More

    ವಿಠ್ಠಲ ಮಂದಿರದಲ್ಲಿ ಪುರಂದರ ದಾಸರ ಆರಾಧನೆ

    ಧಾರವಾಡ: ನಗರದ ದೇಸಾಯಿ ಗಲ್ಲಿಯ ವಿಠ್ಠಲ ಮಂದಿರದ ಪುರಂದರ ಮಂಟಪದಲ್ಲಿ ಪುರಂದರ ದಾಸರ ಆರಾಧನಾ ಮಹೋತ್ಸವ ಇತ್ತೀಚೆಗೆ ಶ್ರದ್ಧಾ ಭಕ್ತಿಯಿಂದ ಸಂಪನ್ನಗೊ೦ಡಿತು.
    ಪ೦. ರಾಮಾಚಾರ ಅಧ್ಯಾಪಕ ಮಹೋತ್ಸವಕ್ಕೆ ಚಾಲನೆ ನೀಡಿದರು. ಪೂರ್ವಾರಾಧನೆಯಂದು ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ಭಾವಚಿತ್ರವನ್ನು ಎನ್.ಕೆ. ಪಡಸಲಗಿ ಅನಾವರಣಗೊಳಿಸಿದರು. ನಂತರ ನಡೆದ ಹಾಡುಗಾರಿಕೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಅಮೃತಾ ಭಜನಾ ಮಂಡಳಿಗೆ ಶ್ರೀ ಗುರು ಪುರಂದರದಾಸ ವಿಠ್ಠಲ ಪ್ರಶಸ್ತಿ ನೀಡಲಾಯಿತು. ಶ್ರೀರಾಮ ಭಜನಾ ಮಂಡಳಿ ದ್ವಿತೀಯ, ಸಿಂಗಾರಸಖಿ ಭಜನಾ ಮಂಡಳಿ ತೃತೀಯ ಸ್ಥಾನ ಪಡೆಯಿತು.
    ಮಧ್ಯಾರಾಧನೆಯಂದು ನಗರದ ಪ್ರಮುಖ ಓಣಿಗಳಲ್ಲಿ ಪುರಂದರ ಭಾವಚಿತ್ರ, ಭಜನಾ ಮಂಡಳಿಗಳ ಸಂಕೀರ್ತನೆಯೊAದಿಗೆ ಯಾಯಿವಾರ ಕಾರ್ಯಕ್ರಮ ನಡೆಯಿತು. ಅಶ್ವತ್ಥಾಚಾರ್ಯ ಕುಲಕರ್ಣಿ ಹಾಗೂ ಮಂಜುಳಾ ಕುಲಕರ್ಣಿ ನೇತೃತ್ವ ವಹಿಸಿದ್ದರು. ಭಜನಾ ಮಂಡಳಿಗಳ ಸ್ಪರ್ಧೆಯಲ್ಲಿ ರುಕ್ಮಿಣಿ ಪಾಂಡುರAಗ ಭಜನಾ ಮಂಡಳಿ ಪ್ರಥಮ ಸ್ಥಾನ ಪಡೆದು ಶ್ರೀ ಗುರು ಪುರಂದರ ಪ್ರಶಸ್ತಿಗೆ ಭಾಜನವಾಯಿತು. ಸೀತಾರಾಮ ಭಜನಾ ಮಂಡಳಿ ದ್ವಿತೀಯ, ಗೀತಾ ಭಜನಾ ಮಂಡಳಿ ತೃತೀಯ ಸ್ಥಾನ ಪಡೆಯಿತು. ಶ್ರೀ ಸತ್ಯಪ್ರಮೋದ ಭಜನಾ ಮಂಡಳಿ ಹಾಗೂ ಸ್ನೇಹ ಬಳಗ ಮಂಡಳಿಗಳು ಸಮಾಧಾನಕರ ಬಹುಮಾನ ಪಡೆದವು.
    ಅಖಿಲ ಭಾರತೀಯ ಬ್ರಾಹ್ಮಣ ಸಭಾದ ಉಪಾಧ್ಯಕ್ಷ ಎನ್.ಆರ್. ಕುಲಕರ್ಣಿ ಪ್ರಶಸ್ತಿ ಪ್ರದಾನ ಮಾಡಿದರು. ಹಿರಿಯ ಸಾಹಿತಿ ಡಾ. ಜಿ.ಎಂ. ಹೆಗಡೆ, ಡಾ. ಶ್ರೀಧರ ಕುಲಕರ್ಣಿ, ಉದಯ ದೇಶಪಾಂಡೆ, ರಾಮಚಂದ್ರ ಇಬ್ರಾಹಿಂಪುರ, ಇತರರಿದ್ದರು.
    ಸಮಾರೋಪದಲ್ಲಿ ಪಂ. ಕೆ.ಎಂ. ಕಲಮಂಗಿ ಪುರಂದರ ದಾಸರ ಮಹಿಮೆಯನ್ನು ವಿವರಿಸಿದರು. ಹುಬ್ಬಳ್ಳಿಯ ಅಶ್ವತ್ಥಾಚಾರ್ಯ ಕುಲಕರ್ಣಿ ಅವರಿಗೆ ವಿಶೇಷ ಗುರು ಪುರಂದರ ಪ್ರಶಸ್ತಿ ಪ್ರದಾನ ಮಾಡಲಾಯಿತು.
    ಡಾ. ಎಂ.ಎನ್. ಸಿದ್ಧಾಂತಿ, ಡಾ. ಎಚ್.ಎ. ಕಟ್ಟಿ, ಪ್ರೊ. ಆರ್.ಬಿ. ಗುತ್ತಲ, ಎಸ್.ಬಿ. ಗುತ್ತಲ, ಕೆ.ಆರ್. ದೇಸಾಯಿ, ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts