More

    ನಾಲಿಗೆ ಮೇಲೂ ಕೂದಲು ಬೆಳೆಯುತ್ತಾ? ಏನಿದು ವಿಚಿತ್ರ ಘಟನೆ

    ದೆಹಲಿ: ರೋಗನಿರೋಧಕ ಔಷಧಿಯೊಂದರ ಅಡ್ಡಪರಿಣಾಮದಿಂದಾಗಿ ಮಹಿಳೆಯ ನಾಲಿಗೆ ಮೇಲೆ ಕೂದಲು ಬೆಳೆದು, ನಾಲಿಗೆ ಕಪ್ಪುವರ್ಣಕ್ಕೆ ತಿರುಗಿರುವ ಘಟನೆ ನಡೆದಿದೆ. ವೈದ್ಯಕೀಯ ಜರ್ನಲ್​ನ ಪ್ರಕಾರ ಜಪಾನ್​ ಮೂಲದ 60 ವರ್ಷದ ಮಹಿಳೆ ಗುದನಾಳದ ಕ್ಯಾನ್ಸರ್​ನಿಂದ ಬಳಲುತ್ತಿದ್ದರು.

    ಕಿಮೋಥೆರಪಿಯ ಅಡ್ಡಪರಿಣಾಮಗಳನ್ನು ಎದುರಿಸಲು ಆ ಮಹಿಳೆ ಮಿನೋಸೈಕ್ಲಿನ್ ಎಂಬ ರೋಗ ನಿರೋಧಕ ಮಾತ್ರೆಗಳನ್ನು ತೆಗೆದುಕೊಳ್ಳುತ್ತಿದ್ದರು. ಆದರೆ ಸ್ವಲ್ಪ ದಿನಗಳವರೆಗೆ ಈ ಮಾತ್ರೆಯನ್ನು ಸೇವಿಸಿದ್ದ ಮಹಿಳೆ, ದಿನೇ ದಿನೇ ತನ್ನ ನಾಲಿಗೆ ಬದಲಾಗುವುದನ್ನು ಗಮನಿಸಿದ್ದಾಳೆ. ಅನಂತರ ಆಕೆಯ ನಾಲಿಗೆ ಕಪ್ಪು ವರ್ಣಕ್ಕೆ ತಿರುಗಿ, ಕೂದಲು ಬೆಳೆದು ಬಿಟ್ಟಿದೆ.

    ಇದನ್ನೂ ಓದಿ: ‘ದಿ ಕೇರಳ ಸ್ಟೋರಿ’ ಸಿನಿಮಾ ಟಿಕೆಟ್​​ ತೋರಿಸಿದರೆ ಚಹಾ, ಕಾಫಿ ಉಚಿತ!

    ಇದನ್ನು ಗಮನಿಸಿದ ದಕ್ಷಿಣ ಜಪಾನ್‌ನ ಫುಕುವೋಕಾ ವಿಶ್ವವಿದ್ಯಾಲಯ, ಸರಿಯಾದ ನೈರ್ಮಲ್ಯ ಪಾಲಿಸದೇ ಇರುವುದರಿಂದ ಹಾಗೂ ಧೂಮಪಾನದಿಂದ ಹೀಗೆ ಉಂಟಾಗುತ್ತದೆ ಎಂದು ಹೇಳಿದೆ.ಆದರೆ ಬ್ರಿಟಿಷ್ ಮೆಡಿಕಲ್ ಜರ್ನಲ್ ಕೇಸ್, ಜಪಾನ್​ನ ಮಹಿಳೆಯನ್ನು ದೈಹಿಕ ಪರೀಕ್ಷೆಗೆ ಒಳಪಡಿಸಿತು.

    ಆ ಸಂದರ್ಭದಲ್ಲಿ ಮಹಿಳೆಯ ಮುಖದ ವರ್ಣ ಬದಲಾಗುವುದರ ಜತೆಗೆ ನಾಲಿಗೆಯಲ್ಲಿ ನೋವಿನಿಂದ ಕೂಡಿರುವ ಚಿಕ್ಕ ಚಿಕ್ಕ ತೇಪೆ ಗುರುತಿಸಿದ್ದಾರೆ. ಅನಂತರ ಆಕೆಗೆ ಬೇರೆ ಬೇರೆ ಔಷಧಿಗಳನ್ನು ನೀಡಿ, ಮರು ಚಿಕಿತ್ಸೆಗೆ ಒಳಪಡಿಸಿದಾಗ ಆರು ವಾರಗಳಲ್ಲಿ ಮಹಿಳೆಯ ನಾಲಿಗೆ ಮೇಲೆ ಸುಧಾರಣೆ ಕಂಡು ಬಂದಿದೆ ಎಂದು ವರದಿಯಲ್ಲಿ ಉಲ್ಲೇಖಿಸಿದ್ದಾರೆ.(ಎಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts