More

  ಕೈಗಾರಿಕೆ ಅಗತ್ಯತೆಗೆ ತಕ್ಕಂತೆ ಸಿದ್ಧರಾಗಿ

  ಕಲಬುರಗಿ: ನಮ್ಮಲ್ಲಿ ಸಾಕಷ್ಟು ಕೈಗಾರಿಗಳಿವೆ, ಆದರೆ ಕೆಲಸ ನಿರ್ವಹಿಸಲು ಕೌಶಲವಿರುವ ವಿದ್ಯಾರ್ಥಿಗಳಿಲ್ಲ. ಹೀಗಾಗಿ ನವ ಭಾರತಕ್ಕೆ ಬೇಕಾಗುವಂತಹ ವಿದ್ಯಾರ್ಥಿಗಳನ್ನು ಸಿದ್ಧಗೊಳಿಸುವುದು ಇಂದಿನ ಅಗತ್ಯವಾಗಿದೆ ಎಂದು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಬಟ್ಟು ಸತ್ಯನಾರಾಯಣ ಹೇಳಿದರು.

  ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಎಲೆಕ್ಟ್ರಿಕಲ್ ವಿಭಾಗದಿಂದ ಬುಧವಾರ ಆಯೋಜಿಸಿದ್ದ ಕ್ಲೌಡ್ ಕಂಪ್ಯೂಟಿಂಗ್, ರೊಬೊಟಿಕ್ಸ್ ಮತ್ತು ಬ್ಲಾಕ್‌ಚೈನ್ ತಂತ್ರಜ್ಞಾನ ಕುರಿತ ಒಂದು ವಾರದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ತಂತ್ರಜ್ಞಾನಗಳು ಮಾನವನ ಅನೇಕ ಅಡೆತಡೆಗಳನ್ನು ನಿವಾರಿಸಲಿವೆ. ತಂತ್ರಜ್ಞಾನದಿಂದಾಗಿ ನಾವು ಡಿಜಿಟಲ್ ಕರೆನ್ಸಿ ಬಳಸುತ್ತಿದ್ದೇವೆ. ಜನ್‌ಧನ್ ಮತ್ತು ನೇರ ಹಣ ಸಂದಾಯದಂತಹ ಸರ್ಕಾರಿ ಯೋಜನೆಗಳು ಫಲಾನುಭವಿಗಳನ್ನು ತಲುಪುತ್ತಿದ್ದು, ಭ್ರಷ್ಟಾಚಾರ ಕಡಿಮೆ ಮಾಡಿವೆ ಎಂದರು.

  ಬೆAಗಳೂರಿನ ಸ್ಯಾಮ್ಸಂಗ್ ಸಂಶೋಧನಾ ಕೇಂದ್ರದ ಅಧಿಕಾರಿ ಡಾ.ಶಶಿಧರ್ ಆರ್. ಮಾತನಾಡಿ, ಬ್ಲಾಕ್‌ಚೈನ್ ತಂತ್ರಜ್ಞಾನವು ಜನರ ನಡುವೆ ಸುಗಮ ಮತ್ತು ಸುರಕ್ಷಿತ ವಹಿವಾಟುಗಳಿಗೆ ಸಹಾಯ ಮಾಡುತ್ತದೆ. ತಂತ್ರಜ್ಞಾನಗಳು ಮಾನವ ಜೀವನ ಮತ್ತು ಕೈಗಾರಿಕೆಗಳನ್ನು ಬದಲಾಯಿಸುತ್ತಿವೆ ಎಂದು ತಿಳಿಸಿದರು.

  ಡಾ.ಉದಯ ಪಾಟೀಲ್, ಡಾ.ಅಮರೇಂದ್ರ ಎಂ., ಡಾ.ಪರಮೇಶ, ಆಶಿಶ್ ಇತರರಿದ್ದರು.

  ಭಾರತ ಚುನಾವಣಾ ಆಯೋಗವೂ ಬ್ಲಾಕ್‌ಚೈನ್ ತಂತ್ರಜ್ಞಾನ ಬಳಸಿಕೊಂಡು ಆನ್‌ಲೈನ್ ಮತದಾನ ವ್ಯವಸ್ಥೆ ಪ್ರಯೋಗಿಸುತ್ತಿದೆ. ಐಐಟಿ ಮದ್ರಾಸ್ ಈ ಯೋಜನೆಯಲ್ಲಿ ಕಾರ್ಯನಿರ್ವಹಿಸುತ್ತಿದೆ. ನಮ್ಮ ಮತಗಳನ್ನು ಯಾರೂ ಬದಲಾಯಿಸಲು, ಹ್ಯಾಕ್ ಮಾಡಲು ಅಥವಾ ಹಾಳು ಮಾಡಲು ಸಾಧ್ಯವಿಲ್ಲ.
  | ಡಾ.ಶಶಿಧರ ಆರ್. ಅಧಿಕಾರಿ, ಸ್ಯಾಮ್ಸಂಗ್ ಸಂಶೋಧನಾ ಕೇಂದ್ರ, ಬೆಂಗಳೂರು

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts