More

    ಕಾನೂನು ವಿರೋಧಿ ಚಟುವಟಿಕೆಯಲ್ಲಿ ಭಾಗಿಯಾದರೆ ಕ್ರಮ; ಬೇವೂರು ಪಿಎಸ್‌ಐ ಶೀಲಾ ಮೂಗನಗೌಡ್ರ ಹೇಳಿಕೆ

    ಯಲಬುರ್ಗಾ: ಅಪರಾಧ ಚಟುವಟಿಕೆಗಳನ್ನು ತಡೆಯಲು ಸಾರ್ವಜನಿಕರ ಸಹಕಾರ ಅಗತ್ಯ ಎಂದು ಬೇವೂರು ಪಿಎಸ್‌ಐ ಶೀಲಾ ಮೂಗನಗೌಡ್ರ ಹೇಳಿದರು.

    ತಾಲೂಕಿನ ಮುರಡಿ ಗ್ರಾಮದಲ್ಲಿ ಬೇವೂರು ಪೊಲೀಸ್ ಠಾಣೆಯಿಂದ ಅಪರಾಧ ತಡೆ ಮಾಸಾಚರಣೆ ಹಾಗೂ ಗ್ರಾಪಂ ಚುನಾವಣೆ ನಿಮಿತ್ತ ಶುಕ್ರವಾರ ಹಮ್ಮಿಕೊಂಡಿದ್ದ ಶಾಂತಿ ಸಭೆಯಲ್ಲಿ ಮಾತನಾಡಿದರು. ಗ್ರಾಪಂ ಚುನಾವಣೆಗೆ ಅಧಿಸೂಚನೆ ನಿಗದಿಯಾಗಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರ ವಹಿಸಬೇಕು. ಕಾನೂನು ವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು. ಚುನಾವಣೆ ನೆಪದಲ್ಲಿ ಹಳ್ಳಿಯಲ್ಲಿ ಅಕ್ರಮ ಮದ್ಯ ಮಾರಾಟಕ್ಕೆ ಅವಕಾಶ ಕೊಡಬಾರದು. ಈ ನಿಟ್ಟಿನಲ್ಲಿ ಪ್ರಜ್ಞಾವಂತರು ಹೆಚ್ಚು ಜಾಗೃತಿ ವಹಿಸಬೇಕು. ಚುನಾವಣೆ ನಿಮಿತ್ತ ಅನಾವಶ್ಯಕ ಚರ್ಚೆಗೆ ಆಸ್ಪದ ಕೊಡಬಾರದು ಎಂದು ತಿಳಿಸಿದರು.

    ಈ ವೇಳೆ ಗ್ರಾಮದ ಪ್ರಮುಖರಾದ ಬಸವರಾಜ ಗುರಿಕಾರ, ಮುದಿಯಪ್ಪ ಕುರ್ನಾಳ, ಶೇಖಣ್ಣ ಯಾವಗಲ್, ನಾಗನಗೌಡ ಪೊಲೀಸ್ ಪಾಟೀಲ್, ಪರಸಪ್ಪ ಉಗ್ರಾಣದ, ಗುಬ್ಬಯ್ಯ ಬಿಜಕಲ್, ನಾಗಪ್ಪ ದ್ಯಾಂಪುರ, ಹನುಮೇಶ ಗುಜ್ಜಲ್, ಪ್ರಭು ಕೋಳಿಹಾಳ, ಹಾಗೂ ಪೇದೆಗಳಾದ ಶಿವಕುಮಾರ ಕುದ್ರಿಕೊಟಗಿ, ಪರಶುರಾಮ ದಳವಾಯಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts