More

    ಕಬಾಬ್ ಕದ್ದು ಸಿಕ್ಕಿ ಬಿದ್ದ ಖತರ್ನಾಕ್​ ಕಳ್ಳಿ; ವಿಡಿಯೋ ವೈರಲ್​

    ಲಂಡನ್​​: ದುಬಾರಿ ಬೆಲೆಯ ವಸ್ತುಗಳನ್ನು ಕದ್ದು ಸಿಕ್ಕಿ ಬಿದ್ದಿರು, ಪರಾರಿಯಾಗಿರುವ ಖದೀಮರ ಬಗ್ಗೆ ಎಷ್ಟೋ ಸುದ್ದಿಗಳನ್ನು ಕೇಳಿದ್ದೇವೆ. ಆದರೆ ಇಲ್ಲೊಬ್ಬಳು ಕಳ್ಳಿ ಮಾತ್ರ ಕಬಾಬ್ ಕದ್ದು ಸಿಕ್ಕಿ ಬಿದ್ದಿದ್ದಾಳೆ. ಈ ಕುರಿತಾದ ವಿಡಿಯೋ ಸೋಶಿಯಲ್​​ ಮೀಡಿಯಾದಲ್ಲಿ ವೈರಲ್​ ಆಗುತ್ತಿದೆ.

    ಈ ಘಟನೆ ಲಂಡನ್ ಅಲ್ಲಿ ನಡೆದಿದ್ದು, ಇಲ್ಲಿನ ಅಂಗಡಿಯೊಂದಕ್ಕೆ ಸ್ಟೈಲ್ ಆಗಿ ಬಟ್ಟೆ ತೊಟ್ಟು ನುಗ್ಗಿದ ಯುವತಿಯೊಬ್ಬಳು ಕಬಾಬ್ ಕದ್ದು ಬಳಿಕ ಅಲ್ಲಿಂದ ಸೀದಾ ಇನ್ನೊಂದು ಅಂಗಡಿಗೆ ನುಗ್ಗಿದ್ದಾಳೆ. ಇದರಿಂದ ಅನುಮಾನಗೊಂಡ ಅಂಗಡಿ ಮಾಲೀಕರು ಆಕೆಯನ್ನು ಅಂಗಡಿಯೊಳಗೆ ಕೂಡಿ ಹಾಕಿದ್ದಾರೆ. ಈ ಘಟನೆಗೆ ಸಂಬಂಧಪಟ್ಟ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

    ಈ ವಿಡಿಯೋವನ್ನು @gharkekalesh ಎಂಬ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, “ಲಂಡನ್ ನಲ್ಲಿ ಪಾಕಿಸ್ತಾನಿ ಮೂಲದ ಹುಡುಗಿಯೊಬ್ಬಳು ಅಂಗಡಿಯಿಂದ ಕಬಾಬ್ ಕದ್ದು ಸಿಕ್ಕಿಬಿದ್ದಿದ್ದಾಳೆ. ಆಕೆ ಇನ್ನೊಂದು ಅಂಗಡಿ ಪ್ರವೇಶಿಸಿದಾಗ, ಅಂಗಡಿ ಮಾಲೀಕರು ಆಕೆಯನ್ನು ಕೂಡಿ ಹಾಕಿದ್ದಾರೆ” ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ.

    ಯುವತಿಯೊಬ್ಬಳು ಅಂಗಡಿಯೊದರಿಂದ ಕಬಾಬ್ ಕದ್ದು ಓಡಿ ಹೋಗಿ ಇನ್ನೊಂದು ಅಂಗಡಿಯನ್ನು ಪ್ರವೇಶಿಸುತ್ತಾಳೆ. ಆಕೆಯ ನಡೆಯನ್ನು ಕಂಡು ಅನುಮಾನಗೊಂಡ ಅಂಗಡಿ ಮಾಲೀಕರು ಆಕೆಯನ್ನು ಅಂಗಡಿಯಲ್ಲಿಯೇ ಕೂಡಿ ಹಾಕಿದ್ದಾರೆ. ನಂತರ ಆಕೆ ಬಾಗಿಲು ತೆರೆಯುವಂತೆ ಹೈ ಡ್ರಾಮವನ್ನೇ ಸೃಷ್ಟಿಸಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಈ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ.

    ಬೆಂಗಳೂರಿನ ಕದಂಬ ಹೋಟೆಲ್‌ಗೆ ಬಾಂಬ್‌ ಬೆದರಿಕೆ ಪತ್ರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts