More

    ವಿಶ್ವದ ಅನೇಕ ರಾಷ್ಟ್ರಗಳಲ್ಲಿ ಭೌದ್ಧ ಧರ್ಮ ಆಚರಣೆ

    ಕನಕಗಿರಿ: ವಿಶ್ವಕ್ಕೆ ಶಾಂತಿ ಮಂತ್ರವನ್ನು ಭೌದ್ಧ ಧರ್ಮ ಸಾರಿದೆ ಎಂದು ದಲಿತ ಯುವ ಮುಖಂಡ ನೀಲಕಂಠ ಬಡಿಗೇರ್ ಹೇಳಿದರು.

    ಇದನ್ನೂ ಓದಿ: ಜಪಾನ್‌ ಬಾಹ್ಯಾಕಾಶ ಮಹತ್ವಾಕಾಂಕ್ಷೆಗಳಿಗೆ ವರವಾಯ್ತು ‘ಸಗಣಿ’?: ಇದೇ ಮೊದಲಬಾರಿಗೆ ರಾಕೆಟ್ ಇಂಜಿನ್​ಗೆ ‘ಬಯೋಗ್ಯಾಸ್’ ಬಳಕೆ!

    ಪಟ್ಟಣದ ಬುದ್ಧ ಸರ್ಕಲ್‌ನಲ್ಲಿ ನಡೆದ ಭೌದ್ಧ ಧಮ್ಮ ಧ್ವಜ ದಿನಾಚರಣೆಯಲ್ಲಿ ಸೋಮವಾರ ಮಾತನಾಡಿದರು. ಕ್ರಿ.ಪೂ.6ನೇ ಶತಮಾನದಲ್ಲಿ ಬುದ್ಧನಿಂದ ಜನ್ಮ ತಾಳಿದ ಭೌದ್ಧ ಧರ್ಮವು ವಿಶ್ವದ ಅನೇಕ ರಾಷ್ಟ್ರಗಳಲ್ಲಿ ಆಚರಣೆಯಲ್ಲಿದೆ. ಬುದ್ಧನ ಶಾಂತಿ ಸಂದೇಶ, ಆಚರಣೆಗಳನ್ನು ರಾಜ ಅಶೋಕ ಸೇರಿ ಹಲವು ರಾಜಮನೆತನಗಳು ಒಪ್ಪಿಕೊಂಡಿದ್ದವು.

    ಭೌದ್ಧ ಧಮ್ಮ ಪ್ರಚಾರಕ್ಕಾಗಿ ಅನ್ಯ ದೇಶಗಳಿಗೆ ಅನುಯಾಯಿಗಳನ್ನು ಕಳಿಸಿದ್ದರು. ಈ ದಿನವನ್ನು 19ನೇ ಶತಮಾನ ಉತ್ತರಾರ್ಧದಿಂದ ಸಾರ್ವರ್ತಿಕವಾಗಿ ಆಚರಿಸಿಕೊಂಡು ಬರಲಾಗುತ್ತಿದೆ. ಬುದ್ಧನ ಪಂಚಶೀಲ ತತ್ವದಡಿ ಧ್ವಜದ 6 ಬಣ್ಣಗಳು ಬುದ್ಧನ ದೇಹದಿಂದ ಹೊರಹೊಮ್ಮಿದ ಬಣ್ಣಗಳನ್ನು ಪ್ರತಿನಿಧಿಸುತ್ತವೆ.

    ನೀಲಿ-ಶಾಂತಿ ಹಾಗೂ ಪ್ರೇಮ ಸಂಕೇತ, ಹಳದಿ ಬಣ್ಣ- ಮಧ್ಯಮ ಮಾರ್ಗದ ಬಗ್ಗೆ ತಿಳಿಸಿದರೆ, ಕೆಂಪು-ಸಾಧನೆ, ಅದೃಷ್ಟ ಮತ್ತು ಘನತೆ, ಬಿಳಿ-ಶುದ್ಧತೆ, ಕಿತ್ತಳೆ ಬಣ್ಣ-ಬುದ್ಧನ ಬೋಧನೆಯ ಬುದ್ದಿವಂತಿಕೆ ಸಂಕೇತವಾಗಿವೆ. ಈ ಧ್ವಜ ದಿನಾಚರಣೆಯನ್ನು ವೈಶಾಖ ಪೂರ್ಣಿಮೆಯ ದಿನದಂದು ಆಚರಿಸಲಾಗುತ್ತಿದೆ. ಇದನ್ನು ಅಂತರಾಷ್ಟ್ರೀಯ ಭೌದ್ಧ ಧರ್ಮ ಧ್ವಜ ಎಂದು ಅಂಗೀಕರಿಸಲಾಯಿತು.

    ಸರ್ವ ಸಮಾನತೆಯನ್ನು ಸಾರಿದ ಈ ಧರ್ಮವನ್ನು ಬಿ.ಆರ್.ಅಂಬೇಡ್ಕರ್ 1956ರಲ್ಲಿ ನಾಗಪುರದ ಭೌದ್ಧ ಸಮ್ಮೇಳನದಲ್ಲಿ ಲಕ್ಷಾಂತರ ಅನುಯಾಯಿಗಳೊಂದಿಗೆ ಭೌದ್ಧ ಧರ್ಮವನ್ನು ಸ್ವೀಕರಿಸಿದರು. ಬುದ್ಧನ ತತ್ವಗಳು, ಅಷ್ಟಾಂಗ ಮಾರ್ಗ, ಬುದ್ಧನ ಪಂಚಶೀಲ ತತ್ವಗಳನ್ನು ಮೈಗೂಡಿಸಿಕೊಂಡರೆ ಪ್ರಬುದ್ಧ ಭಾರತವನ್ನು ಕಟ್ಟಲು ಸಾಧ್ಯ ಎಂದರು.

    ಸಣ್ಣ ಕನಕಪ್ಪ, ಕನಕಪ್ಪ ಮ್ಯಾಗಡೆ, ರಮೇಶ್ ಬಡಿಗೇರ್, ಮೌನೇಶ್ ಜಾಲಿಹಾಳ್, ವೆಂಕಟೇಶ್ ಪೂಜಾರ್, ಮಂಜುನಾಥ್ ಮ್ಯಾಗಡೆ, ಪಾಮಣ್ಣ ಪೂಜಾರ್, ಶಶಿಕುಮಾರ, ಕನಕಪ್ಪ, ಯಂಕಪ್ಪ ತಿಪ್ಪನಾಳ, ದುರ್ಗೇಶ್ ನಾಯಕ, ಕೃಷ್ಣಪ್ಪ ಉಪ್ಪಾರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts