More

    ಕುಂಬ್ಳೆ ಶ್ರೀಧರ ರಾವ್ ಅವರಿಗೆ ಆತ್ಮಾಲಯ ಅಕಾಡೆಮಿ ಪುರಸ್ಕಾರ

    ಪುತ್ತೂರು: ಯಕ್ಷಗಾನದ ಹಿರಿಯ ಕಲಾವಿದ ಕುಂಬ್ಳೆ ಶ್ರೀಧರ ರಾವ್ ಅವರು ಬೆಂಗಳೂರಿನ ಆತ್ಮಾಲಯ ಅಕಾಡೆಮಿ ಆಫ್ ಆರ್ಟ್ ಅಂಡ್ ಕಲ್ಚರ್ ಟ್ರಸ್ಟ್ ಕೊಡಮಾಡುವ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಪ್ರಶಸ್ತಿ ಪ್ರದಾನ ಸಮಾರಂಭವು ಸೆ.25ರಂದು ಬೆಂಗಳೂರಿನ ರೇಸ್‌ಕೋರ್ಸ್ ರಸ್ತೆಯ ಭಾರತೀಯ ವಿದ್ಯಾಭವನದಲ್ಲಿ ನಡೆಯಲಿದೆ.
    ಪ್ರಶಸ್ತಿಯನ್ನು ಆತ್ಮಾಲಯ ಅಕಾಡೆಮಿಯು ಆಯೋಜಿಸುವ ಜಸ್ಟೀಸ್ ಕೆ. ಜಗನ್ನಾಥ ಶೆಟ್ಟಿ ಸ್ಮಾರಕ ಪ್ರಶಸ್ತಿಗೆ ಶ್ರೀಧರ ರಾಯರು ಭಾಜನರಾಗಿದ್ದಾರೆ. ಅಂದು ಅವರಿಂದ ಯಕ್ಷಗಾನ ಪ್ರಾತ್ಯಕ್ಷಿಕೆಯೂ ನಡೆಯಲಿದೆ. ಇವರೊಂದಿಗೆ ರಾಮಪುರಂ ಕುನ್ನಿಕೃಷ್ಣ ಮಾರಾರ್ ಅವರು ದೇವಿಕಾ ಮತ್ತು ಚಾಕ್ಯರ್ ರಾಜನ್ ಮೆಮೋರಿಯಲ್ ಪ್ರಶಸ್ತಿ ಸ್ವೀಕರಿಸಲಿದ್ದಾರೆ.
    ಈ ಹಿಂದಿನ ವರುಷಗಳಲ್ಲಿ ಜಸ್ಟೀಸ್ ಕೆ. ಜಗನ್ನಾಥ ಶೆಟ್ಟಿ ಸ್ಮಾರಕ ಪ್ರಶಸ್ತಿಗೆ ಪಾಪಣ್ಣ ಖ್ಯಾತಿಯ ಹಾಸ್ಯಗಾರ ಪೆರುವೋಡಿ ನಾರಾಯಣ ಭಟ್, ಗಾನಕೇಸರಿ ಕುದ್ಮಾರು ವೆಂಕಟ್ರಮಣ, ಪೂಕಳ ಲಕ್ಷ್ಮೀನಾರಾಯಣ ಭಟ್ ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ.
    ಕುಂಬಳೆಯವರು ಪುತ್ತೂರು ತಾಲೂಕು ಉಪ್ಪಿನಂಗಡಿ ಸನಿಹದ ನೆಕ್ಕಿಲಾಡಿ ಗ್ರಾಮದ ಬೇರಿಕೆಯಲ್ಲಿ ವಾಸ. ವಿವಿಧ ಯಕ್ಷಗಾನ ಮೇಳಗಳಲ್ಲಿ ಕರ್ತವ್ಯ ನಿರ್ವಹಿಸಿ ನಂತರ ಶ್ರೀಧರ್ಮಸ್ಥಳ ಮೇಳದಿಂದ ನಿವೃತ್ತಿಯಾದವರು. ದಾಕ್ಷಾಯಿಣಿ, ಸುಭದ್ರೆ, ದ್ರೌಪದಿ, ಅಮ್ಮುದೇವಿ ಮೊದಲಾದ ಸ್ತ್ರೀಪಾತ್ರಗಳಿಂದ ಖ್ಯಾತರು. ಮೇಳ ತಿರುಗಾಟದ ಒಂದು ಕಾಲಘಟ್ಟದಲ್ಲಿ ಸ್ತ್ರೀಪಾತ್ರದಿಂದ ಪುರುಷ ಪಾತ್ರಕ್ಕೆ ಬದಲಾಗಿ ಕಲಾವಿದರೆನಿಸಿಕೊಂಡರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts