More

    ಕ್ರಿಕೆಟ್ ಆಟಗಾರ ಚಾಹಲ್ ತಂದೆ ತಾಯಿಗೆ ಕರೊನಾ ದೃಢ! ತಂದೆ ಸ್ಥಿತಿ ಗಂಭೀರ

    ನವದೆಹಲಿ: ಭಾರತದ ಕ್ರಿಕೆಟ್ ತಂಡದ ಆಟಗಾರ ಯಜುವೇಂದ್ರ ಚಾಹಲ್ ಅವರ ತಂದೆ ತಾಯಿಗೆ ಕರೊನಾ ಸೋಂಕು ದೃಢವಾಗಿದೆ. ತಾಯಿ ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದರೆ ತಂದೆ ಆಸ್ಪತ್ರೆಗೆ ದಾಖಲಾಗಿರುವುದಾಗಿ ಚಾಹಲ್ ಅವರ ಪತ್ನಿ ಧನಶ್ರೀ ವರ್ಮಾ ತಿಳಿಸಿದ್ದಾರೆ.

    ಈ ಬಗ್ಗೆ ಧನಶ್ರೀ ಅವರು ಇನ್ಸ್ಟಾಗ್ರಾಂನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ನನ್ನ ಅತ್ತೆ ಮಾವ ಇಬ್ಬರಿಗೂ ಕರೊನಾ ದೃಢವಾಗಿದೆ. ಅತ್ತೆಗೆ ಕೆಲ ರೋಗ ಲಕ್ಷಣಗಳು ಮಾತ್ರ ಕಾಣಿಸಿಕೊಂಡಿರುವುದರಿಂದಾಗಿ ಅವರು ಮನೆಯಲ್ಲೇ ಐಸೋಲೇಷನ್ನಲ್ಲಿದ್ದಾರೆ. ಆದರೆ ಮಾವನ ಆರೋಗ್ಯ ಏರುಪೇರಾಗಿದ್ದು, ಸ್ಥಿತಿ ಗಂಭೀರವಿರುವುದರಿಂದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರು ಆದಷ್ಟು ಬೇಗ ಚೇತರಿಸಿಕೊಳ್ಳಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಅವರು ಬರೆದುಕೊಂಡಿದ್ದಾರೆ.

    ಎರಡನೇ ಅಲೆಯಿಂದಾಗಿ ಹೊರಗಡೆ ಸ್ಥಿತಿ ತೀರಾ ಹದೆಗೆಟ್ಟಿದೆ. ಹಾಗಾಗಿ ಎಲ್ಲರೂ ಮನೆಯಲ್ಲೇ ಸುರಕ್ಷಿತವಾಗಿರಿ, ಮಾಸ್ಕ್ ಧರಿಸಿ ಎಂದು ಧನಶ್ರೀ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
    ಕೆಲ ದಿನಗಳ ಹಿಂದೆ ಕ್ರಿಕೆಟ್ನ ಮಾಜಿ ಆಟಗಾರರಾದ ಪಿಯೂಷ್ ಚಾವ್ಲಾ ಮತ್ತು ಆರ್.ಪಿ ಸಿಂಗ್ ಅವರ ತಂದೆಯರು ಕರೊನಾ ಸೋಂಕಿನಿಂದಾಗಿ ಅಸು ನೀಗಿದ್ದರು. (ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts