More

    ಜನರ ನಿರೀಕ್ಷೆಗೆ ತಕ್ಕಂತೆ ಕೆಲಸ

    ಶ್ರೀರಂಗಪಟ್ಟಣ: ತಾಲೂಕಿನ ವಿವಿಧ ಗ್ರಾಮಗಳಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಎ.ಬಿ.ರಮೇಶ ಬಂಡಿಸಿದ್ದೇಗೌಡ ಶುಕ್ರವಾರ ಚಾಲನೆ ನೀಡಿದರು.

    ತಾಲೂಕಿನ ವಡಿಯಾಂಡಹಳ್ಳಿ ಗ್ರಾಮದಲ್ಲಿ ಬನ್ನೂರು-ಶ್ರೀರಂಗಪಟ್ಟಣ ಸಂಪರ್ಕ ರಸ್ತೆ ಅಭಿವೃದ್ಧಿ, 1700 ಮೀಟರ್ ಸಿಡಿಎಸ್ ನಾಲೆಯ ಸೇವಾ ರಸ್ತೆ ಹಾಗೂ ಕ್ರಾಂಕ್ರೀಟ್ ಬಾಕ್ಸ್ ಚರಂಡಿ ಅಭಿವೃದ್ಧಿ ಪಡಿಸುವ ಕಾಮಗಾರಿಗೆ ಚಾಲನೆ ದೊರೆಯಿತು. ಬಳಿಕ ಕರಿಘಟ್ಟ ಬಳಿ ಲೋಕಪಾವನಿ ನದಿಗೆ ಸೋಪಾನಕಟ್ಟೆ, ಕಿರಂಗೂರು ಗ್ರಾಮದಲ್ಲಿ ಕುಂಬಾರಗುಂಡಿ ಪಿಕಪ್ ನಾಲೆ ದುರಸ್ತಿ, ಮೂಲೆ ಮಂಟಪ ಹಾಗೂ ರಾಂಪುರ ಗ್ರಾಮದಲ್ಲಿ ಕಾಲುವೆ ಆಧುನೀಕರಣ ಕಾಮಗಾರಿ, ಕಡತನಾಳು ಗ್ರಾಮದಲ್ಲಿ ರಸ್ತೆ ಅಭಿವೃದ್ಧಿ ಹಾಗೂ ಚಿಂದಗಿರಿಕೊಪ್ಪಲು ಗ್ರಾಮದಲ್ಲಿ ಅಗಟಹಳ್ಳ ನಾಲೆಗೆ ಅಡ್ಡ ಮೋರಿ ನಿರ್ಮಾಣ ಸೇರಿದಂತೆ ಆಧುನೀಕರಣ ಕಾಮಗಾರಿಗೆ ಚಾಲನೆ ನೀಡಲಾಯಿತು.

    ವರ್ಷದ ಹಿಂದೆ ಸುರಿದ ಭಾರಿ ಮಳೆಯಿಂದ ಅರಕೆರೆ ಸುತ್ತಮುತ ಹಾನಿಗೊಂಡಿದ್ದ ನಾಲೆಗಳ ದುರಸ್ತಿ ಹಾಗೂ ಗಾಡಿ ಸೇತುವೆ ಕಾಮಗಾರಿಗೂ ಈ ವೇಳೆ ಚಾಲನೆ ನೀಡಲಾಯಿತು.

    ಬಳಿಕ ಮಾತನಾಡಿದ ಶಾಸಕ ರಮೇಶ ಬಂಡಿಸಿದ್ದೇಗೌಡ, ಕ್ಷೇತ್ರದ ಜನರ ನಿರೀಕ್ಷೆಗೆ ತಕ್ಕಂತೆ ಸರ್ಕಾರದಿಂದ ಅನುದಾನ ತಂದು ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ ಎಂದರು.

    ಮುಂಡುಗದೊರೆ ಗ್ರಾಮ ಪಂಚಾಯಿತಿ ಸದಸ್ಯ ಗೋವಿಂದರಾಜು, ವಡಿಯಾಂಡಹಳ್ಳಿ ಗ್ರಾಮದ ಮುಖಂಡರಾದ ಹೋಬಳಿ ನಾಗರಾಜಣ್ಣ, ಉದಯ್ ಕುಮಾರ್, ಈರೇಗೌಡ, ಅಪೆಕ್ಸ್ ಬ್ಯಾಂಕ್ ಮಾಜಿ ನಿರ್ದೇಶಕ ಶಿವಯ್ಯ, ಚಿಂದಗಿರಿಕೊಪ್ಪಲು ಗ್ರಾಮದ ಮುಖಂಡರಾದ ಪುಟ್ಟೇಗೌಡ, ಜಯಪ್ರಕಾಶ್, ಜ್ಞಾನೇಶ್, ಗುತ್ತಿಗೆದಾರರಾದ ಶಶಾಂಕ್, ಹಂಗರಹಳ್ಳಿ ಗೋವಿಂದರಾಜು, ಕಾವೇರಿ ನೀರಾವರಿ ನಿಗಮ ಪಾಂಡವಪುರ ಉಪ ವಿಭಾಗದ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಜಯರಾಮ್, ಸಹಾಯಕ ಇಂಜಿನಿಯರ್‌ಗಳಾದ ಹೊನ್ನೋಜಿ ರಾವ್, ಭಾನು, ಕುಮಾರಸ್ವಾಮಿ, ಶ್ರೀರಾಮ್, ಸಹನಾ ಇತರರು ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts