More

    ಕ್ವಾರಂಟೈನ್ನಲ್ಲಿದ್ದವರಿಗೆ ದಿಢೀರ್ ಬಿಡುಗಡೆ

    ಯಾದಗಿರಿ: ಜಿಲ್ಲೆಯಲ್ಲಿ ಕರೊನಾ ಸೋಂಕಿತರ ಸಂಖ್ಯೆ ದಿನೇದಿನೆ ಹೆಚ್ಚಾಗಲು ಜಿಲ್ಲಾಡಳಿತವೇ ನೇರ ಹೊಣೆಯಾಗಿದೆ ಎಂದು ಜೆಡಿಎಸ್ ರಾಜ್ಯ ಯುವ ಮುಖಂಡ ಶರಣಗೌಡ ಕಂದಕೂರ ಗುಡುಗಿದ್ದಾರೆ.

    ಶನಿವಾರ ಸಂಜೆ ಲಿಂಗೇರಿ ಸ್ಟೇಷನ್ನ ಮುರಾರ್ಜಿ ವಸತಿ ಶಾಲೆ ಕ್ವಾರಂಟೈನ್ನಲ್ಲಿದ್ದ 45 ಕಾಮರ್ಿಕರ ರಕ್ತ ಮತ್ತು ಗಂಟಲು ದ್ರವದ ವರದಿ ಬರುವ ಮುನ್ನವೇ ಜಿಲ್ಲಾಡಳಿತ ಬಿಡುಗಡೆಗೊಳಿಸಿದ್ದು, ಇವರಲ್ಲಿ 18 ಜನರಿಗೆ ಸೋಂಕು ತಗಲಿರುವ ಮಾಹಿತಿ ಇದೆ. ಇನ್ನು ಇವರೊಂದಿಗೆ ಸುಮಾರು 300 ಜನರು ಪ್ರಾಥಮಿಕ ಸಂಪರ್ಕಕ್ಕೆ ಬಂದಿದ್ದರಿಂದ ಗುರುಮಠಕಲ್ ಕ್ಷೇತ್ರದಲ್ಲಿ ಆತಂಕ ಮನೆ ಮಾಡಿದೆ ಎಂದು ಅವರು ಭಾನುವಾರ ಸುದ್ದಿಗೋಷ್ಠಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.

    ಜಿಲ್ಲಾಧಿಕಾರಿ, ಜಿಪಂ ಸಿಇಒ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಒಂದು ದಿನವೂ ಜಿಲ್ಲೆಯ ಕ್ವಾರಂಟೈನ್ ಕೇಂದ್ರಗಳಿಗೆ ಭೇಟಿ ನೀಡುವ ಕೆಲಸ ಮಾಡುತ್ತಿಲ್ಲ. 270ಕ್ಕೂ ಹೆಚ್ಚು ಸೋಂಕಿತರಿದ್ದು, ಈ ಪೈಕಿ ಬಹುತೇಕ ಗುರುಮಠಕಲ್ ಕ್ಷೇತ್ರದವರೇ ಇರುವುದು ಶಾಸಕ ನಾಗನಗೌಡ ಕಂದಕೂರ ಮತ್ತು ನನ್ನ ಚಿಂತೆ ಹೆಚ್ಚಿಸಿದೆ ಎಂದರು.

    ಮಹಾರಾಷ್ಟ್ರದ ಸೊಲ್ಲಾಪುರದಿಂದ ಮಹಿಳೆಯೊಬ್ಬಳು ಸೈದಾಪುರಗೆ ಬಂದಿದ್ದಳು. ಆಕೆ ಕಫದ ಮಾದರಿ ಪಡೆದು ಮನೆಗೆ ಕಳಿಸಿದ್ದು, ಇದೀಗ ಪಾಸಿಟಿವ್ ಬಂದಿದೆ. ಆಕೆ ಸಂಪರ್ಕಕ್ಕೆ ಅದೆಷ್ಟು ಜನ ಬಂದಿದ್ದಾರೋ ದೇವರೇ ಬಲ್ಲ. ಗಂಟಲು ದ್ರವ ಪಡೆದ ಬಳಿಕ ಸಾಂಸ್ಥಿಕ ಕ್ವಾರಂಟೈನ್ನಲ್ಲಿ ಇಡದೆ ಹೇಗೆ ಬಿಟ್ಟಿದ್ದಾರೆ ಎಂದು ಪ್ರಶ್ನಿಸಿದ ಕಂದಕೂರ, ಜಿಲ್ಲಾಡಳಿತ ಜನರ ಜೀವದ ಜತೆ ಚೆಲ್ಲಾಟವಾಡುತ್ತಿದೆ ಎಂದು ಕಿಡಿಕಾರಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts