More

    ಜಿಂದಾಲ್​ಗೆ 3667 ಎಕರೆ ಭೂಮಿ ನೀಡುತ್ತಿರುವ ರಾಜ್ಯ ಸರ್ಕಾರದ ನಿರ್ಧಾರ ವಿರೋಧಿಸಿದ ಬಿಜೆಪಿ ಶಾಸಕರು!

    ಬೆಂಗಳೂರು: ಜಿಂದಾಲ್‌ ಕಂಪನಿಗೆ ಭೂಮಿ ನೀಡುವ ವಿಚಾರ ಪುನರ್ ಪರಿಶೀಲಿಸಲು ಸಿಎಂಗೆ ಕೆಲ ಬಿಜೆಪಿ ಶಾಸಕರೇ ಪತ್ರ ಬರೆದಿದ್ದಾರೆ. ಈ ಮೂಲಕ ರಾಜ್ಯ ಸರ್ಕಾರ ಜಿಂದಾಲ್ ಸಂಸ್ಥೆಗೆ ಜಮೀನು ನೀಡಿರುವುದಕ್ಕೆ ಆಡಳಿತ ಪಕ್ಷದಿಂದಲೇ ವಿರೋಧ ವ್ಯಕ್ತವಾಗಿದೆ.

    ಈ ಬಗ್ಗೆ ಮರುಪರಿಶೀಲನೆ ನಡೆಸುವಂತೆ ಬಿಜೆಪಿಯ ಶಾಸಕರು ಮುಖ್ಯಮಂತ್ರಿಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದು, ಜಿಂದಾಲ್‌ಗೆ ಜಮೀನು ನೀಡುವ ತೀರ್ಮಾನವನ್ನು ಸರ್ಕಾರ ಮರು ಪರಿಶೀಲನೆ ಮಾಡಬೇಕೆಂದು ಆಗ್ರಹಿಸಿದ್ದಾರೆ.

    ಶಾಸಕರಾದ ಬಸನಗೌಡ ಯತ್ನಾಾಳ, ಅರವಿಂದ ಬೆಲ್ಲದ, ಆರ್. ಪೂರ್ಣಿಮಾ ಸತೀಶ್ ರೆಡ್ಡಿ, ಉದಯ ಗರುಡಾಚಾರ್ಯ, ಅಭಯ್ ಪಾಟೀಲ್, ಸುನೀಲ್ ಕುಮಾರ್ ಸೇರಿದಂತೆ 45 ಕ್ಕೂ ಹೆಚ್ಚು ಶಾಸಕರು ಈ ಪತ್ರಕ್ಕೆ ಸಹಿ ಹಾಕಿದ್ದಾರೆ ಎನ್ನಲಾಗಿದೆ.

    ರಾಜ್ಯ ಸರ್ಕಾರ ಏಪ್ರಿಲ್ 24 ರಂದುನಡೆದ ಸಚಿವ ಸಂಪುಟ ಸಭೆಯಲ್ಲಿ ಬಳ್ಳಾರಿ ಜಿಲ್ಲೆಯಲ್ಲಿರುವ ಜಿಂದಾಲ್ ಉಕ್ಕು ಕಂಪನಿಗೆ 3667 ಎಕರೆ ಸರ್ಕಾರಿ ಭೂಮಿಯನ್ನು ಅತಿ ಕಡಿಮೆ ದರಕ್ಕೆ ಶುದ್ಧ ಕ್ರಯ ಪತ್ರ ಮಾಡಿಕೊಡಲು ಒಪ್ಪಿಗೆ ನೀಡಿತ್ತು.

    ಇದನ್ನೂ ಓದಿ: ನಿಮ್ಮ ಜೀವನ ಶೈಲಿಯನ್ನೇ ಬದಾಲಾಯಿಸುವಂತಹ ಕ್ರೀಡಾಪಟುವಿನ ಸ್ಫೂರ್ತಿದಾಯಕ ಕತೆಯಿದು..!

    ಇದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿತ್ತು. ಇಡೀ ರಾಜ್ಯ ಕೋವಿಡ್ ಸಂಕಷ್ಟದಲ್ಲಿರುವ ಈ ಸಂದರ್ಭದಲ್ಲಿ ತೆಗೆದುಕೊಂಡಿರುವ ನಿರ್ಧಾರದ ಬಗ್ಗೆ ಮರು ಪರಿಶೀಲನೆ ನಡೆಸುವುದು ಸೂಕ್ತ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಅಲ್ಲದೇ ಹಿಂದಿನ ಮೈತ್ರಿ ಸರ್ಕಾರ ಜಿಂದಾಲ್‌ಗೆ ಜಮೀನು ನೀಡುವ ತೀರ್ಮಾನ ತೆಗೆದುಕೊಂಡಾದ ಅದರ ವಿರುದ್ಧ ಸದನದ ಒಳಗೆ ಮತ್ತು ಹೊರಗೆ ಹೋರಾಟ ನಡೆಸಲಾಗಿತ್ತು. ಈ ವಿಚಾರವನ್ನು ಪಕ್ಷದ ಶಾಸಕಾಂಗ ಸಭೆಯಲ್ಲಿ ಚರ್ಚಿಸದೇ ತೀರ್ಮಾನ ತೆಗೆದುಕೊಳ್ಳಬೇಕಾಗಿತ್ತು ಎಂದು ಪತ್ರದಲ್ಲಿ ತಿಳಿಸಲಾಗಿದೆ.

    ಈಗ ರಾಜ್ಯ ಸರ್ಕಾರ ಕಡಿಮೆ ದರಕ್ಕೆ ಜಿಂದಾಲ್‌ಗೆ ಜಮೀನು ನೀಡಲು ತೀರ್ಮಾನಿಸಿರುವುದರಿಂದ ಬಿಜೆಪಿ ಸರ್ಕಾರ ಎಷ್ಟು ಕಿಕ್ ಬ್ಯಾಕ್ ಪಡೆದಿದೆ ಎಂಬ ಪ್ರಶ್ನೆಗಳು ಸಾರ್ವಜನಿಕ ವಲಯದಿಂದ ಕೇಳಿಬರುತ್ತಿವೆ. ಅಷ್ಟೊಂದು ಬೆಲೆ ಬಾಳುವ ಭೂಮಿಯನ್ನು ಕೇವಲ ಎಕರೆಗೆ 1.28 ಲಕ್ಷ ರೂ.ಗೆ ಕ್ರಯ ಪತ್ರ ಮಾಡಲು ಮುಂದಾಗಿರುವುದು ರಾಜ್ಯದ ಬೊಕ್ಕಸಕ್ಕೆ ದೊಡ್ಡ ನಷ್ಟ ಮಾಡಿದಂತಾಗುತ್ತದೆ ಎಂದಿದ್ದಾರೆ.

    ಹೀಗಾಗಿ ರಾಜ್ಯ ಸರ್ಕಾರ ಈಗ ತೆಗೆದುಕೊಂಡಿರುವ ತೀರ್ಮಾನವನ್ನು ಮರು ಪರಿಶೀಲನೆ ನಡೆಸಬೇಕು ಮತ್ತು ಈ ವಿಚಾರದ ಬಗ್ಗೆ ಪಕ್ಷದ ಶಾಸಕಾಂಗ ಸಭೆಯಲ್ಲಿ ಮತ್ತೊಮ್ಮೆ ಚರ್ಚೆಗೆ ಅವಕಾಶ ಕಲ್ಪಿಸಿಕೊಡಬೇಕು ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

    ಕೋವಿಡ್‌ ಬಿಕ್ಕಟ್ಟು ನಿಭಾಯಿಸಲು ಸರ್ಕಾರಕ್ಕೆ ಎಚ್‌ಡಿ ಕುಮಾರಸ್ವಾಮಿ ಹತ್ತು ಸಲಹೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts