More

    ಕರೊನಾ ಲಾಕ್​ಡೌನ್​ ಸಮಯದಲ್ಲಿ ಈ ಮಹಿಳೆ ಮಾಡಿದ ವಿಶ್ವದಾಖಲೆ ಕೇಳಿದ್ರೆ ಹುಬ್ಬೇರಿಸ್ತೀರಾ..!

    ಕೊಚ್ಚಿ: ಮಹಾಮಾರಿ ಕರೊನಾ ವೈರಸ್​​ ಲಾಕ್​ಡೌನ್ ಹೇರಿಕೆಯ ಉಚಿತ ಸಮಯದಲ್ಲಿ​ ಸಾಕಷ್ಟು ಮಂದಿಗೆ ತುಂಬಾ ಕೆಲಸಗಳನ್ನು ಮಾಡಿ ತಮ್ಮ ಗುರಿ ಮುಟ್ಟಿದ್ದಾರೆ. ಇನ್ನು ಕೆಲವರು ಪ್ರಯತ್ನಿಸಿದಾದರೂ ಸಾಧ್ಯವಾಗಿಲ್ಲ. ಆದರೆ, ಕೇರಳದ ಮಹಿಳೆಯೊಬ್ಬರು ಎಲ್ಲರಿಗಿಂತ ತುಸು ವಿಭಿನ್ನ ಎನಿಸಿಕೊಂಡಿದ್ದು, ವಿಶೇಷವಾದುದ್ದನ್ನೇ ಸಾಧಿಸಿದ್ದಾರೆ.

    ಕೇರಳದ ಕೊಚ್ಚಿಯಲ್ಲಿರುವ ಎಂಇಎಸ್​ ಕಾಲೇಜಿನ ಎಂಎಸ್ಸಿ ಬಯೋಕೆಮಿಸ್ಟ್ರಿ ದ್ವಿತೀಯ ವರ್ಷದ ವಿದ್ಯಾರ್ಥಿನಿಯಾಗಿರುವ ಆರತಿ ರೆಘುನಾಥ್​, ಕೇವಲ ಮೂರು ತಿಂಗಳಲ್ಲಿ 350 ಕೋರ್ಸ್​ ಪೂರ್ಣಗೊಳಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಕೊಚ್ಚಿಯ ಎಲಮಕ್ಕರ ನಿವಾಸಿಯಾಗಿರುವ ಆರತಿ, ಯೂನಿವರ್ಸಲ್​ ರೆಕಾರ್ಡ್​ ಫೋರಮ್​ನಲ್ಲಿ ವಿಶ್ವದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ.

    ಇದನ್ನೂ ಓದಿ: ಪಾಲಕರನ್ನು ಹೊರಗಿಟ್ಟು ಗ್ಯಾಂಗ್​ರೇಪ್​ ಸಂತ್ರಸ್ತೆಯ ಅಂತ್ಯಕ್ರಿಯೆ: ಪೊಲೀಸರು ಕೊಟ್ಟ ಸಮರ್ಥನೆ ಹೀಗಿದೆ…

    ಲಾಕ್​ಡೌನ್​ ಸಮಯದಲ್ಲಿ ಕೋರ್ಸ್​ಗಳನ್ನು ಅಧ್ಯಯನ ಮಾಡಲು ಆರತಿ ಆರಂಭಿಸಿದರು. ಇದೀಗ ವಿಶ್ವದಾಖಲೆಯನ್ನೇ ಬರೆದಿದ್ದಾರೆ. ಈ ಬಗ್ಗೆ ಮಾತನಾಡಿರುವ ಅವರು ನನ್ನನ್ನು ಆನ್​ಲೈನ್​ ಕೋರ್ಸ್​ ಜಗತ್ತಿಗೆ ಪರಿಚಯಿಸಿದ್ದು ನಮ್ಮ ಕಾಲೇಜಿನ ಅಧ್ಯಾಪಕರು. ಆನ್‌ಲೈನ್‌ನಲ್ಲಿ ಹಲವಾರು ಶ್ರೇಣಿಯ ಕೋರ್ಸ್‌ಗಳಿವೆ. ಇವೆಲ್ಲವೂ ಅವಧಿ ಮತ್ತು ಪಠ್ಯಕ್ರಮದಲ್ಲಿ ಬದಲಾವಣೆಯನ್ನು ಹೊಂದಿವೆ. ನಮ್ಮ ಕಾಲೇಜಿನ ಪ್ರಾಂಶುಪಾಲರಾದ ಅಜಿಮ್ಸ್​ ಪಿ ಮುಹಮ್ಮದ್​, ಸಂಯೋಜಕರಾದ ಹನೀಫಾ ಕೆ ಜಿ ಮತ್ತು ನಮ್ಮ ಕ್ಲಾಸ್​ ಟೀಚರ್​ ನೀಲಿಮಾ ಟಿ.ಕೆ. ಅವರ ಬೆಂಬಲದಿಂದ ಈ ಎಲ್ಲ ಕೋರ್ಸ್​ಗಳನ್ನು ಕೆಲವೇ ವಾರಗಳಲ್ಲಿ ಮುಗಿಸಿದೆ ಎಂದು ಹೇಳಿಕೊಂಡಿದ್ದಾರೆ.

    ಇನ್ನು ಮಗಳ ಸಾಧನೆ ಬಗ್ಗೆ ತಾಯಿ ಮಲಿಯೆಕ್ಕಲ್​ ಮದಥಿ ಮತ್ತು ತಂದೆ ಎಂ. ಆರ್​. ರೆಘುನಾಥ್​ ಹೆಮ್ಮೆ ವ್ಯಕ್ತಪಡಿಸಿದ್ದಾರೆ. ವಿಶ್ವದ ಅತ್ಯುನ್ನತ ವಿಶ್ವವಿದ್ಯಾಲಯಗಳಾದ ಜಾನ್​ ಹಾಕಿನ್ಸ್​ ಯೂನಿವರ್ಸಿಟಿ, ಯೂನಿವರ್ಸಿಟಿ ಆಫ್​ ವರ್ಜಿನಿಯಾ, ಯೂನಿವರ್ಸಿಟಿ ಆಫ್​ ಕೊಲರಡೋ ಬೌಲ್ಡರ್​, ಯೂನಿವರ್ಸಿಟಿ ಆಫ್​ ನ್ಯೂಯಾರ್ಕ್​, ಟೆಕ್ನಿಕಲ್​ ಯೂನಿವರ್ಸಿಟಿ ಆಫ್​ ಡೆನ್ಮಾರ್ಕ್​ ಮತ್ತು ದಿ ಯೂನಿವರ್ಸಿಟಿ ಆಫ್​ ಕೋಪ್​ಹೇಗನ್​ನಲ್ಲಿ ಆರತಿ ಆನ್​ಲೈನ್​ ಕ್ಲಾಸ್​ಗಳನ್ನು ಯಶಸ್ವಿಯಾಗಿ ಮುಗಿಸಿದ್ದಾರೆ. (ಏಜೆನ್ಸೀಸ್​)

    ಹತ್ರಾಸ್​ ಗ್ಯಾಂಗ್​ರೇಪ್​ ಪ್ರಕರಣ: ಯೋಗಿ ಸರ್ಕಾರಕ್ಕೆ ಮಾನವ ಹಕ್ಕುಗಳ ಆಯೋಗದಿಂದ ನೋಟಿಸ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts