More

    ಸೂರತ್​ ಮುನ್ಸಿಪಲ್ ಕಾರ್ಪೋರೇಶನ್​ನ ತರಬೇತಿ ನಿರತ 10 ಮಹಿಳೆಯರನ್ನು ಬೆತ್ತಲೆ ನಿಲ್ಲಿಸಿದ ಆಸ್ಪತ್ರೆ ಸಿಬ್ಬಂದಿ… ಇದೆಂಥಾ ಅಮಾನವೀಯ ತಪಾಸಣೆ?

    ಸೂರತ್​: ಇತ್ತೀಚೆಗೆ ಗುಜರಾತ್​ನ ಭುಜ್​ ಪಟ್ಟಣದ ಬಾಲಕಿಯರ ಕಾಲೇಜಿನ ಹಾಸ್ಟೆಲ್​ನಲ್ಲಿ ಒಂದು ಅಮಾನವೀಯ ಘಟನೆ ನಡೆದಿತ್ತು.

    ವಿದ್ಯಾರ್ಥಿನಿಯರ ಮುಟ್ಟಿನ ಬಗ್ಗೆ ಅನುಮಾನಪಟ್ಟು, ಅವರಿಗೆ ಋತುಸ್ರಾವ ಆಗಿಲ್ಲ ಎಂದು ಖಚಿತಪಡಿಸಿಕೊಳ್ಳಲು ಒಳಉಡುಪನ್ನು ಹಾಸ್ಟೆಲ್​ ಅಧಿಕಾರಿಗಳು, ಶಿಕ್ಷಕರು ಸೇರಿ ಬಿಚ್ಚಿಸಿದ್ದರು. ಈ ಸುದ್ದಿ ವ್ಯಾಪಕ ವಿವಾದಕ್ಕೆ ಎಡೆಮಾಡಿಕೊಟ್ಟಿತ್ತು. ನಂತರ ಆ ಕಾಲೇಜಿನ ಪ್ರಾಂಶುಪಾಲರನ್ನು ಅಮಾನತು ಮಾಡಲಾಗಿತ್ತು.

    ಈಗ ಇಂಥದ್ದೇ ಮತ್ತೊಂದು ಎಡವಟ್ಟು ಗುಜರಾತ್​ನ ಸೂರತ್​ನಿಂದ ವರದಿಯಾಗಿದೆ. ಇಲ್ಲಿನ ಮುನ್ಸಿಪಲ್​ ಕಾರ್ಪೋರೇಶನ್​ನ ತರಬೇತಿ ನಿರತ ಮಹಿಳಾ ಗುಮಾಸ್ತರನ್ನು ಅಷ್ಟೇ ಅಮಾನವೀಯವಾಗಿ ನಡೆಸಿಕೊಳ್ಳಲಾಗಿದೆ.
    ಸೂರತ್​ನಲ್ಲಿ ಮುನ್ಸಿಪಾಲ್ ಕಾರ್ಪೋರೇಶನ್​ ನಡೆಸುವ ಆಸ್ಪತ್ರೆಯ ಸ್ತ್ರೀರೋಗಕ್ಕೆ ಸಂಬಂಧಪಟ್ಟ ವಾರ್ಡ್​ನಲ್ಲಿ ತರಬೇತಿ ನಿರತ ಮಹಿಳಾ ಕ್ಲರ್ಕ್​ಗಳನ್ನು ಬೆತ್ತಲೆಯಾಗಿ ನಿಲ್ಲಿಸಿ ವೈದ್ಯಕೀಯ ಪರೀಕ್ಷೆ ನಡೆಸಿರುವ ಬಗ್ಗೆ ವರದಿಯಾಗಿದೆ.

    ಕ್ಲರ್ಕ್​ಗಳಿಗೆ ತರಬೇತಿ ನೀಡುವಾಗ ಈ ವೈದ್ಯಕೀಯ ಪರೀಕ್ಷೆಗಳನ್ನು ಮಾಡಬೇಕಾಗುತ್ತದೆ. ಆದರೆ ಸೂರತ್ ಮುನ್ಸಿಪಲ್ ಇನ್​ಸ್ಟಿಟ್ಯೂಟ್​ ಆಫ್ ಮೆಡಿಕಲ್ ಎಜುಕೇಶನ್ ಆ್ಯಂಡ್ ರಿಸರ್ಚ್ ಆಸ್ಪತ್ರೆಯಲ್ಲಿ ಮಹಿಳೆಯರನ್ನು ಹೀಗೆ ಬೆತ್ತಲೆಯಾಗಿ ನಿಲ್ಲಿಸಿ, ತೀರ ಖಾಸಗಿ ಪ್ರಶ್ನೆಗಳನ್ನೆಲ್ಲ ಕೇಳಿದ್ದಾರೆ. ಮದುವೆಯಾಗದ ಹೆಣ್ಣುಮಕ್ಕಳಿಗೂ ಸಹ ಗರ್ಭಧಾರಣಾ ಪರೀಕ್ಷೆಗಳನ್ನು ಮಹಿಳಾ ವೈದ್ಯರು ನಡೆಸಿದ್ದಾರೆ.

    ಸೂರತ್​ ಮುನ್ಸಿಪಲ್ ಕಾರ್ಪೋರೇಶನ್​(ಎಸ್​ಎಂಸಿ) ನ ನೌಕರರ ಸಂಘ ಈ ಆರೋಪ ಮಾಡಿ, ದೂರು ನೀಡಿದ ನಂತರ ತನಿಖೆ ಕೈಗೆತ್ತಿಕೊಳ್ಳಲಾಗಿದೆ.

    ಎಸ್​ಎಂಸಿಯ ಆಯುಕ್ತರಾದ ಬಂಚನಿಧಿ ಪಣಿ ಅವರು ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆ ನಡೆಸಲು ಅಧಿಕಾರಿಗಳಿಗೆ ಆದೇಶ ನೀಡಿದ್ದಾರೆ.

    ಸುಮಾರು 10 ಮಹಿಳೆಯರು ಎಸ್​ಎಂಸಿಯ ವಿವಿಧ ಇಲಾಖೆಗಳಲ್ಲಿ ಮೂರು ವರ್ಷಗಳಿಂದ ತರಬೇತಿ ಪಡೆಯುತ್ತಿದ್ದಾರೆ. ಅವರ ತರಬೇತಿ ಅವಧಿ ಮುಗಿದ ಕಾರಣ ಕೆಲಸಕ್ಕೆ ಸೇರ್ಪಡೆಯಾಗಲು ದೈಹಿಕ ಆರೋಗ್ಯ ತಪಾಸಣೆ ಮಾಡುವುದು ನಿಯಮ. ಅದರ ಪ್ರಕಾರ ಮುನ್ಸಿಪಲ್​ ಕಾರ್ಪೋರೇಶನ್​ ಆಸ್ಪತ್ರೆಯಲ್ಲಿ ಅವರನ್ನು ತಪಾಸಣೆಗೆ ಒಳಪಡಿಸಲಾಗಿತ್ತು. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts