More

    ರಾಯಕೋಡ ಶಿವಲಿಂಗೇಶ್ವರ ಕಟ್ಟಿಮಠದಲ್ಲಿ ಶಿವಲಿಂಗ ಶಿವಾಚಾರ್ಯರ ಪುಣ್ಯಾರಾಧನೆ

    ಚಿಂಚೋಳಿ: ಇಂದಿನ ಆಧುನಿಕ ಯುಗದಲ್ಲಿ ಜನ ಸಾಮಾನ್ಯರಲ್ಲಿ ದೈವ ಭಕ್ತಿ, ಗುರು ಭಕ್ತಿ, ಹೆತ್ತವರ ಮೇಲೆ ಭಕ್ತಿ ಮರೆಯಾಗುತ್ತಿದೆ ಎಂದುಸೇಡಂ ಶಿವಶಂಕರ ಮಠದ ಶ್ರೀ ಶಿವಶಂಕರ ಶಿವಾಚಾರ್ಯರು ಹೇಳಿದರು.

    ತಾಲೂಕಿನ ರಾಯಕೋಡ ಗ್ರಾಮದ ಆರಾಧ್ಯ ದೈವ ಶ್ರೀ ಶಿವಲಿಂಗೇಶ್ವರ ಮಠದಲ್ಲಿ ಶ್ರೀ ಷ.ಬ್ರ ಶಿವಲಿಂಗೇಶ್ವರ ಶಿವಾಚಾರ್ಯರ ಪುಣ್ಯರಾಧನೆ ನಿಮಿತ್ಯ 10 ದಿನಗಳ ಕಾಲ ಶ್ರೀ ಗುಡ್ಡಾಪೂರದ ತಾಯಿ ಧಾನಮ್ಮ ದೇವಿಯ ಪುರಾಣ ಕಾರ್ಯಕ್ರಮಕ್ಕೆ ಅಮೃತ ಹಸ್ತದಿಂದ ಚಾಲನೆ ನೀಡಿ ಮಾತನಾಡಿದ ಅವರು, ತಾಯಿ ಧಾನಮ್ಮ ದೇವಿಯ ಮಹಿಮೆ ಪ್ರತಿಯೊಬ್ಬರು ಅರಿತು ಸನ್ಮಾರ್ಗದಲ್ಲಿ ಸಾಗಬೇಕು ಎಂದರು.

    ರಾಯಕೋಡ ಗ್ರಾಮದ ಶಿವಲಿಂಗೇಶ್ವರ ಕಟ್ಟಿಮಠದ ಇತಿಹಾಸ ಮರುಕಳಿಸಲು ಪೂಜ್ಯ ಶ್ರೀ ಷ.ಬ್ರ ರೇವಣಸಿದ್ದ ಶಿವಾಚಾರ್ಯರು ಸೇವೆ ಸವಿಯಬೇಕು. ದುಶ್ಚಟಗಳು ಶ್ರೀಗಳಿಗೆ ಅರ್ಪಿಸಿ ಸನ್ಮಾರ್ಗದ ದಾರಿಯಲ್ಲಿ ಸಾಗಬೇಕು ಎಂದು ಆಶಿರ್ವಚನ ನೀಡಿದರು.

    ಇದಕ್ಕೂ ಮುಂಚೆ ಕಲ್ಯಾಣ ಕರ್ನಾಟಕ ಸುಪ್ರಸಿದ್ಧ ಪುರಾಣ ಪ್ರವಚನಕಾರಾದ ಶ್ರೀ ವೇ.ಮೂರ್ತಿ ಶಂಭುಲಿಂಗ ಶಾಸ್ತ್ರಿ ರಟಕಲ್, ಕಟ್ಟಿಸಂಗಾವಿಯ ಶ್ರೀ ವೇ.ಮೂ.ವೀರಭದ್ರಯ್ಯ, ಮಹಾಂತೇಶ ಕಾಳಗಿ ಅವರಿಗೆ ಗ್ರಾಮಸ್ಥರು ಗೌರವ ಸತ್ಕಾರ ಮಾಡಿದರು.

    ಈ ವೇಳೆ ಗ್ರಾಮದ ಮುಖಂಡ ಸುರೇಶ್ ಪಾಟೀಲ್ ರಾಯಕೊಡ, ಭೂತಪೂರದ ಗುಣವಂತ ಪಾಟೀಲ್ ಸೇರಿದಂತೆ ರಾಯಕೊಡ ಸುತ್ತಮುತ್ತಲಿನ ಶ್ರೀಮಠದ ಭಕ್ತಾದಿಗಳು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts