More

    ಟೆನಿಸ್ ತಾರೆ ಒಸಾಕಾ ವಿಶ್ವದ ಶ್ರೀಮಂತ ಮಹಿಳಾ ಕ್ರೀಡಾಪಟು

    ನ್ಯೂಯಾರ್ಕ್: ಜಪಾನ್ ಟೆನಿಸ್ ತಾರೆ ನವೊಮಿ ಒಸಾಕಾ ವಿಶ್ವದ ಶ್ರೀಮಂತ ಮಹಿಳಾ ಕ್ರೀಡಾಪಟು ಎನಿಸಿದ್ದಾರೆ. ಫೋರ್ಬ್ಸ್ ಮ್ಯಾಗಝಿನ್ ವರದಿಯ ಪ್ರಕಾರ, 22 ವರ್ಷದ ಒಸಾಕಾ ಕಳೆದ 12 ತಿಂಗಳಲ್ಲಿ ಬರೋಬ್ಬರಿ 284 ಕೋಟಿ ರೂಪಾಯಿ ಸಂಪಾದನೆ ಮಾಡಿದ್ದಾರೆ. ಈ ಮೂಲಕ ಅವರು ಅಮೆರಿಕದ ಅನುಭವಿ ಟೆನಿಸ್ ತಾರೆ ಸೆರೇನಾ ವಿಲಿಯಮ್ಸ್ ಅವರನ್ನು ಹಿಂದಿಕ್ಕಿದ ಸಾಧನೆ ಮಾಡಿದ್ದಾರೆ.

    ಇದನ್ನೂ ಓದಿ: ಕಿವೀಸ್‌ಗೆ 65 ವರ್ಷಗಳಿಂದ ಕಾಡುತ್ತಿರುವ ದಾಖಲೆ ಯಾವುದು?

    ಎರಡು ಗ್ರಾಂಡ್ ಸ್ಲಾಂ ಪ್ರಶಸ್ತಿಗಳ ಒಡತಿಯಾಗಿರುವ ಏಷ್ಯನ್ ತಾರೆ ಒಸಾಕಾ, ಕಳೆದೊಂದು ವರ್ಷದಲ್ಲಿ ಸೆರೇನಾಗಿಂತ 10 ಕೋಟಿ ರೂ. ಅಧಿಕ ಸಂಪಾದಿಸಿದ್ದಾರೆ. ಫೋರ್ಬ್ಸ್ ಪಟ್ಟಿ ಮಾಡಿರುವ ವಿಶ್ವದ 100 ಶ್ರೀಮಂತ ಕ್ರೀಡಾಪಟುಗಳ ಪಟ್ಟಿಯಲ್ಲಿ ಒಸಾಕಾ 29ನೇ ಸ್ಥಾನ ಪಡೆದಿದ್ದರೆ, 23 ಗ್ರಾಂಡ್ ಸ್ಲಾಂಗಳ ಒಡತಿ ಸೆರೇನಾ ಅದಕ್ಕಿಂತ 4 ಸ್ಥಾನ ಹಿಂದಿದ್ದಾರೆ. ಇದರ ಪೂರ್ಣ ಪಟ್ಟಿ ಮುಂದಿನ ವಾರ ಬಿಡುಗಡೆಯಾಗಲಿದೆ. 2016ರ ಬಳಿಕ ಇದೇ ಮೊದಲ ಬಾರಿಗೆ ಈ ಪಟ್ಟಿಯಲ್ಲಿ ಇಬ್ಬರು ಮಹಿಳಾ ಕ್ರೀಡಾಪಟುಗಳು ಸ್ಥಾನ ಪಡೆದಿದ್ದಾರೆ ಎಂದು ಮ್ಯಾಗಝಿನ್ ತಿಳಿಸಿದೆ. ಒಸಾಕಾ, ಸೆರೇನಾ ಇಬ್ಬರೂ ವರ್ಷವೊಂದರಲ್ಲಿ ಮಹಿಳಾ ಕ್ರೀಡಾಪಟು ಸಂಪಾದಿಸಿದ ಗರಿಷ್ಠ ಮೊತ್ತದ ದಾಖಲೆ ಬರೆದಿದ್ದಾರೆ. ಇದಕ್ಕೆ ಮುನ್ನ 2015ರಲ್ಲಿ ಶರಪೋವಾ 225 ಕೋಟಿ ರೂ. ಸಂಪಾದಿಸಿದ್ದು ದಾಖಲೆಯಾಗಿತ್ತು.

    ಇದನ್ನೂ ಓದಿ: ಈ ದೇಶದಲ್ಲಿ ಕರೊನಾ ಭಯವಿಲ್ಲದೆ ಕ್ರಿಕೆಟ್ ಶುರುವಾಗಿದೆ!

    38 ವರ್ಷದ ಸೆರೇನಾ ಕಳೆದ 4 ವರ್ಷಗಳಿಂದ ವಿಶ್ವದ ಶ್ರೀಮಂತ ಮಹಿಳಾ ಕ್ರೀಡಾಪಟು ಎನಿಸಿದ್ದರು. ಅದಕ್ಕೆ ಮುನ್ನ 5 ವರ್ಷಗಳ ಕಾಲ ರಷ್ಯಾದ ಟೆನಿಸ್ ಬೆಡಗಿ ಮರಿಯಾ ಶರಪೋವಾ ಈ ಸ್ಥಾನ ಅಲಂಕರಿಸಿದ್ದರು. ಫೋರ್ಬ್ಸ್ ಮ್ಯಾಗಝಿನ್ 1990ರಿಂದ ವಿಶ್ವದ ಶ್ರೀಮಂತ ಮಹಿಳಾ ಕ್ರೀಡಾಪಟುಗಳ ಪಟ್ಟಿ ತಯಾರಿಸುತ್ತಿದ್ದು, ಪ್ರತಿ ವರ್ಷವೂ ಟೆನಿಸ್ ಆಟಗಾರ್ತಿಯರೇ ಅದರಲ್ಲಿ ಅಗ್ರಸ್ಥಾನ ಅಲಂಕರಿಸಿದ್ದಾರೆ.

    ಟೆನಿಸ್ ತಾರೆ ಒಸಾಕಾ ವಿಶ್ವದ ಶ್ರೀಮಂತ ಮಹಿಳಾ ಕ್ರೀಡಾಪಟು

    ಒಸಾಕಾ 2018ರ ಯುಎಸ್ ಓಪನ್‌ನಲ್ಲಿ ಸೆರೇನಾ ವಿರುದ್ಧವೇ ಗೆದ್ದು ಚೊಚ್ಚಲ ಗ್ರಾಂಡ್ ಸ್ಲಾಂ ವಶಪಡಿಸಿಕೊಂಡಿದ್ದರು. 1999ರಲ್ಲಿ ಸೆರೇನಾ ಚೊಚ್ಚಲ ಗ್ರಾಂಡ್ ಸ್ಲಾಂ ಪ್ರಶಸ್ತಿ ಜಯಿಸಿದ್ದಾಗ ಒಸಾಕಾಗೆ ಕೇವಲ 1 ವರ್ಷ ವಯಸ್ಸಾಗಿತ್ತು. ವೃತ್ತಿಜೀವನದಲ್ಲಿ ಸೆರೇನಾ ಬಹುಮಾನ ಮೊತ್ತ ಮತ್ತು ಜಾಹೀರಾತು ಒಪ್ಪಂದಗಳಿಂದ ಬರೋಬ್ಬರಿ 4,500 ಕೋಟಿ ರೂ.ಗೂ ಅಧಿಕ ಮೊತ್ತ ಸಂಪಾದಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts