More

    ಪ್ರಧಾನಿ, ರಾಷ್ಟ್ರಪತಿ ಹುದ್ದೆಯನ್ನೂ ನಿರಾಕರಿಸಿದ ನಾಯಕ ಯಾರು?

    ನವದೆಹಲಿ: ರಾಜಕಾರಣದಲ್ಲಿ ಅಧಿಕಾರಕ್ಕಾಗಿ ಹಾತೊರೆಯುವವರು ಎಲ್ಲೆಡೆ ಕಾಣಸಿಗುತ್ತಾರೆ. ಆದರೆ ಆ ಜನಾನುರಾಗಿ ನಾಯಕ ಪ್ರಧಾನಿ, ರಾಷ್ಟ್ರಪತಿಯಾಗುವ ಅವಕಾಶವಿದ್ದರೂ ನಿರಾಕರುತ್ತಾರೆ. ಬದಲಾಗಿ ಅವರು ತಮ್ಮ ಜೀವನದುದ್ದಕ್ಕೂ ಸಾರ್ವಜನಿಕ ಸೇವೆಯನ್ನು ಮುಂದುವರೆಸಸುತ್ತಾರೆ. ಉನ್ನತ ಹುದ್ದೆಗಳನ್ನು ಜನರಿಗಾಗಿ ಹಲವು ಹೋರಾಟ ರೂಪಿಸಸುವುದನ್ನು ಮುಂದುವರಿಸುತ್ತಾರೆ. ಅವರು ಬೇರಾರು ಅಲ್ಲ, ದೇಶ ಮೆಚ್ಚಿದ ನಾಯಕ ಜಯಪ್ರಕಾಶ್​ ನಾರಾಯಣ್​(ಜೆಪಿ). ಅಕ್ಟೋಬರ್​ 11(ಇಂದು) ಅವರ ಹುಟ್ಟಿದ ದಿನವಾಗಿದ್ದು, ಅದರ ನಿಮಿತ್ತ ಅವರ ಕುರಿತು ಕಿರು ಮಾಹಿತಿ ಇಲ್ಲಿದೆ…

    ಜಯಪ್ರಕಾಶ್ ನಾರಾಯಣ್ ಸ್ವಾತಂತ್ರ್ಯ ಹೋರಾಟಗಾರ, ರಾಜಕೀಯ ನಾಯಕ ಮತ್ತು ಅದಕ್ಕಿಂತ ಹೆಚ್ಚಾಗಿ ಜನ ಮೆಚ್ಚಿದ ನಾಯಕ. ಹಿಂದೆ ಪ್ರಧಾನಿಯಾಗಿದ್ದ ಇಂದಿರಾಗಾಂಧಿ ಅವರು ಹೇರಿದ ತುರ್ತುಪರಿಸ್ಥಿತಿಯ ವಿರುದ್ಧ ಚಳುವಳಿ ಮುನ್ನಡೆಸುವ ಮೂಲಕ ಅಪಾರ ಜನಪ್ರಿಯತೆಯನ್ನು ಗಳಿಸಿದರು.
    1979ರಲ್ಲಿ ಜೆಪಿ ಅವರೇ ಸ್ಥಾಪಿಸಿದ ಜನತಾ ಪಕ್ಷ ಅಧಿಕಾರಕ್ಕೆ ಬಂದಿತ್ತು. ಜಯಪ್ರಕಾಶ ನಾರಾಯಣ ಅವರು ಗಾಂಧೀಜಿಯಂತಹ ವ್ಯಕ್ತಿಯಾಗಿದ್ದರು. ತುರ್ತು ಪರಿಸ್ಥಿತಿಯ ಸಮಯದಲ್ಲಿ ನಿರಂತರವಾಗಿ ಹೋರಾಡುವ ಮೂಲಕ ಯುವ ನಾಯಕರನ್ನು ಬೆಳಕಿಗೆ ತಂದರು. ಅವರು ಎಂದಿಗೂ ಯಾವುದೇ ಹುದ್ದೆಗೆ ಅಪೇಕ್ಷಿಸಲಿಲ್ಲ, ಒಂದು ಹಂತದಲ್ಲಿ, ಜಯಪ್ರಕಾಶ್ ನಾರಾಯಣ್ ಅವರಿಗೆ ಪ್ರಧಾನಿಯಾಗುವ ಅವಕಾಶ ಒದಗಿಬಂದಿತ್ತು. ಆದರೆ ಅವರು ಅದನ್ನು ನಯವಾಗಿ ನಿರಾಕರಿಸಿದರು. ಅವರಿಗೆ ಮತ್ತೊಮ್ಮೆ ರಾಷ್ಟ್ರಪತಿಯಾಗಲು ಆಫರ್ ಬಂದಿತ್ತು, ಅದನ್ನೂ ತಿರಸ್ಕರಿಸಿದರು. ಕಡೆಗೆ ಅಕ್ಟೋಬರ್ 1979 ರಲ್ಲಿ ನಿಧನರಾದರು. ಅವರ ಕಾಂಗ್ರೆಸ್ಸೇತರ ಸರ್ಕಾರದ ಪ್ರಯೋಗವು ಅವರ ಮರಣಕ್ಕಿಂತ ಮೊದಲೇ ಅಧಿಕಾರ ಕಳೆದುಕೊಂಡಿತ್ತು.

    ಇದನ್ಜನೂ ಓದಿ: ಬದಲಾಗದ ಟ್ರುಡೊ…ಭಾರತದ ವಿರುದ್ಧ ಅರಬ್​ ರಾಷ್ಟ್ರಗಳನ್ನು ಎತ್ತಿಕಟ್ಟುವ ಯತ್ನ

    ಜಯಪ್ರಕಾಶ್ ನಾರಾಯಣ್ 11 ಅಕ್ಟೋಬರ್ 1901 ರಂದು ಬೆಂಗಾಲ್ ಪ್ರೆಸಿಡೆನ್ಸಿಯ (ಇಂದಿನ ಬಿಹಾರ ರಾಜ್ಯ) ಸರನ್ ಜಿಲ್ಲೆಯ ಸೀತಾಬಾಡಿಯಾರ ಗ್ರಾಮದಲ್ಲಿ ಜನಿಸಿದರು. 9 ನೇ ವಯಸ್ಸಿನಲ್ಲಿ ಓದಲು ಪಾಟ್ನಾಗೆ ಬಂದರು. ಗಾಂಧೀಜಿಯವರ ಅಸಹಕಾರ ಚಳವಳಿಗೆ ಸೇರಿದ ಕಾರಣ ಕಾಲೇಜಿನಿಂದ ಹೊರಗುಳಿದರು. ನಂತರ ಅವರು ಅಧ್ಯಯನವನ್ನು ಮುಂದುವರೆಸಿದರು.

    ಆದರೆ ಮತ್ತೆ ಆಂದೋಲನಕ್ಕಾಗಿ ಕಾಲೇಜು ಮಧ್ಯದಲ್ಲಿಯೇ ಬಿಟ್ಟರು. ಕಡೆಗೆ ಬಿಹಾರ ವಿದ್ಯಾಪೀಠದಲ್ಲಿ ಪ್ರವೇಶ ಪಡೆದು 20 ನೇ ವಯಸ್ಸಿನಲ್ಲಿ ಕಾಲೇಜು ವಿದ್ಯಾಭ್ಯಾಸ ಮುಗಿಸಿದರು. ನಂತರ ಅವರು ಸರಕು ಸಾಗಾಣಿಕೆ ಹಡಗಿನಲ್ಲಿ ಅಮೆರಿಕಾ ತಲುಪಿ ಕ್ಯಾಲಿಫೋರ್ನಿಯಾದಲ್ಲಿ ಎರಡು ವರ್ಷ ಡಿಶ್​ವಾಶರ್, ಬಳಿಕ ಗ್ಯಾರೇಜ್ ನಲ್ಲಿ ಮೆಕ್ಯಾನಿಕ್, ಔಷಧಿ ಮಾರಾಟ, ಹಣ್ಣುಗಳನ್ನು ಪ್ಯಾಕಿಂಗ್ ಮಾಡುವುದು ಸೇರಿ ಹಲವು ಕೆಲಸಗಳನ್ನು ಮಾಡಿ ಉನ್ನತ ಶಿಕ್ಷಣವನ್ನು ಪೂರ್ಣಗೊಳಿಸಿದರು.

    ಅಮೆರಿಕದಲ್ಲಿ ಓದುತ್ತಿದ್ದಾಗಲೇ ಕಾರ್ಮಿಕರ ಸಮಸ್ಯೆಗಳು ಅವರ ಅರಿವಿಗೆ ಬಂದಿದ್ದವು. ವಿಸ್ಕಾನ್ಸಿನ್ ವಿಶ್ವವಿದ್ಯಾನಿಲಯದಿಂದ ಸಮಾಜ ವಿಜ್ಞಾನದಲ್ಲಿ ಎಂ.ಎ ಮತ್ತು ಓಹಿಯೋ ವಿಶ್ವವಿದ್ಯಾಲಯದಿಂದ ಅನ್ವಯಿಕ ವಿಜ್ಞಾನದಲ್ಲಿ ಬಿ.ಎ ಪಡೆದರು. ಈ ಸಮಯದಲ್ಲಿ ಅವರು ಕಾರ್ಲ್ ಮಾರ್ಕ್ಸ್ ಮತ್ತು ಅವರ ಸಮಾಜವಾದದ ಸಿದ್ಧಾಂತಗಳಿಂದ ಪ್ರಭಾವಿತರಾದರು.

    1929ರಲ್ಲಿ ಅವರು ಭಾರತಕ್ಕೆ ಹಿಂದಿರುಗಿದರು. ಗಾಂಧೀಜಿಯವರು 1932 ರಲ್ಲಿ ಅವರು ಅಸಹಕಾರ ಚಳವಳಿ ನಡೆಸಿದಾಗ ಅದರಲ್ಲಿ ಪಾಲ್ಗೊಂಡು ಜೈಲಿಗೆ ಹೋದರು. ನಂತರ ಅವರು ಕಾಂಗ್ರೆಸ್ ರಾಜಕೀಯದಿಂದ ತೀವ್ರ ನಿರಾಶೆಗೊಂಡು ಸಮಾಜವಾದಿ ಪಕ್ಷ ಸ್ಥಾಪಿಸಿದರು. 1954 ರಲ್ಲಿ ವಿನೋಬಾ ಭಾವೆ ಅವರು ಬಿಹಾರದ ಗಯಾದಲ್ಲಿ ಸರ್ವೋದಯ ಚಳವಳಿಗೆ ತಮ್ಮ ಜೀವನವನ್ನು ಮುಡಿಪಾಗಿಡುವುದಾಗಿ ಘೋಷಿಸಿದ ಬಳಿಕ ಅತ್ತ ಆಕರ್ಷಿತರಾದರು. 1960 ರ ದಶಕದ ಕೊನೆಯಲ್ಲಿ ರಾಜಕೀಯದಲ್ಲಿ ಸಕ್ರಿಯರಾದರು. 1974ರಲ್ಲಿ ಬಿಹಾರದ ರೈತರಿಗಾಗಿ ಚಳವಳಿ ನಡೆದಿತ್ತು. ಆರೋಗ್ಯ ಕ್ಷೀಣಿಸಿದ್ದರೂ ಚಳವಳಿಯಲ್ಲಿ ಪಾಲ್ಗೊಳ್ಳುವ ಮೂಲಕ ರಾಜಕೀಯ ಚಟುವಟಿಕೆ ಮುಂದುವರಿಸಿದರು. 1975ರಲ್ಲಿ ಇಂದಿರಾಗಾಂಧಿ ಅವರು ಹೇರಿದ ತುರ್ತುಪರಿಸ್ಥಿತಿಯ ವಿರುದ್ಧ ರಾಷ್ಟ್ರವ್ಯಾಪಿ ಚಳವಳಿಯ ನೇತೃತ್ವ ವಹಿಸಿದ್ದರು. ಅವರ ಕರೆಯನ್ನು ಅನುಸರಿಸಿ ಸಾವಿರಾರು ವಿದ್ಯಾರ್ಥಿಗಳು ಚಳವಳಿಗೆ ಧುಮುಕಿದರು. ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ಜೆಪಿ ಜೈಲು ಪಾಲಾಗಿದ್ದರು. ನಂತರ ಅವರನ್ನು ಬಿಡುಗಡೆ ಮಾಡಲಾಯಿತು.

    ಜಯಪ್ರಕಾಶ್ ನಾರಾಯಣ್ ಸ್ವಾತಂತ್ರ್ಯ ಹೋರಾಟಗಾರ, ರಾಜಕೀಯ ನಾಯಕ ಮತ್ತು ಅದಕ್ಕಿಂತ ಹೆಚ್ಚಾಗಿ ಜನ ಮೆಚ್ಚಿದ ನಾಯಕ. ಹಿಂದೆ ಪ್ರಧಾನಿಯಾಗಿದ್ದ ಇಂದಿರಾಗಾಂಧಿ ಅವರು ಹೇರಿದ ತುರ್ತುಪರಿಸ್ಥಿತಿಯ ವಿರುದ್ಧ ಚಳುವಳಿ ಮುನ್ನಡೆಸುವ ಮೂಲಕ ಅಪಾರ ಜನಪ್ರಿಯತೆಯನ್ನು ಗಳಿಸಿದರು.
    ಒಂದು ಹಂತದಲ್ಲಿ, ಜಯಪ್ರಕಾಶ್ ನಾರಾಯಣ್ ಅವರಿಗೆ ಪ್ರಧಾನಿಯಾಗುವ ಅವಕಾಶ ಒದಗಿಬಂದಿತ್ತು. ಆದರೆ ಅವರು ಅದನ್ನು ನಯವಾಗಿ ನಿರಾಕರಿಸಿದರು. ಅವರಿಗೆ ಮತ್ತೊಮ್ಮೆ ರಾಷ್ಟ್ರಪತಿಯಾಗಲು ಆಫರ್ ಬಂದಿತ್ತು, ಆದರೆ ಅವರು ಅದನ್ನೂ ತಿರಸ್ಕರಿಸಿದರು.

    ಯಪ್ರಕಾಶ್ ನಾರಾಯಣ್ 11 ಅಕ್ಟೋಬರ್ 1901 ರಂದು ಬೆಂಗಾಲ್ ಪ್ರೆಸಿಡೆನ್ಸಿಯ (ಇಂದಿನ ಬಿಹಾರ ರಾಜ್ಯ) ಸರನ್ ಜಿಲ್ಲೆಯ ಸೀತಾಬಾಡಿಯಾರ ಗ್ರಾಮದಲ್ಲಿ ಜನಿಸಿದರು. 9 ನೇ ವಯಸ್ಸಿನಲ್ಲಿ ಓದಲು ಪಾಟ್ನಾಗೆ ಬಂದರು. ಗಾಂಧೀಜಿಯವರ ಅಸಹಕಾರ ಚಳವಳಿಗೆ ಸೇರಿದ ಕಾರಣ ಕಾಲೇಜಿನಿಂದ ಹೊರಗುಳಿದರು. ನಂತರ ಅವರು ಅಧ್ಯಯನವನ್ನು ಮುಂದುವರೆಸಿದರು.

    ಆದರೆ ಮತ್ತೆ ಆಂದೋಲನಕ್ಕಾಗಿ ಕಾಲೇಜು ಮಧ್ಯದಲ್ಲಿಯೇ ಬಿಟ್ಟರು. ಕಡೆಗೆ ಬಿಹಾರ ವಿದ್ಯಾಪೀಠದಲ್ಲಿ ಪ್ರವೇಶ ಪಡೆದು 20 ನೇ ವಯಸ್ಸಿನಲ್ಲಿ ಕಾಲೇಜು ವಿದ್ಯಾಭ್ಯಾಸ ಮುಗಿಸಿದರು. ನಂತರ ಅವರು ಸರಕು ಸಾಗಾಣಿಕೆ ಹಡಗಿನಲ್ಲಿ ಅಮೆರಿಕಾ ತಲುಪಿ ಕ್ಯಾಲಿಫೋರ್ನಿಯಾದಲ್ಲಿ ಎರಡು ವರ್ಷ ಡಿಶ್​ವಾಶರ್, ಬಳಿಕ ಗ್ಯಾರೇಜ್ ನಲ್ಲಿ ಮೆಕ್ಯಾನಿಕ್, ಔಷಧಿ ಮಾರಾಟ, ಹಣ್ಣುಗಳನ್ನು ಪ್ಯಾಕಿಂಗ್ ಮಾಡುವುದು ಸೇರಿ ಹಲವು ಕೆಲಸಗಳನ್ನು ಮಾಡಿ ಉನ್ನತ ಶಿಕ್ಷಣವನ್ನು ಪೂರ್ಣಗೊಳಿಸಿದರು.

    ಅಮೆರಿಕದಲ್ಲಿ ಓದುತ್ತಿದ್ದಾಗಲೇ ಕಾರ್ಮಿಕರ ಸಮಸ್ಯೆಗಳು ಅವರ ಅರಿವಿಗೆ ಬಂದಿದ್ದವು. ವಿಸ್ಕಾನ್ಸಿನ್ ವಿಶ್ವವಿದ್ಯಾನಿಲಯದಿಂದ ಸಮಾಜ ವಿಜ್ಞಾನದಲ್ಲಿ ಎಂ.ಎ ಮತ್ತು ಓಹಿಯೋ ವಿಶ್ವವಿದ್ಯಾಲಯದಿಂದ ಅನ್ವಯಿಕ ವಿಜ್ಞಾನದಲ್ಲಿ ಬಿ.ಎ ಪಡೆದರು. ಈ ಸಮಯದಲ್ಲಿ ಅವರು ಕಾರ್ಲ್ ಮಾರ್ಕ್ಸ್ ಮತ್ತು ಅವರ ಸಮಾಜವಾದದ ಸಿದ್ಧಾಂತಗಳಿಂದ ಪ್ರಭಾವಿತರಾದರು.

    1929ರಲ್ಲಿ ಅವರು ಭಾರತಕ್ಕೆ ಹಿಂದಿರುಗಿದರು. ಗಾಂಧೀಜಿಯವರು 1932 ರಲ್ಲಿ ಅವರು ಅಸಹಕಾರ ಚಳವಳಿ ನಡೆಸಿದಾಗ ಅದರಲ್ಲಿ ಪಾಲ್ಗೊಂಡು ಜೈಲಿಗೆ ಹೋದರು. ನಂತರ ಅವರು ಕಾಂಗ್ರೆಸ್ ರಾಜಕೀಯದಿಂದ ತೀವ್ರ ನಿರಾಶೆಗೊಂಡು ಸಮಾಜವಾದಿ ಪಕ್ಷ ಸ್ಥಾಪಿಸಿದರು. 1954 ರಲ್ಲಿ ವಿನೋಬಾ ಭಾವೆ ಅವರು ಬಿಹಾರದ ಗಯಾದಲ್ಲಿ ಸರ್ವೋದಯ ಚಳವಳಿಗೆ ತಮ್ಮ ಜೀವನವನ್ನು ಮುಡಿಪಾಗಿಡುವುದಾಗಿ ಘೋಷಿಸಿದ ಬಳಿಕ ಅತ್ತ ಆಕರ್ಷಿತರಾದರು. 1960 ರ ದಶಕದ ಕೊನೆಯಲ್ಲಿ ರಾಜಕೀಯದಲ್ಲಿ ಸಕ್ರಿಯರಾದರು. 1974ರಲ್ಲಿ ಬಿಹಾರದ ರೈತರಿಗಾಗಿ ಚಳವಳಿ ನಡೆದಿತ್ತು. ಆರೋಗ್ಯ ಕ್ಷೀಣಿಸಿದ್ದರೂ ಚಳವಳಿಯಲ್ಲಿ ಪಾಲ್ಗೊಳ್ಳುವ ಮೂಲಕ ರಾಜಕೀಯ ಚಟುವಟಿಕೆ ಮುಂದುವರಿಸಿದರು.

    1975ರಲ್ಲಿ ಇಂದಿರಾಗಾಂಧಿ ಅವರು ಹೇರಿದ ತುರ್ತುಪರಿಸ್ಥಿತಿಯ ವಿರುದ್ಧ ರಾಷ್ಟ್ರವ್ಯಾಪಿ ಚಳವಳಿಯ ನೇತೃತ್ವ ವಹಿಸಿದ್ದರು. ಅವರ ಕರೆಯನ್ನು ಅನುಸರಿಸಿ ಸಾವಿರಾರು ವಿದ್ಯಾರ್ಥಿಗಳು ಚಳವಳಿಗೆ ಧುಮುಕಿದರು. ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ಜೆಪಿ ಜೈಲು ಪಾಲಾಗಿದ್ದರು. ನಂತರ ಅವರನ್ನು ಬಿಡುಗಡೆ ಮಾಡಲಾಯಿತು.

    ವೈರಲ್ ಆಯ್ತು ಮಾಜಿ ಶಾಸಕ ದಿವಂಗತ ಭೀಮಾ ಮಾಂಡವಿ ಪುತ್ರಿ ವಿಡಿಯೋ; ಟಿಕೆಟ್ ಸಿಗದಿದ್ದಕ್ಕೆ ಅತೃಪ್ತಿ ಬಯಲು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts