More

    ಗ್ರಾಮೀಣ ಠಾಣೆ ಹಿಂಬದಿಗೆ ಶಿಫ್ಟ್

    ಯಾದಗಿರಿ: ಚಾಮಾ ಲೇಔಟ್ ಬಡಾವಣೆಯಲ್ಲಿ ತರಕಾರಿ ಮಾರಾಟ ಮತ್ತು ಖರೀದಿಸಲು ಜನತೆ ಸಾಮಾಜಿಕ ಅಂತರ ಮರೆತು ಮುಗಿಬಿದ್ದ ಹಿನ್ನೆಲೆಯಲ್ಲಿ ಸಾಕಷ್ಟು ಆತಂಕ ಸೃಷ್ಟಿಸಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾಡಳಿತ ಇದೀಗ ಚಾಮಾ ಲೇಔಟ್ನಿಂದ ತರಕಾರಿ ವ್ಯಾಪಾರವನ್ನು ಗ್ರಾಮೀಣ ಪೊಲೀಸ್ ಠಾಣೆ ಹಿಂಭಾಗದ ಬಯಲು ಪ್ರದೇಶಕ್ಕೆ ಸ್ಥಳಾಂತರಿಸಿದೆ.

    ಲಾಕ್ಡೌನ್ ಹಿನ್ನೆಲೆಯಲ್ಲಿ ನಗರದಲ್ಲಿನ ತರಕಾರಿ ಮಾರುಕಟ್ಟೆ ಸ್ಯ ಬಂದ್ ಆಗಿದ್ದು, ತರಕಾರಿ ವ್ಯಾಪಾರಿಗಳೆಲ್ಲರೂ ಚಾಮಾ ಲೇಔಟ್ಗೆ ಶಿಫ್ಟ್ ಆಗಿದ್ದರಿಂದ ಬಡಾವಣೆಯಲ್ಲಿ ಜನಸಂದಣಿ ಹೆಚ್ಚಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಸಮಸ್ಯೆಯಾಗಿತ್ತು. ಈ ಬಗ್ಗೆ ಶನಿವಾರ `ವಿಜಯವಾಣಿ’ ಆತಂಕ ಸೃಷ್ಟಿಸಿದ ಚಾಮಾ ಲೇಔಟ್ ತಲೆಬರಹದಡಿ ಪ್ರಕಟಿಸಿದ ವಿಶೇಷ ವರದಿಯಿಂದ ಎಚ್ಚೆತ್ತುಕೊಂಡು ಜಿಲ್ಲಾಡಳಿತ ತರಕಾರಿ ವಹಿವಾಟನ್ನು ಗ್ರಾಮೀಣ ಪೊಲೀಸ್ ಠಾಣೆ ಹಿಂಭಾಗಕ್ಕೆ ಶಿಫ್ಟ್ ಮಾಡಿದೆ.

    ಸಾಮಾಜಿಕ ಅಂತರ ಕಾಪಾಡುವ ನಿಟ್ಟಿನಲ್ಲಿ ಪ್ರತಿ ಅಂಗಡಿಯಿಂದ ಮೂರ್ನಾಲ್ಕು ಅಡಿ ಜಾಗ ಬಿಡಿಸಲಾಗಿದ್ದು, ಗದ್ದಲವಾಗದಂತೆ ಪೊಲೀಸ್ ಸಿಬ್ಬಂದಿಯನ್ನು ಸಹ ನಿಯೋಜಿಸಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts