More

    ಡಬ್ಲ್ಯುಟಿಸಿ ರ‌್ಯಾಂಕಿಂಗ್ : 3ನೇ ಸ್ಥಾನಕ್ಕೇರಿದ ಇಂಗ್ಲೆಂಡ್, ಅಗ್ರಸ್ಥಾನ ಕಾಯ್ದುಕೊಂಡ ಭಾರತ

    ದುಬೈ: ಕರೊನಾ ವೈರಸ್ ಭೀತಿ ನಡುವೆಯೂ 117 ದಿನಗಳ ಬಳಿಕ ಆರಂಭಗೊಂಡ ಟೆಸ್ಟ್ ಸರಣಿಯಲ್ಲಿ ವೆಸ್ಟ್ ಇಂಡೀಸ್ ಎದುರು 2-1 ರಿಂದ ಜಯ ದಾಖಲಿಸಿದ ಇಂಗ್ಲೆಂಡ್ ತಂಡ, ಐಸಿಸಿ ವರ್ಲ್ಡ್ ಟೆಸ್ಟ್ ಚಾಂಪಿಯನ್‌ಷಿಪ್‌ನ ಅಂಕಪಟ್ಟಿಯಲ್ಲಿ ಬಡ್ತಿ ಪಡೆದಿದೆ. ಜೋ ರೂಟ್ ಒಟ್ಟಾರೆ 226 ಪಾಯಿಂಟ್ಸ್ ಕಲೆಹಾಕಿದೆ. 360 ಪಾಯಿಂಟ್ಸ್ ಹೊಂದಿರುವ ಭಾರತ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದರೆ, 296 ಅಂಕ ಹೊಂದಿರುವ ಆಸ್ಟ್ರೇಲಿಯಾ 2ನೇ ಸ್ಥಾನದಲ್ಲಿದೆ. ವೆಸ್ಟ್ ಇಂಡೀಸ್ 40 ಅಂಕಗಳೊಂದಿಗೆ 7ನೇ ಸ್ಥಾನದಲ್ಲೇ ಉಳಿದಿದೆ.

    ಇದನ್ನೂ ಓದಿ: ದಕ್ಷಿಣ ಆಫ್ರಿಕಾದ ಜಾಕ್ಸ್ ಕಾಲೀಸ್ ದಾಖಲೆ ಸನಿಹದಲ್ಲಿ ಕ್ರೇಗ್ ಬ್ರಾಥ್‌ವೇಟ್…!

    ಡಬ್ಲ್ಯುಟಿಸಿ ರ‌್ಯಾಂಕಿಂಗ್ : 3ನೇ ಸ್ಥಾನಕ್ಕೇರಿದ ಇಂಗ್ಲೆಂಡ್, ಅಗ್ರಸ್ಥಾನ ಕಾಯ್ದುಕೊಂಡ ಭಾರತಸರಣಿಗೂ ಮುನ್ನ 4ನೇ ಸ್ಥಾನದಲ್ಲಿದ್ದ ಇಂಗ್ಲೆಂಡ್, 146 ಪಾಯಿಂಟ್ಸ್ ಹೊಂದಿತ್ತು. ಇದಕ್ಕೂ ಮೊದಲು ಆಶಸ್ ಸರಣಿಯಲ್ಲಿ 2-2 ರಿಂದ ಸಮಬಲ ಸಾಧಿಸಿದರೆ, ದಕ್ಷಿಣ ಆಫ್ರಿಕಾ ಎದುರು 3-1 ರಿಂದ ಜಯ ದಾಖಲಿಸಿತ್ತು. ವೆಸ್ಟ್ ಇಂಡೀಸ್ ತಂಡ ಇದಕ್ಕೂ ಮೊದಲು ತವರಿನಲ್ಲಿ ನಡೆದ ಟೆಸ್ಟ್ ಸರಣಿಯಲ್ಲಿ ಭಾರತ ಎದುರು 0-2 ರಿಂದ ಸೋತಿತ್ತು. ಇಂಗ್ಲೆಂಡ್ ತಂಡ ಆಗಸ್ಟ್ 5 ರಿಂದ ಮ್ಯಾಂಚೆಸ್ಟರ್‌ನಲ್ಲಿ ಪಾಕಿಸ್ತಾನ ಎದುರು ಮೊದಲ ಟೆಸ್ಟ್ ಪಂದ್ಯವಾಡಲಿದೆ.

    ಕೊಹ್ಲಿ, ರೋಹಿತ್ ಸ್ಥಾನ ಅಬಾಧಿತ

    ಡಬ್ಲ್ಯುಟಿಸಿ ರ‌್ಯಾಂಕಿಂಗ್ : 3ನೇ ಸ್ಥಾನಕ್ಕೇರಿದ ಇಂಗ್ಲೆಂಡ್, ಅಗ್ರಸ್ಥಾನ ಕಾಯ್ದುಕೊಂಡ ಭಾರತಏಕದಿನ ಕ್ರಿಕೆಟ್‌ನಲ್ಲಿ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ, ಉಪ-ನಾಯಕ ರೋಹಿತ್ ಶರ್ಮ ಏಕದಿನ ಕ್ರಿಕೆಟ್ ರ‌್ಯಾಂಕಿಂಗ್‌ನಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ. ಬೌಲಿಂಗ್ ವಿಭಾಗದಲ್ಲಿ ಜಸ್‌ಪ್ರೀತ್ ಬುಮ್ರಾ 2ನೇ ಸ್ಥಾನದಲ್ಲಿದ್ದಾರೆ. ವಿರಾಟ್ ಕೊಹ್ಲಿ 871 ಪಾಯಿಂಟ್ಸ್ ಹಾಗೂ ರೋಹಿತ್ ಶರ್ಮ 855 ಕಲೆಹಾಕಿದ್ದಾರೆ. ಭಾರತದ ರವೀಂದ್ರ ಜಡೇಜಾ ಆಲ್ರೌಂಡರ್ ವಿಭಾಗದಲ್ಲಿ ಅಗ್ರ 10ರೊಳಗೆ ಸ್ಥಾನ ಪಡೆದಿರುವ ಏಕೈಕ ಆಟಗಾರನಾಗಿದ್ದಾರೆ. ಜಡೇಜಾ 8ನೇ ಸ್ಥಾನದಲ್ಲಿದ್ದಾರೆ.

    ನಾಡಾ ಜವಾನನ ಕೆಲಸಕ್ಕೆ ಅರ್ಜಿ ಹಾಕಿದ ಭಾರತ ತಂಡದ ಮಾಜಿ ನಾಯಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts