More

    ದಾದಾ ಚಿತ್ತ ಟಿ20 ಕ್ರಿಕೆಟ್‌ನತ್ತ..!

    ಕೋಲ್ಕತ: ಸೌರವ್ ಗಂಗೂಲಿ, ನಾಯಕತ್ವದ ಮೂಲಕ ಭಾರತೀಯ ಕ್ರಿಕೆಟ್‌ಗೆ ಹೊಸ ಭಾಷ್ಯ ಬರೆದ ನಾಯಕ. ಸುಮಾರು 15 ವರ್ಷಗಳ ಕಾಲ ರಾಷ್ಟ್ರೀಯ ತಂಡದ ಅವಿಭಾಜ್ಯ ಅಂಗವಾಗಿದ್ದ ಸೌರವ್ ಗಂಗೂಲಿ, ರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ದಾದಾ ಕಾಣಿಸಿಕೊಂಡಿಲ್ಲ. ಕೇವಲ ಐಪಿಎಲ್‌ಗಷ್ಟೇ ಸೀಮಿತವಾದರು. ಆಡುವ ವೇಳೆ ದಾದಾ ಚುಟುಕು ಕ್ರಿಕೆಟ್ ಮಾದರಿಯಲ್ಲೇ ಆಕ್ರಮಣಕಾರಿ ಬ್ಯಾಟಿಂಗ್ ಮಾಡುತ್ತಿದ್ದರು. ಇದೀಗ ಸ್ವತಃ ಬಿಸಿಸಿಐ ಅಧ್ಯಕ್ಷರೂ ಆಗಿರುವ ಸೌರವ್ ಗಂಗೂಲಿ ಚುಟುಕು ಕ್ರಿಕೆಟ್ ಬೆಂಬಲಕ್ಕೆ ನಿಂತಿದ್ದಾರೆ. ನಾನು ಆಡುವಾಗ ಟಿ20 ಕ್ರಿಕೆಟ್ ಇರುತ್ತಿದ್ದರೆ, ನನ್ನ ಆಟದ ಶೈಲಿಯನ್ನೇ ಬದಲಿಸಿಕೊಳ್ಳುತ್ತಿದ್ದೆ.

    ಇದನ್ನೂ ಓದಿ: ಸಿಬ್ಬಂದಿಗೆ ಕರೊನಾ, ಈಡನ್​ ಗಾರ್ಡನ್ಸ್ ಕ್ರೀಡಾಂಗಣ ಸೀಲ್​ಡೌನ್​!

    ಸ್ಫೋಟಕ ಬ್ಯಾಟಿಂಗ್ ಬ್ಯಾಟಿಂಗ್ ಮಾಡಲು ಇದು ಪ್ರಮುಖ ಅಸ್ತ್ರ ಎಂದು ಕನ್ನಡಿಗ ಮಯಾಂಕ್ ಅಗರ್ವಾಲ್ ಜತೆ ಬಿಸಿಸಿಐ ಟ್ವಿಟರ್‌ನಲ್ಲಿ ನಡೆದ ಚರ್ಚೆಯಲ್ಲಿ ತಿಳಿಸಿದ್ದಾರೆ. 113 ಟೆಸ್ಟ್ ಹಾಗೂ 311 ಏಕದಿನ ಪಂದ್ಯಗಳನ್ನಾಡಿರುವ ಸೌರವ್ ಗಂಗೂಲಿ, ರಾಷ್ಟ್ರೀಯ ತಂಡದ ಪರ ಒಂದೂ ಚುಟುಕು ಕ್ರಿಕೆಟ್ ಪಂದ್ಯ ಆಡಿಲ್ಲ. ಆದರೆ, ಐಪಿಎಲ್ ನಲ್ಲಿ ಕೋಲ್ಕತ ನೈಟ್‌ರೈಡರ್ಸ್‌ ಹಾಗೂ ಪುಣೆ ವಾರಿಯರ್ಸ್‌ ತಂಡಗಳ ಪರ ಆಡಿದ್ದಾರೆ. ನನಗೆ ಟಿ20 ಕ್ರಿಕೆಟ್ ಆಡಲು ಇಷ್ಟವಿತ್ತು. ಹೀಗಾಗಿಯೇ ಮೊದಲ ಐದು ವರ್ಷ ಐಪಿಎಲ್‌ನಲ್ಲಿ ಆಡಿದೆ. ಇದರಿಂದ ಸಾಕಷ್ಟು ಖುಷಿ ಹೊಂದಿದ್ದೆ’ ಎಂದು ಸೌರವ್ ಗಂಗೂಲಿ ಹೇಳಿದ್ದಾರೆ.

    ಇದನ್ನೂ ಓದಿ: VIDEO| ಸಚಿನ್​ ತೆಂಡುಲ್ಕರ್​ ಜೀವನ ಬದಲಿಸಿದ ಮೂವರು ಗುರುಗಳು ಯಾರು ಗೊತ್ತೇ?

    ಲಾರ್ಡ್ಸ್‌ನಲ್ಲಿ ನಡೆದ 2002ರ ನಾಟ್‌ವೆಸ್ಟ್ ಟ್ರೋಫಿ ಫೈನಲ್‌ನಲ್ಲಿ ಭಾರತ 326 ರನ್ ಬೆನ್ನಟ್ಟಿದ ಬಳಿಕ ಬಾಲ್ಕನಿಯಲ್ಲಿ ಶರ್ಟ್ ಬಿಚ್ಚಿ ಸಂಭ್ರಮಿಸಿದ್ದ ಕುರಿತು ಪ್ರತಿಕ್ರಿಯಿಸಿದ ದಾದಾ, ಇದೊಂದು ರೋಮಾಂಚನ ಕ್ಷಣ. ಆಂಥ ಗೆಲವು ಸಿಕ್ಕರೆ, ಸಂಭ್ರಮಿಸಲೇಬೇಕು. ಆ ಗೆಲುವಿನಲ್ಲಿ ನಾನು ಭಾಗಿಯಾಗಿದ್ದು ನನ್ನ ಪುಣ್ಯ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts