More

    ಕನ್ನಡ ಉಳಿಸುವಲ್ಲಿ ಯಕ್ಷಗಾನದ ಪಾತ್ರ ದೊಡ್ಡದು

    ಕುಮಟಾ: ವಿಶ್ವವೇ ಬೆರಗುಗಣ್ಣಿನಿಂದ ನೋಡುವ ಏಕೈಕ ಕಲೆ ಯಕ್ಷಗಾನ. ಮಾತು ಬಲ್ಲ ಅಥವಾ ಬಾರದ ವ್ಯಕ್ತಿಯನ್ನೂ ಸೆಳೆಯುವ ಸಾಮರ್ಥ್ಯ ಯಕ್ಷಗಾನಕ್ಕಿದೆ ಎಂದು ರಾಜ್ಯ ಯಕ್ಷಗಾನ ಅಕಾಡೆಮಿ ನಿಕಟಪೂರ್ವ ಅಧ್ಯಕ್ಷ ಡಾ. ಜಿ.ಎಲ್. ಹೆಗಡೆ ಹೇಳಿದರು.

    ಬ್ರಹ್ಮೂರಿನ ಕೇಶವ ದೇವಸ್ಥಾನದಲ್ಲಿ ಸ್ಥಳೀಯವಾಗಿ ಸಂಘಟಿತವಾದ ನೂತನ ಶ್ರೀ ಮಹಾಗಣಪತಿ ಯಕ್ಷಗಾನ ಹಾಗೂ ಸಾಂಸ್ಕೃಕ ಕಲಾಭಿವೃದ್ಧಿ ಟ್ರಸ್ಟ್ ಉದ್ಘಾಟಿಸಿ ಅವರು ಮಾತನಾಡಿದರು. ಕನ್ನಡ ಭಾಷೆ ಉಳಿಸುವಲ್ಲಿ ಯಕ್ಷಗಾನದ ಪಾತ್ರ ಅನುಪಮವಾದದ್ದು. ಕರ್ನಾಟಕ ಸಂಸ್ಕೃ ಇಲಾಖೆ ಕನ್ನಡ ಸಂಸ್ಕೃ ಉಳಿಸಲು ಬಹಳಷ್ಟು ಅನುದಾನ ವ್ಯಯಿಸುತ್ತದೆ. ಆದರೆ, ನಾವು ಅನೇಕ ವರ್ಷಗಳಿಂದ ಯಕ್ಷಗಾನದ ಮೂಲಕ ಕನ್ನಡ ಭಾಷೆ ಉಳಿಸಿಕೊಂಡು ಬಂದಿದ್ದೇವೆ ಎಂದರು.

    ಯಕ್ಷಗಾನದ ಬಹುಮುಖಿ ಕಲಾವಿದ ಹಾಗೂ ಗ್ರಾಮೀಣ ಭಾಗದಲ್ಲಿ ಯಕ್ಷಗಾನದ ಬೆಳವಣಿಗೆಗೆ ಹಲವು ದಶಕಗಳ ಕಾಲ ಶ್ರಮಿಸಿದ ಬ್ರಹ್ಮೂರಿನ ಗಂಗಾಧರ ಭಟ್ಟ ಹಾಗೂ ಅವರ ಪತ್ನಿ ಉಷಾ ಭಟ್ಟ ಅವರನ್ನು ಸನ್ಮಾನಿಸಲಾಯಿತು.

    ಯಕ್ಷಗಾನ ಮತ್ತು ಸಾಂಸ್ಕೃತಿಕ ಕಲಾಭಿವೃದ್ಧಿ ಟ್ರಸ್ಟ್​ನ ಅಧ್ಯಕ್ಷ ನಾರಾಯಣ ಭಟ್ಟ, ಅಧ್ಯಕ್ಷತೆ ವಹಿಸಿದ್ದ ನಾರಾಯಣ ಹೆಬ್ಬಾರ, ಕಲಾಪೋಷಕ ಕೃಷ್ಣ ಭಟ್ಟ, ಭಾಗವತ ಶಂಕರ ಭಟ್ಟ, ಸೀತಾರಾಮ ಪುರಾಣಿಕ, ನರಸಿಂಹ ಹೆಗಡೆ, ಪಂಚಾಯಿತಿ ಸದಸ್ಯರಾದ ಸೌಮ್ಯ ಹೆಗಡೆ, ಸಂದೇಶ ನಾಯ್ಕ, ವೆಂಕಟರಮಣ ಪಿ. ಕಾಶಿ ಇತರರಿದ್ದರು.

    ಬಳಿಕ ಭೀಷ್ಮಾರ್ಜುನ ಪ್ರಸಂಗದ ತಾಳಮದ್ದಲೆ ನಡೆಯಿತು. ಹಿಮ್ಮೇಳದಲ್ಲಿ ಚಂಡೆಯಲ್ಲಿ ಗಜಾನನ ಸಾಂತೂರು, ಮೃದಂಗದಲ್ಲಿ ಪರಮೇಶ್ವರ ಭಂಡಾರಿ ರ್ಕ, ಭಾಗವತಿಕೆಯಲ್ಲಿ ಶಂಕರ ಭಟ್ಟ ಬ್ರಹ್ಮೂರು, ಅರ್ಥಧಾರಿಗಳಾಗಿ ಡಾ. ಜಿ.ಎಲ್. ಹೆಗಡೆ, ನಾರಾಯಣ ಹೆಬ್ಬಾರ ಕಬಗಾಲ, ಆನಂದ ಭಟ್ಟ ಕೆಕ್ಕಾರು ಮತ್ತು ಟ್ರಸ್ಟ್ ನ ಸದಸ್ಯರು ಕಲಾವಂತಿಕೆ ಮೆರೆದರು.

    ಜಿ.ಆರ್. ಭಟ್ಟ, ಎನ್.ಎಸ್.ಭಟ್ಟ, ಸುಬ್ರಾಯ ಹೆಗಡೆ ಹಾಗೂ ಗಜಾನನ ಭಟ್ಟ ಕಾರ್ಯಕ್ರಮ ನಿರ್ವಹಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts