More

    ವಿಶ್ವ ತಂಬಾಕು ಬೆಳೆಗಾರರ ದಿನಾಚರಣೆ

    ಎಚ್.ಡಿ.ಕೋಟೆ: ತಾಲೂಕಿನ ನಂಜನಾಯಕನಹಳ್ಳಿ ಗ್ರಾಮದಲ್ಲಿ ಶನಿವಾರ ವಿಶ್ವ ತಂಬಾಕು ಬೆಳೆಗಾರರ ದಿನ ಆಚರಿಸಲಾಯಿತು.

    ಪ್ರಗತಿಪರ ರೈತರಾದ ಚಿನ್ಮಮುತ್ತು ಮಾತನಾಡಿ, ತಂಬಾಕು ಬೆಳೆ ದೇಶದ 4.57 ಕೋಟಿ ಜನರಿಗೆ ನೇರ ಮತ್ತು ಪರೋಕ್ಷವಾಗಿ ಉದ್ಯೋಗವನ್ನು ಒದಗಿಸುತ್ತಿದೆ. ತಂಬಾಕು ಬೆಳೆಗಾರರು ಗುಣಮಟ್ಟದ ತಂಬಾಕು ಬೆಳೆದು ಆರ್ಥಿಕ ಲಾಭ ಗಳಿಸುವತ್ತ ಆಸಕ್ತಿ ತೋರಬೇಕು. ಗುಣಮಟ್ಟದ ತಂಬಾಕು ಬೆಳೆಯಿಂದ ರೈತರು ಉತ್ತಮ ಆದಾಯ ಗಳಿಸಬಹುದಾಗಿದೆ ಎಂದರು.

    ಪ್ರಗತಿಪರ ರೈತ ಮಾದೇವಸ್ವಾಮಿ ಮಾತನಾಡಿ, ತಂಬಾಕು ಬೆಳೆಯಲ್ಲಿ ಸಮಗ್ರ ಸಸ್ಯ ಸಂರಕ್ಷಣಾ ಕಾರ್ಯಕ್ರಮಗಳನ್ನು ಅಳವಡಿಸಿಕೊಳ್ಳಬೇಕು. ಈ ಮೂಲಕ ತಂಬಾಕಿನಲ್ಲಿ ಕೀಟನಾಶಕಗಳ ಅವಶೇಷಗಳನ್ನು ಕಡಿಮೆ ಮಾಡುವುದು ಮತ್ತು ಬೆಳೆ ಇಳುವರಿ ಹೆಚ್ಚಿಸಲು ಕಡಿಮೆ ವೆಚ್ಚದಲ್ಲಿ ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವುದು ಮುಖ್ಯ ಎಂದರು.

    ಕಾರ್ಯಕ್ರಮದಲ್ಲಿ ರೈತರಾದ ಮಲ್ಲೇಶ್, ಪ್ರಭುಸ್ವಾಮಿ, ಶಿವಣ್ಣೇಗೌಡ, ಪುಟ್ಟಬಸಪ್ಪ, ರವಿ, ಚೌಡೇಗೌಡ ಇತರರು ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts