More

    ಲಾಕ್​ಡೌನ್​ನಿಂದ ಬಡವರಿಗೆ ತೀವ್ರ ಸಂಕಷ್ಟಕ್ಕೆ ಪ್ರಧಾನಿ ಮೋದಿ ಸ್ಪಂದನೆ, ವಿಶ್ವ ಆರೋಗ್ಯ ಸಂಸ್ಥೆ ಮೆಚ್ಚುಗೆ

    ನವದೆಹಲಿ: ಕರೊನಾ ವೈರಸ್​ ಸೋಂಕು ತಡೆಗಟ್ಟಲು ತ್ವರಿತವಾಗಿ ಲಾಕ್​ಡೌನ್​ ಘೋಷಿಸುವ ಜತೆಗೆ ಲಾಕ್​ಡೌನ್​ನಿಂದ ಸಂಕಷ್ಟಕ್ಕೆ ಸಿಲುಕಿರುವ ಕೋಟ್ಯಂತರ ಬಡವರ ನೆರವಿಗೆ ಪ್ರಧಾನಿ ನರೇಂದ್ರ ಮೋದಿ ತೆಗೆದುಕೊಂಡ ಕ್ರಮಕ್ಕೆ ವಿಶ್ವ ಆರೋಗ್ಯ ಸಂಸ್ಥೆ ಮೆಚ್ಚುಗೆ ವ್ಯಕ್ತಪಡಿಸಿದೆ.

    ಈ ಬಗ್ಗೆ ಟ್ವೀಟ್​ ಮಾಡಿರುವ ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥ ಟೆಡ್ರಾಸ್​ ಅಧಾನೋಮ್​ ಘೆಬ್ರೆಯೆಸಸ್​, ಭಾರತದಲ್ಲಿ ಘೋಷಿಸಲಾಗಿರುವ 21 ದಿನಗಳ ಲಾಕ್​ಡೌನ್​ನಿಂದ ಬಡವರು ತೀವ್ರ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ. ಇದಕ್ಕೆ ಪ್ರಧಾನಿ ನರೇಂದ್ರ ಮೋದಿ ಸ್ಪಂದಿಸಿದ ರೀತಿ, 1.70 ಲಕ್ಷ ಕೋಟಿ ರೂ. ಪ್ರಧಾನಮಂತ್ರಿ ಬಡವರ ಕಲ್ಯಾಣ ಪ್ಯಾಕೇಜ್​ ಘೋಷಿಸಿದ ರೀತಿ ಅಮೋಘ ಎಂದು ಹೇಳಿದ್ದಾರೆ.

    ಈ ಯೋಜನೆಯಡಿ ತೊಂದರೆಯಲ್ಲಿರುವ ಬಡವರಿಗೆ ಉಚಿತವಾಗಿ ಆಹಾರಧಾನ್ಯಗಳನ್ನು ವಿತರಿಸಲಾಗುತ್ತಿದೆ. ಮಹಿಳೆಯರ ಖಾತೆಗಳಿಗೆ ನೇರ ಹಣ ವರ್ಗಾವಣೆ ಮತ್ತು ಬಡ ಕುಟುಂಬಗಳಿಗೆ ಉಚಿತ ಅಡುಗೆ ಅನಿಲ ಸಿಲಿಂಡರ್​ ವಿತರಣೆ ಮಾಡಲು ಅವರು ಕೈಗೊಂಡಿರುವ ಕ್ರಮ ಶ್ಲಾಘನಾರ್ಹ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.

    ವಿಶ್ವದ ಬಹುತೇಕ ರಾಷ್ಟ್ರಗಳು ಕರೊನಾ ವೈರಸ್​ ಸೋಂಕು ತಡೆಗಟ್ಟಲು ಲಾಕ್​ಡೌನ್​ ಘೋಷಿಸಿವೆ. ಇದರಿಂದ ಬಡವರು ತೀವ್ರ ಸಂಕಷ್ಟಕ್ಕೆ ಗುರಿಯಾಗುತ್ತಿದ್ದಾರೆ. ಭಾರತದಂತೆ ಇತರೆ ರಾಷ್ಟ್ರಗಳ ನಾಯಕರು ಕೂಡ ತಮ್ಮ ರಾಷ್ಟ್ರಗಳ ಬಡಜನರ ನೆರವಿಗೆ ಬರಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.

    ‘ನಾಳೆ ಬೆಳಗ್ಗೆ 9ಗಂಟೆಗೆ ದೇಶದ ಜನರಿಗೆ ಒಂದು ವಿಡಿಯೋ ಸಂದೇಶ ನೀಡಲಿದ್ದೇನೆ…’ : ಪ್ರಧಾನಿ ನರೇಂದ್ರ ಮೋದಿ ಟ್ವೀಟ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts