More

    ನಂದಳಿಕೆ, ಕಾಳಿಂಗ ನಾವಡ ಹೆಸರು ಶಾಶ್ವತ

    ಶೃಂಗೇರಿ: ಯಕ್ಷಗಾನ ಪ್ರಪಂಚದಲ್ಲಿ ನಂದಳಿಕೆ ಲಕ್ಷ್ಮೀನಾರಾಯಣಪ್ಪ ಹಾಗೂ ಕಾಳಿಂಗ ನಾವಡ ಹೆಸರು ಶಾಶ್ವತವಾಗಿ ಉಳಿದಿವೆ ಎಂದು ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಪ್ರೊ. ಎಂ.ಎ.ಹೆಗಡೆ ಹೇಳಿದರು.

    ಡಾ. ವಿ.ಆರ್.ಗೌರೀಶಂಕರ್ ಸಭಾಂಗಣದಲ್ಲಿ ಶನಿವಾರ ಶ್ರೀ ಭಾರತೀ ತೀರ್ಥ ಸಾಂಸ್ಕೃತಿಕ ಟ್ರಸ್ಟ್, ಕಾಳಿಂಗ ನಾವಡ ಸಾಂಸ್ಕೃತಿಕ ಪ್ರತಿಷ್ಠಾನದ ಸಹಯೋಗದಲ್ಲಿ ಯಕ್ಷಗಾನ ಅಕಾಡೆಮಿ ಆಯೋಜಿಸಿರುವ ಎರಡು ದಿನಗಳ ಕಾಳಿಂಗ ನಾವಡ ರಾಷ್ಟ್ರೀಯ ವಿಚಾರಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

    ಮುದ್ದಣ್ಣ ಎಂದು ಪ್ರಸಿದ್ಧಿಯಾದ ನಂದಳಿಕೆ ಲಕ್ಷ್ಮೀನಾರಾಯಣಪ್ಪ ಬರೆದ ಎರಡು ಯಕ್ಷಗಾನ ಪ್ರಸಂಗ ’ರತ್ನಾವತಿ ಕಲ್ಯಾಣ ಹಾಗೂ ಕುಮಾರ ವಿಜಯ’ ಯಕ್ಷಗಾನ ಪ್ರಸಂಗ ಬರೆಯುವ ಕವಿಗಳ ಮೇಲೆ ಅತ್ಯಂತ ಪ್ರಭಾವ ಬೀರಿದೆ. ಭಾಗವತಿಕೆ ಮೂಲಕ ಜನಸಾಮಾನ್ಯರ ಹೃನ್ಮನಗಳಲ್ಲಿ ಶಾಶ್ವತ ಸ್ಥಾನ ಗಳಿಸಿದ ಕಾಳಿಂಗ ನಾವಡರ ಪ್ರಭಾವವನ್ನು ಈಗಿನ ಭಾಗವತರ ಹಾಡಿನ ಶೈಲಿಯಲ್ಲಿ ಕಾಣಬಹುದಾಗಿದೆ ಎಂದು ಅಭಿಪ್ರಾಯಪಟ್ಟರು.

    ಯಕ್ಷಗಾನ ಪರಂಪರೆ ಉಳಿವಿಗಾಗಿ ಅಕಾಡೆಮಿಯು ವಿಚಾರ ಮಂಥನ, ದಾಖಲೀಕರಣ, ಸಮಗ್ರ ದರ್ಶನವನ್ನು ಆನಾವರಣಗೊಳಿಸಲು ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿದೆ. ಯಕ್ಷಗಾನ ತರಬೇತಿ ನೀಡುವ ಜತೆಗೆ ಪರಂಪರೆಯ ಮೌಲ್ಯವನ್ನು ವಿಸ್ತರಿಸುವ ಕಾರ್ಯ ಮಾಡುತ್ತಿದೆ. ಸಂರಕ್ಷಣಾ, ಸಂವರ್ಧನಾ ಇತ್ಯಾದಿ ಹೆಸರಿನಲ್ಲಿ ಯಕ್ಷಗಾನದ ಮೌಲ್ಯವನ್ನು ಎತ್ತಿಹಿಡಿಯುವ ಕಾರ್ಯವನ್ನು ಅಕಾಡೆಮಿಯಿಂದ ಆಗುತ್ತಿದೆ ಎಂದು ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts