More

    ಅಭಿವೃದ್ಧಿಗೆ ಪೂರಕವಾದ ವಿಜ್ಞಾನ: ಬೆಂಗಳೂರು ಕೃಷಿ ವಿವಿ ಕುಲಪತಿ ಡಾ.ಎಸ್.ಸಿ.ಸುರೇಶ್ ಅಭಿಮತ

    ಮಂಡ್ಯ: ವಿಜ್ಞಾನ ಮತ್ತು ವೈಜ್ಞಾನಿಕ ಸಂಶೋಧನೆಗಳು ಅಭಿವೃದ್ದಿಗೆ ಪೂರಕವಾಗಿದೆ ಎಂದು ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ಕುಲಪತಿ ಡಾ.ಎಸ್.ಸಿ.ಸುರೇಶ್ ಹೇಳಿದರು.
    ನಗರದ ಎಇಟಿ ನರ್ಸಿಂಗ್ ಕಾಲೇಜು ಆವರಣದಲ್ಲಿ ನಂಜಮ್ಮ ಮೋಟೆಗೌಡ ಚಾರಿಟಬಲ್ ಟ್ರಸ್ಟ್ ಕೊಪ್ಪ ಹಾಗೂ ಕೃಷಿಕ ಲಯನ್ಸ್ ಸಂಸ್ಥೆ ಸಹಯೋಗದಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಸರ್ ಸಿ.ವಿ ರಾಮನ್ ನೆನಪು, ಪವಾಡ ರಹಸ್ಯ ಬಯಲು ಹಾಗೂ ಅಭಿನಂದನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
    ಪ್ರಸ್ತುತ ವಿಜ್ಞಾನ ಮತ್ತು ತಂತ್ರಜ್ಞಾನದಿಂದ ಭಾರತ ಸಾಕಷ್ಟು ಸವಾಲು ಮತ್ತು ಸಮಸ್ಯೆಗಳಿಂದ ಪಾರಾಗುತ್ತಿದೆ. ಇದಕ್ಕೆ ವಿಜ್ಞಾನಿಗಳ ಪರಿಶ್ರಮ, ಕೊಡುಗೆ ಅಪಾರ. ಸಮಾಜಕ್ಕಾಗಿ ಹಾಗೂ ಅಭಿವೃದ್ದಿಗಾಗಿ ದುಡಿದಂತಹ ವ್ಯಕ್ತಿಗಳನ್ನು ಜನರು ಸದಾ ಸ್ಮರಿಸುತ್ತಾರೆ. ಯಾರು ನನ್ನಮನೆ, ನನ್ನ ಕುಟುಂಬ, ನಮ್ಮ ಮಕ್ಕಳು ಎಂದು ದುಡಿದು ಕಣ್ಮರೆಯಾಗಿರುತ್ತಾರೋ ಅಂತಹವರನ್ನು ಈ ಸಮಾಜ ಗುರುತಿಸಿ ಸ್ಮರಿಸುವುದಿಲ್ಲ ಎಂದರು.
    ಕೃಷಿಕ ಲಯನ್ಸ್ ಸಂಸ್ಥೆಯ ಆಡಳಿತಾಧಿಕಾರಿ ಕೆ.ಟಿ.ಹನುಮಂತು ಮಾತನಾಡಿ, ಏಷ್ಯಾ ಖಂಡದಲ್ಲಿ ಮೊದಲ ಬಾರಿಗೆ ನೋಬೆಲ್ ಪ್ರಶಸ್ತಿ ದೊರಕಿಸಿಕೊಟ್ಟ ಕೀರ್ತಿ ಭಾರತೀಯ ವಿಜ್ಞಾನಿ ಸರ್ ಸಿ.ವಿ.ರಾಮನ್ ಅವರಿಗೆ ಸಲ್ಲುತ್ತದೆ. ಸಾಹಿತ್ಯ ಕ್ಷೇತ್ರಕ್ಕೆ ರವಿಂದ್ರನಾಥ್ ಠ್ಯಾಗೋರ್ ಅವರಿಗೆ ಬಂದಿದೆ ಎಂದರು.
    ಜನಪರ ಟ್ರಸ್ಟ್‌ನ ಅಧ್ಯಕ್ಷೆ ವೈ.ಎಚ್.ರತ್ನಮ್ಮ, ಕೃಷಿಕ ಲಯನ್ಸ್ ಸಂಸ್ಥೆ ನಿರ್ದೇಶಕ ಎಸ್.ಎನ್.ಕೃಷ್ಣಪ್ಪ, ಎಇಟಿ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲೆ ನಂದಿನಿ ಇತರರಿದ್ದರು. ಇದೇ ಸಂದರ್ಭದಲ್ಲಿ ಕೃಷಿ ವಿಜ್ಞಾನಿ ಡಾ.ಎಸ್.ಎನ್.ಸ್ವಾಮಿಗೌಡ ಮತ್ತು ಕುಲಪತಿ ಡಾ.ಎಸ್.ಸಿ.ಸುರೇಶ್ ಅವರನ್ನು ಅಭಿನಂದಿಸಲಾಯಿತು. ವಿಜ್ಞಾನ ವಿಷಯ ಪರಿವೀಕ್ಷಕರಾದ ಲೋಕೇಶ್ ಮತ್ತು ನಂಜರಾಜು ಅವರು ಪವಾಡ ರಹಸ್ಯ ಬಯಲು ಅಭಿಯಾನ ನಡೆಸಿಕೊಟ್ಟರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts