More

    ವಿಶ್ವದ ಬಲಿಷ್ಠ ಕರೆನ್ಸಿಗಳ ಪಟ್ಟಿ ಬಿಡುಗಡೆ: ಭಾರತದ ರೂಪಾಯಿಗೆ ಎಷ್ಟನೇ ಸ್ಥಾನ?

    ಬೆಂಗಳೂರು: ಕರೆನ್ಸಿಯು ಜಾಗತಿಕ ವ್ಯಾಪಾರದ ಜೀವಾಳವಾಗಿದ್ದು, ದೇಶದ ಆರ್ಥಿಕತೆಯನ್ನು ಬಿಂಬಿಸುವ ಪ್ರಧಾನ ಸಾಧನ. ಯುನೈಟೆಡ್ ನೇಷನ್ ಆರ್ಗನೈಸೇಷನ್ ವಿಶ್ವದ 180 ಕರೆನ್ಸಿಗಳನ್ನು ಅಧಿಕೃತವಾಗಿ ಕಾನೂನಾತ್ಮಕ ಕರೆನ್ಸಿ ಎಂದು ಪರಿಗಣಿಸಿದೆ. ಅವುಗಳಲ್ಲಿ ಹಲವು ಕರೆನ್ಸಿಗಳು ಪ್ರಚಲಿತವಾಗಿವೆ.

    ಆದರೆ, ಅವೆಲ್ಲವೂ ಬಲಿಷ್ಠ ಕರೆನ್ಸಿಗಳೆಂಬ ಪಟ್ಟಿಯಲ್ಲಿ ಮೌಲ್ಯಯುತವೆಂದು ಗಣನೆಗೆ ಬರುವುದಿಲ್ಲ. ಜಾಗತಿಕ ವ್ಯವಹಾರದಲ್ಲಿ ತಮ್ಮ ಮೌಲ್ಯವನ್ನು ಸಾಬೀತು ಪಡೆಸಿಕೊಂಡಿರುವ ವಿಶ್ವದ ಬಲಿಷ್ಠ ಕರೆನ್ಸಿಗಳ ಪಟ್ಟಿಯನ್ನು ಫೊರ್ಬ್ಸ್ ಬಿಡುಗಡೆ ಮಾಡಿದ್ದು, ಯಾವ ಕಾರಣಕ್ಕಾಗಿ ಅವು ಅಂತಾರಾಷ್ಟ್ರೀಯ ವಹಿವಾಟಿನಲ್ಲಿ ಪ್ರಮುಖವೆನ್ನಿಸುತ್ತದೆ ಎಂಬ ಅಂಶಗಳನ್ನು ತಿಳಿಸಿದೆ.

    ಈ ಪಟ್ಟಿಯಲ್ಲಿ ಭಾರತದ ರೂಪಾಯಿಯು 15ನೇ ಸ್ಥಾನ ಪಡೆದುಕೊಂಡಿದ್ದು, ಯುಎಸ್‌ನ ಡಾಲರ್ ಮೌಲ್ಯದಲ್ಲಿ 82.9 ಬೆಲೆ ಹೊಂದಿದೆ. ಇನ್ನು ಅಗ್ರಸ್ಥಾನದಲ್ಲಿ ಕುವೈತ್‌ನ ದಿನಾರ ಇದ್ದು, ಡಾಲರ್ಸ್‌ ಮೌಲ್ಯದಲ್ಲಿ ಇದರ ಬೆಲೆ 3.25 ಆಗಿದ್ದರೆ, ಭಾರತೀಯ ರೂಪಾಯಿ ಮೌಲ್ಯದಲ್ಲಿ 270.23 ರೂ. ಆಗಿದೆ. 2ನೇ ಸ್ಥಾನದಲ್ಲಿ ಬಹ್ರೇನಿ ದಿನಾರ ಇದ್ದು, ರೂಪಾಯಿ ಮೌಲ್ಯದಲ್ಲಿ 220.4 ಬೆಲೆಹೊಂದಿದ್ದರೆ, 2.65 ಡಾಲರ್ ಮೌಲ್ಯ ಹೊಂದಿದೆ.

    ಗಮನಾರ್ಹ ವಿಷಯವೆಂದರೆ ವಿಶ್ವದ ಬಲಿಷ್ಠ ರಾಷ್ಟ್ರವೆಂದೇ ಗುರುತಿಸಲ್ಪಡುವ ಹಾಗೂ ಅತಿ ಹೆಚ್ಚು ಜನಪ್ರಿಯತೆ ಹೊಂದಿರುವ ಯುನೈಟೆಡ್ ಸ್ಟೇಟ್‌ನ ಡಾಲರ್ 10ನೇ ಸ್ಥಾನದಲ್ಲಿದ್ದು, ರೂಪಾಯಿ ಮೌಲ್ಯದಲ್ಲಿ 83.10 ಬೆಲೆ ಹೊಂದಿದೆ.  

    500 ಮಿಲಿಯನ್‌ಗಿಂತಲೂ ಹೆಚ್ಚು ಜನರು ಬಳಸುತ್ತಿರುವ ವಾಟ್ಸ್​ಆ್ಯಪ್​ ನ ಈ ಫೀಚರ್​​​ಗೆ ಸೇರಿಸಲಾಗಿದೆ 3 ಹೊಸ ಆಯ್ಕೆಗಳು

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts