More

    VIDEO: ಮಕ್ಕಳು ಹಲ್ಲುಜ್ಜಲು ರಗಳೆ ಮಾಡುತ್ತಿದ್ದರೆ ನೀವೂ ಟ್ರೈ ಮಾಡಿ ಈ ಬನಾನಾ ಬ್ರಷ್​…!

    ಸಾಮಾಜಿಕ ಜಾಲತಾಣಗಳಲ್ಲಿ ಪ್ರಾಣಿಗಳಿಗೆ ಸಂಬಂಧಪಟ್ಟ ಮುದ್ದಾದ, ಚೆಂದನೆಯ ವಿಡಿಯೋಗಳು ವೈರಲ್​ ಆಗುವುದು ಹೊಸದಲ್ಲ. ಹಾಗೇ ಈಗೊಂದು ವಿಡಿಯೋ ವೈರಲ್ ಆಗಿದ್ದು, ಅದನ್ನು ನೋಡಿದರೆ ನಿಮ್ಮ ಮುಖದಲ್ಲೂ ಒಂದು ನಗುಮೂಡುತ್ತದೆ.

    ಒಂದು ಚಿಂಪಾಂಜಿ ಮರಿಗೆ ಮಹಿಳೆಯೋರ್ವರು ಬ್ರಷ್​ ಮಾಡಿಸುತ್ತಾರೆ. ಆದರೆ ಚಿಂಪಾಂಜಿ ಹಲ್ಲು ಉಜ್ಜಲು ಆಕೆಯ ಬಳಸಿದ ಬ್ರಷ್​ ಒಂದು ಕ್ಷಣ ನಿಮ್ಮನ್ನು ಗೊಂದಲಕ್ಕೀಡುಮಾಡುವುದರಲ್ಲಿ ಸಂಶಯವಿಲ್ಲ. ನೀವು ಈ ಉಪಾಯವನ್ನು ಮಕ್ಕಳ ಮೇಲೆ ಕೂಡ ಪ್ರಯೋಗ ಮಾಡಬಹುದು…!

    ಈ ವಿಡಿಯೋವನ್ನು ಐಎಫ್​ಎಸ್​ ಅಧಿಕಾರಿ ಸುಸಾಂತಾ ನಂದಾ ಅವರು ಶೇರ್​ ಮಾಡಿಕೊಂಡಿದ್ದಾರೆ. ನಿಮ್ಮ ಮಕ್ಕಳಿಗೆ ವಿಡಿಯೋ ತೋರಿಸಿ. ಇದನ್ನು ನೋಡಿದ ಮೇಲೆ ಖಂಡಿತ ಅವರೂ ಖುಷಿಯಿಂದಲೇ ಹಲ್ಲುಜ್ಜಲು ಪ್ರಾರಂಭಿಸುತ್ತಾರೆ ಎಂದು ಕ್ಯಾಪ್ಷನ್​ ಬರೆದಿದ್ದಾರೆ. ಇದನ್ನೂ ಓದಿ: ಯಾರು ಹೇಳಿದ್ದು ಕರೊನಾದಿಂದ ವೃದ್ಧರು ಪಾರಾಗೋದಿಲ್ಲ ಅಂತ? 105 ವರ್ಷದ ಅಜ್ಜಿಯ ಆತ್ಮಸ್ಥೈರ್ಯ ಸೋಂಕನ್ನೇ ಹೆದರಿಸಿದೆ !

    ಸಿಪ್ಪೆ ಸುಲಿದ ಬಾಳೆಹಣ್ಣಿನಂತೆ ಇರುವ ಟೂತ್​ ಬ್ರಷ್​​ನಲ್ಲಿ ಚಿಂಪಾಂಜಿ ಮರಿಗೆ ಮಹಿಳೆ ಹಲ್ಲುಜ್ಜಿಕೊಡುವುದನ್ನು 29 ಸೆಕೆಂಡ್​ಗಳ ಈ ವಿಡಿಯೋದಲ್ಲಿ ನೀವು ನೋಡಬಹುದು. ಚಿಂಪಾಂಜಿ ಕೂಡ ಅದು ಬಾಳೆಹಣ್ಣು ಎಂದು ಭಾವಿಸಿ, ಖುಷಿಯಿಂದ ಹಲ್ಲು ಉಜ್ಜಿಸಿಕೊಲ್ಳುತ್ತಿದೆ. ಮಧ್ಯಮಧ್ಯ ಅದನ್ನು ಕಚ್ಚಲೂ ಕೂಡ ಪ್ರಯತ್ನಿಸುತ್ತದೆ.

    ವಿಡಿಯೋ ನೋಡಿದ ನೆಟ್ಟಿಗರಂತೂ ಫುಲ್​ ಖುಷಿಯಾಗಿದ್ದಾರೆ. ಅಯ್ಯೋ ಈಗಿನ ಮಕ್ಕಳನ್ನು ಹೀಗೆ ಯಾಮಾರಿಸುವುದು ಕಷ್ಟ. ನನ್ನ ಮೊಮ್ಮಗಳಂತೂ ನಿಜವಾದ ಬಾಳೆಹಣ್ಣಿನಲ್ಲೇ ಹಲ್ಲು ಉಜ್ಜುತ್ತಾಳೆ ಎಂದು ಕಾಮೆಂಟ್​ ಹಾಕಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts