹವು ಸದೃಢವಾಗಿರುವಾಗಲೇ ಆಧ್ಯಾತ್ಮಿಕ ಚಿಂತನೆ ಮಾಡಬೇಕು ಎಂದಿದ್ದಾರೆ ಎಂದರು. ಮುಖಂಡ ರೇಣುಕಪ್ಪ ಮಂತ್ರಿ ಮಾತನಾಡಿದರು.
    ಪಂಪಣ್ಣ ಹೊಸಳ್ಳಿ, ಲಿಂಗನಗೌಡ ದಳಪತಿ, ಹನಮೇಶ ಹೊಸಳ್ಳಿ, ನಿಜಲಿಂಗಪ್ಪ ಮಂತ್ರಿ, ರಾಷ್ಟ್ರಪತಿ ಹೊಸಳ್ಳಿ ಸೇರಿದಂತೆ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts