More

    ಕ್ವಾರಂಟೈನ್​​ಗಾಗಿ ಮನೆಯಲ್ಲಿ ಜಾಗವಿಲ್ಲವೆಂದು ಆತ ಕಾಡಿಗೇನೂ ಹೋಗಲಿಲ್ಲ, ಆದರೆ…..

    ಭುವನೇಶ್ವರ : ಕೋವಿಡ್-19 ನಿಂದಾಗಿ ಜನ ಇನ್ನೂ ಎಲ್ಲೆಲ್ಲಿ ವಾಸಿಸುವ ಪರಿಸ್ಥಿತಿ ಬರುತ್ತದೋ ದೇವರೇ ಬಲ್ಲ..!
    ಯಾಕೆ ಅಂತೀರಾ? ಸಾಂಸ್ಥಿಕ ಕ್ವಾರಂಟೈನ್ ವಿಸ್ತರಿಸುವಂತೆ ಮಾಡಿದ ಮನವಿ ತಿರಸ್ಕೃತಗೊಂಡಿದ್ದರಿಂದ ತಮಿಳುನಾಡಿನಿಂದ ವಾಪಸಾದ 28 ವರ್ಷದ ಯುವಕನೊಬ್ಬ ಮನೆಯಲ್ಲಿ ಸ್ವಯಂ ಕ್ವಾರಂಟೈನ್​​ಗೆ ಸಾಕಷ್ಟು ಸ್ಥಳವಿಲ್ಲದೆ ಶೌಚಾಲಯದಲ್ಲಿ ಏಳು ದಿನಗಳನ್ನು ಕಳೆದಿರುವ ಸಂಗತಿ ಬೆಳಕಿಗೆ ಬಂದಿದೆ. 

    ಇದನ್ನೂ ಓದಿ :  ಸಂಗಾತಿ ಮುಟ್ಟಾದರೆ ಪುರುಷರಿಗೆ ವೇತನಸಹಿತ ರಜೆ ನೀಡುತ್ತಂತೆ ಈ ಕಂಪನಿ…!

    ಮಾನಸ್ ಪತ್ರಾ ಸರ್ಕಾರದ ತಾತ್ಕಾಲಿಕ ವೈದ್ಯಕೀಯ ಕ್ಯಾಂಪ್​​ನಲ್ಲಿ ಏಳು ದಿನಗಳ ಕಾಲ ಇದ್ದು, ನಂತರ ಬಿಡುಗಡೆಗೊಂಡಿದ್ದರು. ಆ ಕೇಂದ್ರದಲ್ಲಿ ಏಳು ದಿನ ಉಳಿದುಕೊಂಡ ನಂತರ, ಮನೆಯ ಐಸೋಲೇಷನ್​​ನಲ್ಲಿ ಮತ್ತೊಂದು ವಾರ ಕಳೆಯಲು ಅವರಿಗೆ ತಿಳಿಸಲಾಗಿತ್ತು.
    ಜಮುಗಾಂವ್ ಗ್ರಾಮದಲ್ಲಿರುವ ತಮ್ಮ ಮನೆಯಲ್ಲಿ ಸಾಕಷ್ಟು ಸ್ಥಳವಿಲ್ಲದಿರುವುದರಿಂದ ಪತ್ರಾ, ತಮಗೆ ಅಲ್ಲಿಯೇ ಸಾಂಸ್ಥಿಕ ಕ್ವಾರಂಟೈನ್​​ನ ಅವಧಿಯನ್ನು ವಿಸ್ತರಿಸುವಂತೆ ಕೋರಿದರು. ಆದರೆ ಅದಕ್ಕೆ ಅನುಮತಿ ಸಿಗಲಿಲ್ಲ. ಪರ್ಯಾಯ ಮಾರ್ಗವಿಲ್ಲದೆ ಪತ್ರಾ, ಮನೆಯ ಸಮೀಪದ ಸ್ವಚ್ಛ್ ಭಾರತ್ ಶೌಚಾಲಯದಲ್ಲಿ ಆಶ್ರಯ ಪಡೆದರು.

    ಇದನ್ನೂ ಓದಿ:  ಸುಶಾಂತ್​​ಗೆ ನಿರ್ಮಾಪಕ ಅಭಿಷೇಕ್ ದಂಪತಿ ಹೇಗೆ ವಿಶೇಷ ಗೌರವ ಸಲ್ಲಿಸಲಿದ್ದಾರೆ ಗೊತ್ತಾ?

    “ನನ್ನ ಕ್ವಾರಂಟೈನ್ ಅವಧಿ ವಿಸ್ತರಿಸುವಂತೆ ಸ್ಥಳೀಯ ಅಧಿಕಾರಿಗಳಿಗೆ ಮನವಿ ಮಾಡಿದ್ದೆ. ಆದರೆ ಅವರು ನನಗೆ ಅನುಮತಿಸಲಿಲ್ಲ. ಆದ್ದರಿಂದ, ಕುಟುಂಬ ಸದಸ್ಯರ ಸುರಕ್ಷತೆಗಾಗಿ ನಾನು ಶೌಚಾಲಯದಲ್ಲಿ ಉಳಿಯಬೇಕಾಯಿತು ಎಂದು ಪತ್ರಾ ತಿಳಿಸಿದ್ದಾರೆ.
    ಅವರು ಜೂನ್ 9 ರಿಂದ 15 ರವರೆಗೆ ಏಳು ದಿನಗಳನ್ನು ತಮ್ಮ ಮನೆಯ ಸಮೀಪದಲ್ಲೇ 6×8 ಅಡಿ ಜಾಗದಲ್ಲಿ ಹೊಸದಾಗಿ ನಿರ್ಮಿಸಿದ, ಬಳಕೆಗೆ ಸಿದ್ಧವಾಗಿರುವ ಶೌಚಾಲಯದಲ್ಲಿ ಕಳೆದಿದ್ದಾರೆ.

    ಇದನ್ನೂ ಓದಿ: ಪುರಿ ಜಗನ್ನಾಥನೇ ನಮ್ಮನ್ನು ಕ್ಷಮಿಸುವುದಿಲ್ಲ ಎಂದ ಸುಪ್ರೀಂ ಕೋರ್ಟ್​

    ಈ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ ಎಂದು ನವ್ ಗಾಂವ್‌ನ ಕ್ಷೇತ್ರಾಭಿವೃದ್ಧಿ ಅಧಿಕಾರಿ ರಶ್ಮಿ ರೇಖಾ ಮಲ್ಲಿಕ್ ಹೇಳಿದ್ದಾರೆ.
    “ಸ್ವಯಂ ಕ್ವಾರಂಟೈನ್​ಗಾಗಿ ಮನೆಯಲ್ಲಿ ಸಾಕಷ್ಟು ಸೌಲಭ್ಯವಿಲ್ಲದವರಿಗೆ ಕ್ವಾರಂಟೈನ್ ಕೇಂದ್ರಗಳಲ್ಲಿ ಅಗತ್ಯವಿದ್ದಷ್ಟು ದಿನ ಇರಲು ಅನುಮತಿ ನೀಡಬೇಕೆಂದು ಸರಪಂಚ್ (ಗ್ರಾಮ ಮುಖ್ಯಸ್ಥರು) ಅವರನ್ನು ಕೇಳಲಾಗಿದೆ ಎಂದು ಅವರು ತಿಳಿಸಿದರು.

    ಇದನ್ನೂ ಓದಿ:  ಕೆಟ್ಟ ವಿಮರ್ಶೆ ಬರೆದುದಕ್ಕೆ ಮನೆಗೆ ಬಂತು ಜಿರಳೆ, ಜೇಡ, ಹಂದಿ ಮಾಸ್ಕ್​!

    ಈ ಮೊದಲು, ವಾಪಸಾದವರನ್ನು 14 ದಿನಗಳ ಕಾಲ ಕ್ವಾರಂಟೈನ್​​ನಲ್ಲಿರಿಸಲಾಗಿತ್ತು. ನಂತರ ಇದನ್ನು ಆರೋಗ್ಯ ಸಚಿವಾಲಯದ ಮಾರ್ಗಸೂಚಿಗಳ ಪ್ರಕಾರ ಏಳು ದಿನಗಳ ಸಾಂಸ್ಥಿಕ ಕ್ವಾರಂಟೈನ್​​​ ಹಾಗೂ 1 ವಾರದ ಹೋಮ್ ಕ್ವಾರಂಟೈನ್​​ಗೆ ಕಡಿಮೆಗೊಳಿಸಲಾಗಿದೆ ಎಂದು ವಿಶೇಷ ಪರಿಹಾರ ಆಯುಕ್ತರ ಕಚೇರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 

    ಜೇನು ನೊಣಗಳಿಗೆ ಇನ್ನಿಲ್ಲದ ಕೆಲಸ ನೀಡಿದ ಲಾಕ್​ಡೌನ್​….!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts