More

    ಕಾಂಗ್ರೆಸ್​ ಆಡಳಿತದಲ್ಲಿ ಒಂದೂ ಹಗರಣದ ತನಿಖೆಯಾಗಿಲ್ಲ ಏಕೆ?: ಸಚಿವ ಅಶ್ವತ್ಥ್​ ನಾರಾಯಣ್​

    ಮೈಸೂರು: ಕಾಂಗ್ರೆಸ್​ ಆಡಳಿತದಲ್ಲಿ ನೂರಾರು ತಪ್ಪುಗಳು ನಡೆದಿದ್ದವು, ಒಮ್ಮೆಯೂ ತನಿಖೆ ನಡೆಯಲೇ ಇಲ್ಲ, ಆದರೆ ಬಿಜೆಪಿ ಸರ್ಕಾರದಲ್ಲಿ ಹಗರಣ ಬೆಳಕಿಗೆ ಬಂದ ಕೂಡಲೇ ತನಿಖೆಗೆ ಆದೇಶಿಸಿದ್ದೇವೆ ಎಂದು ಸಚಿವ ಅಶ್ವಥ್ ನಾರಾಯಣ್ ಹೇಳಿದ್ದಾರೆ.

    ಮೈಸೂರಿನಲ್ಲಿ ಮಾತನಾಡಿದ ಅವರು, ಪಿಎಸ್ಐ ಹಗರಣ ವಿಚಾರದಲ್ಲಿ ಯಾರೇ ತಪ್ಪು ಮಾಡಿದ್ದರೂ ಅವರ ಮೇಲೆ ಕ್ರಮ ನಿಶ್ಚಿತ. ಅದರಲ್ಲಿ ಅವರು ಇವರು ಅಂತ ಏನು ಇಲ್ಲಾ. ಕಾಂಗ್ರೆಸ್ ಆಡಳಿತದಲ್ಲಿ ಇಂತಹ ನೂರು ತಪ್ಪುಗಳು ನಡೆದಿದ್ದವು. ಒಮ್ಮೆಯೂ ತನಿಖೆ ನಡೆಯಲಿಲ್ಲಾ.ಈ ಅವ್ಯವಹಾರ ಬಯಲು ಮಾಡಿದ್ದು ಕಾಂಗ್ರೆಸ್​​​ನವರಲ್ಲಾ. ಸಿದ್ದರಾಮಯ್ಯ ಈಗಲೂ ಬಾಯಲ್ಲಿ ಕಡುಬು ಇಟ್ಟುಕೊಂಡಿದ್ದಾರೆ. ಮಾತಾಡಿದರೆ ಎಲ್ಲಿ ತಮ್ಮ ಹಗರಣ ಬಯಲಾಗುತ್ತವೆ ಎಂಬ ಭಯ ಅವರಲ್ಲಿ ಇದೆ ಎಂದು ಹೇಳಿದರು.

    ಒಬ್ಬ ಸಾಮಾನ್ಯ ವ್ಯಕ್ತಿ ದೂರು ನೀಡಿದಕ್ಕೆ ಗೃಹ ಸಚಿವರಿಂದ ಕ್ರಮ ಕೈಗೊಂಡಿದ್ದೇವೆ, ಈ ವಿಚಾರದಲ್ಲಿ ಸಿದ್ದರಾಮಯ್ಯ ಈಗಲೂ ಕಡುಬು ತಿನ್ನುತ್ತಿದ್ದಾರೆ. ನಾವು ಮಾತನಾಡಿದರೆ ನಮ್ಮದು ಹೊರಗೆ ಬರುತ್ತೇ ಅಂತಾ ಭಯದಲ್ಲಿದ್ದಾರೆ ಎಂದು ಟೀಕಿಸಿದರು.

    ಪ್ರಾಧ್ಯಾಪಕರ ನೇಮಕಾತಿ ಪ್ರಶ್ನೆ ಪತ್ರಿಕೆ ಸೋರಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿ, ಎಷ್ಟು ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ. ಅದರ ವರದಿ ಬಂದ ಮೇಲೆ ಮತ್ತೆ ಪರೀಕ್ಷೆ ನಡೆಸಬೇಕೋ ಅಥವಾ, ಅದನ್ನೇ ಮುಂದುವರಿಸಬೇಕೋ ಎಂಬುದನ್ನು ತೀರ್ಮಾನ ಮಾಡುತ್ತೇವೆ ಎಂದು ತಿಳಿಸಿದ್ದಾರೆ. (ದಿಗ್ವಿಜಯ ನ್ಯೂಸ್​)

    ಸಲ್ಮಾನ್​ ಖಾನ್​ಗೆ ಬೆದರಿಕೆ ಪತ್ರ ಕಳುಹಿಸಿಲ್ಲ ಎಂದ ಗ್ಯಾಂಗ್​​ಸ್ಟರ್: ​ದೆಹಲಿ ಪೊಲೀಸರ ಮುಂದೆ ಹೇಳಿದ್ದು ಹೀಗೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts