More

    ಕರ್ನಾಟಕ ಧರ್ಮಛತ್ರ ಆಗೋದಕ್ಕೆ ಬಿಡಲ್ಲ: ಗೃಹ ಸಚಿವ ಆರಗ ಜ್ಞಾನೇಂದ್ರ

    ಬೆಂಗಳೂರು: ಉಗ್ರರ ಬಂಧನ ಹಿನ್ನೆಲೆಯಲ್ಲಿ ಮೈಸೂರು ಮತ್ತು ಬೆಂಗಳೂರಿಗೆ ಹೈಅಲರ್ಟ್​ ಜಾರಿಗೊಳಿಸಿರುವ ಬಗೆಗಿನ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು, ಅಕ್ರಮ ಬಾಂಗ್ಲಾ ಹಾಗೂ ಅಕ್ರಮ ವಿದೇಶಿಗರ ಪತ್ತೆಗೆ ಸ್ಪೆಷಲ್ ಟಾಸ್ಕ್ ಫೋರ್ಸ್ಅನ್ನು ನಗರದಲ್ಲಿ ರಚನೆ ಮಾಡಿದ್ದು, ಯಾವುದೇ ಗಾಬರಿ ಆಗುವ ಅವಶ್ಯಕತೆ ಇಲ್ಲ ಎಂದಿದ್ದಾರೆ.

    ಒಟ್ಟು 190 ಜನ ಅಕ್ರಮ ವಿದೇಶಿ ನಿವಾಸಿಗರನ್ನು ಗುರುತಿಸಿದ್ದು, ಅವರು ಕ್ಯಾಂಪ್​​ಗಳಲ್ಲಿ ನೆಲೆಸಿದ್ದಾರೆ. ಅವರ ಚಲನವಲನಗಳ ಮೇಲೆ ಕಣ್ಣಿಡಲು ಹೇಳಿದ್ದೇವೆ. ಎನ್​​ಐಎಯಿಂದ ವಿಶೇಷ ಕಾರ್ಯಾಚರಣೆ ನಡೆಸಿ ವಸತಿ ಸಮ್ಮುಚ್ಛಯಗಳನ್ನು ಪರಿಶೀಲಿಸಲಾಗುತ್ತಿದೆ. ವೀಸಾ ಅವಧಿ ಮುಗಿದು ವಾಸಿಸುತ್ತಿರುವವರಿಗಾಗಿ ಶೋಧ ನಡೆದಿದೆ. ಯಾವುದೇ ಗಾಬರಿ ಆಗುವ ಅವಶ್ಯಕತೆ ಇಲ್ಲ ಎಂದಿದ್ದಾರೆ.

    ಇದನ್ನೂ ಓದಿ: ಬ್ಯಾಂಕ್​ ಖಾತೆಗೆ ತಪ್ಪಾಗಿ ಬಂದ ಲಕ್ಷಗಟ್ಟಲೇ ಹಣ… ಪ್ರಧಾನಿ ಮೋದಿ ಕಳ್ಸಿರೋದು ಎಂದ ಖಾತೆದಾರ!

    ಆಫ್ರಿಕನ್ ಪ್ರಜೆಗಳು ಕೂಡ ವೀಸಾ ಅವಧಿ ಮುಗಿದವರು ಇಲ್ಲಿದ್ದಾರೆ. ಅವರ ವಿರುದ್ದವೂ ಕೂಡ ಮೊಕದ್ದಮೆ ಹೂಡಲಾಗಿದ್ದು, ಮೊಕದ್ದಮೆ ಮುಗಿಯುವ ಮೊದಲು ಏನು ಮಾಡುವುದಕ್ಕೂ ಬರುವುದಿಲ್ಲ. ಆದರೆ ಕರ್ನಾಟಕವನ್ನು ಧರ್ಮಛತ್ರ ಆಗೋದಕ್ಕೆ ಬಿಡೋದಿಲ್ಲ. ಅಕ್ರಮ ಬಾಂಗ್ಲಾ ಹಾಗೂ ಇತರ ವಿದೇಶಿಗರ ಪತ್ತೆಗೆ ಸ್ಪೆಷಲ್ ಟಾಸ್ಕ್ ಫೋರ್ಸ್ ನಗರದಲ್ಲಿ ರಚನೆ ಮಾಡಿದ್ದೇವೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.

    ಉಗ್ರಾತಂಕ! ಹೈ ಅಲರ್ಟ್​ನಲ್ಲಿ ಮೈಸೂರು, ಬೆಂಗಳೂರು

    ಬೆಂಗಳೂರಿನಲ್ಲಿ ಡ್ರಗ್ಸ್​ ಫ್ಯಾಕ್ಟರಿ ಪತ್ತೆ! ಮನೆಯಲ್ಲೇ ತಯಾರಿಸಿ ವಿವಿಧೆಡೆಗೆ ಸಪ್ಲೈ ಮಾಡ್ತಿದ್ದ ವಿದೇಶೀ ಪ್ರಜೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts