More

    ಅಸ್ಸಾಂ ನೂತನ ಸಿಎಂ ಯಾರಾಗ್ತಾರೆ? ಮುಂದುವರೆದ ಕುತೂಹಲ, ಇಬ್ಬರು ನಾಯಕರಲ್ಲಿ ತೀವ್ರ ಪೈಪೋಟಿ

    ಗುವಾಹಟಿ: ಇತ್ತೀಚೆಗೆ ತೆರೆಕಂಡ ಅಸ್ಸಾಂ ವಿಧಾನಸಭೆ ಚುನಾವಣೆಯಲ್ಲಿ ಎನ್​ಡಿಎ ಮೈತ್ರಿಕೂಟ ಭರ್ಜರಿ ಯಶಸ್ಸು ಸಾಧಿಸಿದೆ. ಆ ಮೂಲಕ ಎರಡನೇ ಬಾರಿ ಅಧಿಕಾರದ ಗದ್ದುಗೆಯನ್ನು ಏರುತ್ತಿದೆ.

    ಆದರೆ, ಇತ್ತ ಅಸ್ಸಾಂ ನೂತನ ಮುಖ್ಯಮಂತ್ರಿಯಾಗಲು ಸಿಎಂ ಸರ್ಬಾನಂದ ಸೋನುವಾಲಾ ಹಾಗೂ ಆರೋಗ್ಯ ಮಂತ್ರಿ ಹಿಮಾಂತ್ ಬಿಸ್ವಾ ಶರ್ಮಾ ನಡುವೆ ಪೈಪೋಟಿ ನಡಿದಿದೆ. ಎರಡನೇ ಬಾರಿ ಸಿಎಂ ಆಗಬೇಕೆಂದು ಹಠ ತೊಟ್ಟಿರುವ ಸೋನುವಾಲಾಗೆ ಶರ್ಮಾ ಅವರು ಅಡ್ಡಿಯಾಗಿದ್ದಾರೆ.

    ಆದರೆ, ಅಸ್ಸಾಂನಲ್ಲಿ ಎರಡನೇ ಬಾರಿಗೆ ಬಿಜೆಪಿ ಮೈತ್ರಿಕೂಟವನ್ನು ಅಧಿಕಾರಕ್ಕೆ ತರುವಲ್ಲಿ ಹಿಮಾಂತ್ ಬಿಸ್ವಾ ಶರ್ಮಾ ಅವರದು ದೊಡ್ಡ ಪ್ರಯತ್ನ ಇದೆ. ಈ ನಿಟ್ಟಿನಲ್ಲಿ ಬಿಜೆಪಿ ಹೈಕಮಾಂಡ್ ಇಬ್ಬರಲ್ಲಿ ಯಾರಿಗೆ ಮಣೆ ಹಾಕುತ್ತದೆ? ಎಂಬ ಕುತೂಹಲಕ್ಕೆ ಸದ್ಯದಲ್ಲೇ ತೆರೆ ಬೀಳಲಿದೆ.

    ಏತನ್ಮದ್ಯೆ ಈ ಇಬ್ಬರೂ ನಾಯಕರು ಶನಿವಾರ ದೆಹಲಿಗೆ ತೆರಳಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಹಾಗೂ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿದ್ದಾರೆ. ಇಬ್ಬರ ಜೊತೆಯೂ ಮಾತುಕತೆ ನಡೆಸಿರುವ ಹೈಕಮಾಂಡ್, ಸಿಎಂ ಯಾರಾಗಲಿದ್ದಾರೆ ಎಂಬ ಗುಟ್ಟನ್ನು ಇನ್ನೂ ಬಿಟ್ಟು ಕೊಟ್ಟಿಲ್ಲ. ಕೆಲ ಮಾಧ್ಯಮಗಳ ವರದಿ ಪ್ರಕಾರ ಸೋಮವಾರ ನೂತನ ಸಿಎಂ ಪ್ರಮಾಣವಚನ ತೆಗೆದುಕೊಳ್ಳಲಿದ್ದಾರೆ. ಈ ಚುನಾವಣೆಯಲ್ಲಿ ಎನ್​ಡಿಯ ಮೈತ್ರಿಕೂಟ 69 ಸ್ಥಾನಗಳನ್ನು ಗೆದ್ದಿತ್ತು. ಅಸ್ಸಾಂ ವಿಧಾನಸಭೆ ಬಲ 126.

    ಕೋವಿಡ್‌ ಬಿಕ್ಕಟ್ಟು ನಿಭಾಯಿಸಲು ಸರ್ಕಾರಕ್ಕೆ ಎಚ್‌ಡಿ ಕುಮಾರಸ್ವಾಮಿ ಹತ್ತು ಸಲಹೆ

    ಜಿಂದಾಲ್​ಗೆ 3667 ಎಕರೆ ಭೂಮಿ ನೀಡುತ್ತಿರುವ ರಾಜ್ಯ ಸರ್ಕಾರದ ನಿರ್ಧಾರ ವಿರೋಧಿಸಿದ ಬಿಜೆಪಿ ಶಾಸಕರು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts