ಲೈವ್​ನಲ್ಲೇ ವಿಷ ಕುಡಿದ ಅರ್ಚಕ! 3 ದಿನದ ಬಳಿಕ ಸೆಲ್ಫಿವಿಡಿಯೋ ವೈರಲ್​, ಡೆತ್​ನೋಟ್​ನಲ್ಲಿದೆ ಸ್ಫೋಟಕ ರಹಸ್ಯ

ಚಿಕ್ಕಬಳ್ಳಾಪುರ: ತಾಲೂಕಿನಲ್ಲಿ ಮೂರು ದಿನದ ಹಿಂದೆ ನೇಣುಬಿಗಿದುಕೊಂಡು ಮೃತಪಟ್ಟಿದ್ದ ಯುವಕನ ಅಂತ್ಯಸಂಸ್ಕಾರ ಅಂದೇ ಮುಗಿದಿದೆ. ಆತ ಸಾವಿಗೂ ಮುನ್ನ ವಿಷ ಕುಡಿಯುತ್ತ ಮಾಡಿದ್ದ ಸೆಲ್ಫಿ ವಿಡಿಯೋ ಇದೀಗ ವೈರಲ್​ ಆಗಿದ್ದು, ಡೆತ್​ನೋಟ್​ನಲ್ಲಿ ಬಡ್ಡಿ ದಂಧೆಯ ಕರಾಳತೆಯ ಇಂಚಿಂಚೂ ವಿವರಿಸಲಾಗಿದೆ.

‘ಚಿಕ್ಕಬಳ್ಳಾಪುರ ತಾಲೂಕಿನ ಸುಲ್ತಾನ್​ಪೇಟೆ ನಿವಾಸಿ ಕೆ.ವಿ.ರಾಘವೇಂದ್ರ, ಆತ್ಮಹತ್ಯೆಗೆ ಮುನ್ನ ಸೆಲ್ಫಿ ವಿಡಿಯೋ ಮಾಡಿದ್ದ. ‘ನನ್ನ ಹೆಸರು ಕೆ.ವಿ. ರಾಘವೇಂದ್ರ. ನಾನು ನಂದಿ ಗ್ರಾಮದ ಮಾರಮ್ಮ ಮತ್ತು ಸುಲ್ತಾನ್​ಪೇಟೆಯ ಸಪ್ಪಲಮ್ಮ ದೇವಸ್ಥಾನದ ಪೂಜಾರಿ. 2015-16ರಲ್ಲಿ ಅಕ್ಷತಾ ಕೋ ಆಪರೇಟಿವ್ ಲಿಮಿಟೆಡ್‌ ಎಂಬ ಖಾಸಗಿ ಫೈನಾನ್ಸ್​ನಲ್ಲಿ ಕೆಲಸ ಮಾಡುತ್ತಿದ್ದೆ. ಸಾರ್ವಜನಿಕರಿಂದ ಫೈನಾನ್ಸ್ ಕಂಪನಿಗೆ ಹಣ ಕಟ್ಟಿಸಿದ್ದೆ, ಆದ್ರೆ ಆ ಕಂಪನಿ ಮುಚ್ಚಿದಾಗ ಹಣ ಕಟ್ಟಿದವರಿಗೆ ಹಣ ವಾಪಸ್​ ಕೊಡಬೇಕಾಗಿ ಬಂತು. ಹಾಗಾಗಿ ಹಲವರ ಬಳಿ 8 ಲಕ್ಷ ರೂಪಾಯಿ ಸಾಲ ಮಾಡಿದ್ದೆ. ಸಾಲಗಾರರು ಬಡ್ಡಿಗೆ ಬಡ್ಡಿ ಸೇರಿಸಿ ಮೀಟರ್ ಬಡ್ಡಿ ಲೆಕ್ಕದಲ್ಲಿ 1 ರಿಂದ 2 ಕೋಟಿ ರೂಪಾಯಿ ನೀಡಬೇಕೆಂದು ಕಿರುಕಳ ನೀಡುತ್ತಿದ್ದಾರೆ…’  ಇದನ್ನೂ ಓದಿರಿ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಎಫ್​ಐಆರ್​ ದಾಖಲು

ಲೈವ್​ನಲ್ಲೇ ವಿಷ ಕುಡಿದ ಅರ್ಚಕ! 3 ದಿನದ ಬಳಿಕ ಸೆಲ್ಫಿವಿಡಿಯೋ ವೈರಲ್​, ಡೆತ್​ನೋಟ್​ನಲ್ಲಿದೆ ಸ್ಫೋಟಕ ರಹಸ್ಯ‘ಸುಲ್ತಾನ ಪೇಟೆಯ ಗುರುಮೂರ್ತಿ ಬಳಿ 2 ಮತ್ತು 5 ಲಕ್ಷ ರೂಪಾಯಿ ಮೌಲ್ಯದ ಚೀಟಿಯನ್ನು 2011 ರಿಂದ ಹಾಕಿದ್ದು, ಅದಕ್ಕೆ ಶ್ಯೂರಿಟಿಯಾಗಿ 2 ರಿಂದ 3 ಚೆಕ್ ಮತ್ತು ಅನ್ ಡಿಮಾಂಡ್ ನೋಟ್​ಗಳಿಗೆ ಸಹಿ ಹಾಕಿದ್ದೇನೆ. ನನ್ನ ತಾಯಿಯ ಚೆಕ್ ಲೀಫ್ ಒಂದನ್ನು ಕದ್ದು ನಾನೇ ಸಹಿ ಮಾಡಿ ಕೊಟ್ಟಿದ್ದೇನೆ. ಪಿಎಲ್​ಡಿ ಬ್ಯಾಂಕ್ ನಿರ್ದೇಶಕಿ ಅಕ್ಕಲಮ್ಮರ ಮಗ ನಂದಿ ವೈ.ಮಂಜುನಾಥ್ ಅಲಿಯಾಸ್ ಜೆಸಿಬಿ ಮಂಜು ಅವರಿಗೆ 4 ಚೆಕ್ ನೀಡಿ ಒಂದು ಲಕ್ಷ ಹಣ ಪಡೆದಿದ್ದೆ. ಅವರು 50 ಲಕ್ಷ ರೂ. ನೀಡಲು ಬೇಡಿಕೆ, ಗುರುಮೂರ್ತಿಯಿಂದ 80 ಲಕ್ಷಕ್ಕೆ, ರಾಜೇಯೇಂದ್ರ ಬಾಬು 20ರಿಂದ 25 ಲಕ್ಷಕ್ಕೆ ಬೇಡಿಕೆ, ಅದೇ ರೀತಿ ಮೀಟರ್ ಬಡ್ಡಿ ದಂಧೆಯ ಎಸ್.ಎಲ್.ಎನ್. ಫೈನಾನ್ಸ್​ನ ಲೆಕ್ಚರ್ ರಾಮಚಂದ್ರ, ಬೀಟ್ ಮುನಿರಾಜು ಅಲಿಯಾಸ್ ಎನ್.ಎಂ.ಮುನಿರಾಜು ಮತ್ತು ನರಿಯಣ್ಣ ಅಲಿಯಾಸ್ ಎನ್.ಜೆ. ನರೇಂದ್ರಬಾಬು S/O ಜಯಚಂದ್ರ ಇವರುಗಳು ಸೇರಿ ಚಿತ್ರಹಿಂಸೆ ಮತ್ತು ಕೊಡಬಾರದ ಕಿರುಕಳ ನೀಡಿರುತ್ತಾರೆ. ಅದರಲ್ಲೂ ನರಿಯಣ್ಣ ಅಲಿಯಾಸ್ ಎನ್.ಜೆ.ನರೇಂದ್ರಬಾಬು S/O ಜಯಚಂದ್ರ ಅವರು ನನ್ನನ್ನು ಕತ್ತರಿಸಿ ಹಾಕುವುದಾಗಿ ಪ್ರಾಣ ಬೆದರಿಕೆ ಹಾಕಿದ್ದಾರೆ. ಇದರಿಂದ ಮನನೊಂದು ನನ್ನ ಮನೆಯಲ್ಲೇ ನೇಣಿಗೆ ಶರಣಾಗುತ್ತಿದ್ದೇನೆ. ನನ್ನ ಸಾವಿಗೆ ನ್ಯಾಯಾಧೀಶರು ಮತ್ತು ಊರಿನ ಗ್ರಾಮಸ್ಥರು ನ್ಯಾಯ ಕೊಡಿಸಬೇಕು. ನನ್ನ ಸಾವಿಗೆ ಕಾರಣರಾದವರನ್ನು ಬಿಡದೆ ಶಿಕ್ಷಿಸಬೇಕು…’ ಎನ್ನುತ್ತಾ ರಾಘವೇಂದ್ರ ಅಂಗಲಾಚಿದ್ದಾನೆ.  ಇದನ್ನೂ ಓದಿರಿ ಶರವೇಗದ ರೈಲಿನ ಎದುರು ಧರ್ಮೇಗೌಡ ನಿಂತಿದ್ಹೇಗೆ? ರೈಲು ಚಾಲಕ ಬಾಯ್ಬಿಟ್ಟ ಭಯಾನಕ ಸತ್ಯ

ಅಲ್ಲದೆ ರಾಘವೇಂದ್ರ, ತನ್ನ ತಂದೆ-ತಾಯಿ ವೆಂಕಟೇಶ್ ಮೂರ್ತಿ-ಸಾವಿತ್ರಮ್ಮ ಮತ್ತು ಬೈರನಾಯಕನಹಳ್ಳಿಯ ರೂಪ ಜಗದೀಶ್ ದಂಪತಿಯ ಕ್ಷಮೆಯನ್ನೂ ಕೋರಿದ್ದಾನೆ. ಇದಕ್ಕೂ ಮೊದಲು ವಿಷ ಸೇವಿಸಲು ಯತ್ನಿಸಿ ಸ್ವಲ್ಪ ವಿಷ ಕುಡಿದು ಬಾಯಿ ಸುಡುತ್ತದೆ ಎಂದಿದ್ದಾನೆ. ಇದೆಲ್ಲವೂ ಸೆಲ್ಫಿ ವಿಡಿಯೋದಲ್ಲಿದೆ. ಅಲ್ಲದೆ ಡೆತ್ ನೋಟ್ ಅನ್ನೂ ಬರೆದಿದ್ದಾನೆ. ಬಳಿಕ ಮನೆಯಲ್ಲೇ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇದೆಲ್ಲ ನಡೆದಿರುವುದು ಕಳೆದ ಮಂಗಳವಾರ(ಜ.5). ಆತನ ಶವಸಂಸ್ಕಾರ ಕಾರ್ಯವೂ ಮುಗಿದಿದೆ. ಈ ಬಗ್ಗೆ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಾಗಿಲ್ಲ.

ಪೂಜಾರಿ ರಾಘವೇಂದ್ರ ಸಾವಿಗೂ ಮುನ್ನ ಮಾಡಿದ್ದ ಸೆಲ್ಫಿ ಸೂಸೈಡ್ ವಿಡಿಯೋ ಇದೀಗ ಅಂದರೆ ಗುರುವಾರದಿಂದ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. (ದಿಗ್ವಿಜಯ ನ್ಯೂಸ್)

ಬೆಂಕಿ ಹಚ್ಚಿಕೊಂಡು ಸಾವಿನ ಮನೆಯ ಕದ ತಟ್ಟಿದ 22ರ ಯುವತಿ! ಆ ರಾತ್ರಿ ಏನಾಯ್ತು?

ಹೊಟ್ಟೆಗೆ ಕಲ್ಲು ಕಟ್ಟಿಕೊಂಡು ಬಾವಿಗೆ ಹಾರಿ ಅಣ್ಣ-ತಮ್ಮ ಆತ್ಮಹತ್ಯೆ! ಕಾರಣ ಕೇಳಿದ್ರೆ ಶಾಕ್​ ಆಗ್ತೀರಿ

ನದಿ ದಡದಲ್ಲಿ ಸಿಕ್ಕ ಬೈಕ್​, ರಕ್ತದ ಕಲೆಯನ್ನ ಬೆನ್ನಟ್ಟಿದ್ದವರಿಗೆ ಕಾದಿತ್ತು ಶಾಕ್​!

Share This Article

ಕರಗಿದ ಮೇಣದಬತ್ತಿಯಿಂದ ಏನೆಲ್ಲಾ ಉಪಯೋಗ; ಬಿಸಾಡುವ ಬದಲು ಮರುಬಳಕೆ ಮಾಡಿ..

ಮನೆಯಲ್ಲಿ ಉಪಯೋಗಿಸುವ ಎಷ್ಟೋ ವಸ್ತುಗಳು ಕೆಲಕಾಲದ ನಂತರ ಹಳೆಯದಾಗುತ್ತದೆ. ಮತ್ತೆ ಕೆಲವು ಬಳಸಿದ ನಂತರ ನಾಶವಾಗುತ್ತದೆ.…

ಈರುಳ್ಳಿ ಸಿಪ್ಪೆಯನ್ನು ಎಸೆಯುವ ತಪ್ಪನ್ನು ಮಾಡಬೇಡಿ! ಸಿಪ್ಪೆ ವೇಸ್ಟ್​ ಎಂದು ಬಿಸಾಡೋ ಬದಲು ಹೀಗೆ ಮಾಡಿ

ಯಾವುದೇ ಅಡುಗೆ ಮಾಡಿದ್ರು ಈರುಳ್ಳಿ ಬೇಕೆ... ಬೇಕು. ಈರುಳ್ಳಿಯು ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ, ಆದರೆ…

ನಿಮ್ಮ ಅಂಗೈನಲ್ಲಿ ತ್ರಿಶೂಲ ಗುರುತು ಇದೆಯಾ ನೋಡಿ… ಇದರರ್ಥ ತಿಳಿದ್ರೆ ನಿಮ್ಮ ಹುಬ್ಬೇರೋದು ಖಚಿತ!

ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…