More

    ಆರೋಗ್ಯ ಸೇತು​ಗೆ ವಿಶ್ವದ ಮೆಚ್ಚುಗೆ: ಆ್ಯಪ್​ ಡೌನ್​ಲೋಡ್​ ಮಾಡಿಕೊಳ್ಳಿ, ಸೋಂಕಿತರಿಂದ ದೂರವಿರಿ

    ನವದೆಹಲಿ: ಕರೊನಾ ಸೋಂಕು ತಡೆ ಹಾಗೂ ಸೋಂಕಿಗೆ ಒಳಗಾದವರನ್ನು ಪತ್ತೆ ಹಚ್ಚಲು ನೆರವಾಗುವ ಆರೋಗ್ಯ ಸೇತು ಆ್ಯಪ್​ಗೆ ಜಾಗತಿಕವಾಗಿ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.

    ತಾಂತ್ರಿಕವಾಗಿ ಮುಂದುವರಿದ ದೇಶಗಳಿಗೆ ಹೋಲಿಸಿದಲ್ಲಿ ಭಾರತ ಈ ವಿಚಾರದಲ್ಲಿ ಒಂದು ಹೆಜ್ಜೆ ಮುಂದಿದೆ. ಜತೆಗೆ ಸೋಂಕು ಹಬ್ಬುವುದನ್ನು ನಿಯಂತ್ರಿಸುವಲ್ಲಿ ಇದು ಅತ್ಯಂತ ಪ್ರಯೋಜನಕಾರಿಯಾಗಿದೆ ಎಂದು ಪರಿಣತರು ಹಾಗೂ ವಿಶ್ವದ ಅನೇಕ ಸಂಸ್ಥೆಗಳು ಆರೋಗ್ಯ ಸೇತು ಆ್ಯಪ್​ಅನ್ನು ಹೊಗಳಿವೆ.

    ಈವರೆಗೆ ಆರೋಗ್ಯ ಸೇತು ಆ್ಯಪ್​ಅನ್ನು ಒಂದು ಕೋಟಿಗೂ ಅಧಿಕ ಜನರು ಡೌನ್​ಲೋಡ್​ ಮಾಡಿಕೊಂಡಿದ್ದಾರೆ. ಇಂಗ್ಲಿಷ್​ ಹಾಗೂ ಕನ್ನಡ, ಹಿಂದಿ, ತೆಲುಗು, ತಮಿಳು ಸೇರಿ ಪ್ರಮುಖ ಭಾರತೀಯ ಭಾಷೆಗಳಲ್ಲಿ ಆ್ಯಪ್ ಲಭ್ಯವಿದೆ.
    ಈ ಆ್ಯಪ್​ ಬಿಡುಗಡೆ ಬಳಿಕ, ಸ್ಮಾರ್ಟ್​ಫೋನ್​ಗಳಲ್ಲೂ ಕೋವಿಡ್​-19 ಸೋಂಕಿತರ ಸಂಪರ್ಕಕ್ಕೆ ಒಳಗಾಗುವುದನ್ನು ತಡೆಯಲು ಮೊಬೈಲ್​ ಬಳಕೆದಾರರನ್ನು ಎಚ್ಚರಿಸುವ ತಂತ್ರಾಂಶವನ್ನು ಅಭಿವೃದ್ಧಿಪಡಿಸುತ್ತಿರುವುದಾಗಿ ಆ್ಯಪಲ್​ ಹಾಗೂ ಗೂಗಲ್ ಸಂಸ್ಥೆಗಳು ಘೋಷಿಸಿವೆ.

    ಕರೊನಾ ಸೋಂಕಿತರ ಸಂಪರ್ಕಕ್ಕೆ ಒಳಗಾಗುವುದನ್ನು ತಡೆಯುವಲ್ಲಿ ಭಾರತವು ವಿಶ್ವಕ್ಕೆ ಮಾರ್ಗದರ್ಶಿ ಸ್ಥಾನದಲ್ಲಿದೆ. ಗ್ರಾಹಕರ ಖಾಸಗಿತನವನ್ನು ಕಾಯ್ದುಕೊಳ್ಳುವ ಮೂಲಕ ಈ ಆ್ಯಪ್​ ಮಾದರಿಯಾಗಿದೆ. ಜತೆಗೆ ಕೋಟ್ಯಂತರ ಗ್ರಾಹಕರು ಈ ಆ್ಯಪ್​ಅನ್ನು ಏಕಕಾಲದಲ್ಲಿ ಬಳಸುವಂತೆ ರೂಪಿಸಲಾಗಿದೆ. ಆರೋಗ್ಯ ಸೇತು ಮಾದರಿಯಲ್ಲಿಯೇ ಗೂಗಲ್​ ಹಾಗೂ ಆ್ಯಪಲ್​ ಕಂಪನಿಗಳು ತಂತ್ರಾಂಶ ರೂಪಿಸುತ್ತಿರುವುದು ಹೆಮ್ಮೆಯ ವಿಚಾರ ಎಂದು ನೀತಿ ಆಯೋಗದ ಅಧ್ಯಕ್ಷ ಅಮಿತಾಬ್​ ಕಾಂತ್​ ಹೇಳಿದ್ದಾರೆ.

    ವಿನೂತನ ಆವಿಷ್ಕಾರಗಳು ಜನರಲ್ಲಿ ಅರಿವು ಮೂಡಿಸುವಲ್ಲಿ ಸಹಕಾರಿಯಾಗುತ್ತವೆ ಎಂಬುದಕ್ಕೆ ಈ ಆ್ಯಪ್​ ಉದಾಹರಣೆಯಾಗಿದೆ ಎಂದು ವಿಶ್ವಬ್ಯಾಂಕ್​ ಕೂಡ ತನ್ನ ವರದಿಯಲ್ಲಿ ಉಲ್ಲೇಖಿಸಿದೆ.

    ಆ್ಯಪ್​ ಹೇಗೆ ಕಾರ್ಯ ನಿರ್ವಹಿಸುತ್ತದೆ?

    ಸ್ಮಾರ್ಟ್​ಫೋನ್​ನಲ್ಲಿ ಆ್ಯಪ್​ ಮಾಡಿಕೊಂಡು ಕೆಲ ವಿವರಗಳನ್ನು ದಾಖಲಿಸಿಬೇಕು. ಫೋನ್​ನ ಬ್ಲ್ಯೂಟೂಥ್​ ಹಾಗೂ ಲೋಕೇಷನ್​ಸರ್ವೀಸ್​ಗಳನ್ನು ಆನ್​ ಮಾಡಿರಬೇಕು. ನೀವೇನಾದರೂ ಸೋಂಕಿತರ ಸಂಪರ್ಕಕ್ಕೆ ಬಂದರೆ, ಆ್ಯಪ್​ ನಿಮ್ಮನ್ನು ಎಚ್ಚರಿಸುತ್ತದೆ. ಕೂಡಲೇ ಅವರಿಂದ ಅಂತರ ಕಾಯ್ದುಕೊಳ್ಳುವ ಮೂಲಕ ಸೋಂಕಿಗೆ ಒಳಗಾಗುವುದರಿಂದ ನಿಮ್ಮನ್ನು ನೀವು ಸೋಂಕಿಗೆ ಒಳಗಾಗುವುದರಿಂದ ಕಾಪಾಡಿಕೊಳ್ಳಬಹುದು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts