More

    ಭಾರತ ಕರೊನಾ ವಿರುದ್ಧ ಜಯ ಸಾಧಿಸಿದ ದೇಶ

    ಚಿತ್ರದುರ್ಗ: ಮಹಾಮಾರಿ ಕೋವಿಡ್‌ಗೆ ಇಡೀ ಜಗತ್ತೇ ಬಸವಳಿದಿದ್ದ ಸಂದರ್ಭದಲ್ಲಿ ಅದರ ವಿರುದ್ಧ ಲಸಿಕೆ ಸಂಶೋಧಿಸಿ, ಬಳಸುವುದರಲ್ಲಿ ಯಶಸ್ಸನ್ನು ಸಾಧಿಸಿದ ದೇಶ ಭಾರತ ಎಂದು ಬೆಂಗಳೂರು ಸರ್ಕಾರಿ ಔಷಧ ವಿಜ್ಞಾನ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಎಸ್.ರಾಮಚಂದ್ರ ಶೆಟ್ಟಿ ಹೇಳಿದರು.

    ನಗರದ ಎಸ್‌ಜೆಎಂ ಫಾರ್ಮಸಿ ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ ಪದವಿ ಪ್ರಧಾನ ಸಮಾರಂಭದಲ್ಲಿ ಮಾತನಾಡಿ, ಕೋವಿಡ್‌ಗೆ ಪರಿಣಾಮಕಾರಿ ಲಸಿಕೆ ಸಂಶೋಧಿಸಿದ ಕೀರ್ತಿ ನಮ್ಮದು ಎಂದರು.

    ಪರೀಕ್ಷೆಗಳನ್ನು ಸಮರ್ಥವಾಗಿ ಎದುರಿಸಿದರೆ ಪದವಿ ಸಿಗುತ್ತದೆ ನಿಜ. ಆದರೆ ವಿದ್ಯಾರ್ಥಿಗಳು ಎಂದಿಗೂ ಅಧ್ಯಯನದಿಂದ ಹಿಮ್ಮುಖವಾಗಬಾರದು. ಉತ್ತಮ ಫಾರ್ಮಸಿಸ್ಟ್ ಎನಿಸಿಕೊಳ್ಳಲು ಔಷಧ ವಿಜ್ಞಾನದ ವಿಷಯಗಳ ಅಧ್ಯಯನ ರೂಢಿಸಿಕೊಂಡರೆ ಭವಿಷ್ಯದಲ್ಲಿ ಹೆಸರು ಗಳಿಸಬಹುದು ಎಂದು ಹೇಳಿದರು.

    ಕರ್ನಾಟಕ ಔಷಧ ಹಾಗೂ ಫಾರ್ಮಸಿಟಿಕಲ್ಸ್ ತಯಾರಕರ ಸಂಘದ ನಿರ್ದೇಶಕ ಹರೀಶ್ ಕೆ.ಜೈನ್ ಮಾತನಾಡಿ, ಪ್ರಸ್ತುತ ಭಾರತವು, 150 ದೇಶಗಳಿಗೆ ಔಷಧಗಳನ್ನು ರಫ್ತು ಮಾಡುತ್ತಿದೆ. ಔಷಧ ಕ್ಷೇತ್ರದಲ್ಲಿ ಸಾಕಷ್ಟು ಅವಕಾಶಗಳಿದ್ದು, ಗುಣಮಟ್ಟದ ಕಡೆ ಕೊಟ್ಟರೆ ಅತ್ಯುತ್ತಮ ಫಾರ್ಮಸಿಸ್ಟ್‌ಗಳಾಗಿ ಬೆಳೆಯಲು ಸಾಧ್ಯವಿದೆ ಎಂದರು.

    ಬೆಂಗಳೂರು ಮಲ್ಲಿಗೆ ಕಾಲೇಜ್ ಆಫ್ ಫಾರ್ಮಸಿ ಪ್ರಾಚಾರ‌್ಯ ಡಾ. ಶಿವಕುಮಾರಸ್ವಾಮಿ ಮಾತನಾಡಿ, ಪ್ರಸ್ತುತ ವಿದ್ಯಮಾನಗಳ ಅರಿವು ವಿದ್ಯಾರ್ಥಿಗಳಲ್ಲಿ ಇರಬೇಕು ಎಂದು ಹೇಳಿದರು.
    ಎಸ್‌ಜೆಎಂ ಸಂಸ್ಥೆ ಕಾರ್ಯದರ್ಶಿ ಕೆ.ವಿ.ಪ್ರಭಾಕರ್ ಮಾತನಾಡಿ, ಔಷಧ ಕ್ಷೇತ್ರವಿಂದು ದೇಶದ ಆರ್ಥಿಕ, ರಾಜಕೀಯ ಸೇರಿ ವಿವಿಧ ಕ್ಷೇತ್ರಗಳನ್ನು ನಿಯಂತ್ರಿಸುವ ಶಕ್ತಿ ಪಡೆಯುತ್ತಿದೆ ಎಂದರು.

    ರಾಜೀವ್‌ಗಾಂಧಿ ವಿಶ್ವವಿದ್ಯಾಲಯದ ರ‌್ಯಾಂಕ್ ಪಡೆದ ವಿದ್ಯಾರ್ಥಿಗಳಾದ ಅನುಷಾ, ಸಾತ್ವಿಕ್ ಅವರನ್ನು ಗೌರವಿಸಲಾಯಿತು. ಡಾ ಸ್ನೇಹಲತಾ ಪ್ರತಿಜ್ಞಾ ವಿಧಿ ಬೋಧಿಸಿದರು. ಬಿ ಫಾರ್ಮ, ಫಾರ್ಮ ಹಾಗೂ ಫಾರ್ಮಾ ಡಿ 170 ವಿದ್ಯಾರ್ಥಿಗಳು ಪದವಿ ಸ್ವೀಕರಿಸಿದರು.

    ಪ್ರಾಚಾರ‌್ಯ ಡಾ.ಟಿ.ಎಸ್.ನಾಗರಾಜ್, ಕಾಲೇಜಿನ ವಿವಿಧ ವಿಭಾಗದ ಮುಖ್ಯಸ್ಥರಾದ ಡಾ.ಮಾರುತಿ ಏಕ್ಬೋಟೆ, ಡಾ.ಆರ್.ಯೋಗಾನಂದ, ಡಾ.ಬಸವರಾಜ್, ಎಚ್.ಎಸ್.ಡಾ.ಜಿ.ಆರ್.ನಟರಾಜ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts