More

    ರಾಜಧರ್ಮ ರಾಜನೀತಿ: ರಾಷ್ಟ್ರಕ್ಕೇ ಹಿಡಿದ ಒಳಶತ್ರುಗಳ ಗ್ರಹಣ ಬಿಡುವುದೆಂತು?

    ರಾಜಧರ್ಮ ರಾಜನೀತಿ: ರಾಷ್ಟ್ರಕ್ಕೇ ಹಿಡಿದ ಒಳಶತ್ರುಗಳ ಗ್ರಹಣ ಬಿಡುವುದೆಂತು?

    ಕಾಂಗ್ರೆಸ್ ಮರಿ ಸರ್ಕಾರಗಳಿಗೆ ಯಾವುದಕ್ಕೂ ಈಗಿನ ಮೋದಿಯವರ ತಾಕತ್ತು ಇರಲಿಲ್ಲ. ಕಾರಣ? ದೇಶಭಕ್ತಿಯ ಕೊರತೆ? ‘ಹೇಗೋ ತೂಗಿಸಿಕೊಂಡು ಹೋದರಾಯ್ತು’ ಅಧಿಕಾರ, ಭೋಗಸ್ಥಾನ ಆದಷ್ಟು ಬಳಿದುಕೊಂಡು ಹೋದರಾಯ್ತು ಎಂಬ ಉದಾಸೀನ ಧೋರಣೆ! ಅದಕ್ಕೆ ಇನ್ನೂ ಈಗ ನಾವು ನೀವೂ ಬೆಲೆ ತೆರುತ್ತಿದ್ದೇವೆ.

    ‘ಅಲ್ಟ್ರಾ ರ್ಯಾಷನಲಿಸ್ಟ್ ್ಸ ಎಂಬ ವರ್ಗದ ಮೂಢರು ‘ರಾಹುವೂ ಇಲ್ಲ, ಕೇತುವೂ ಇಲ್ಲ, ಇದೆಲ್ಲ ಪುರಾಣದ ಕಟ್ಟುಕಥೆ’ ಎಂದು ಭಾರತೀಯ ಗೂಢಾರ್ಥದ ‘ಮಿಥ್’ಗಳನ್ನು ಅಲ್ಲಗಳೆಯುತ್ತ ಜ್ಞಾನಭ್ರಷ್ಟರಾಗಿರುವುದು ಸರ್ವವಿದಿತ. ಜೋಯಿಸರೂ, ಭಾರತೀಯ ವಿದ್ಯಾ, ವಿನ್ಯಾಸ, ವ್ಯಾಖ್ಯಾನ, ಶೈಲಿಗಳನ್ನು ಅರಿತವರು ಇವರನ್ನು ಉಪೇಕ್ಷಿಸಿರುವುದು, ಇವರಿಗೆ ‘ಗೆದ್ದೆವು’ ಎಂಬ ಮೌಢ್ಯ, ಜಾಡ್ಯ ತಂದುಕೊಟ್ಟಿರುವಂತಿದೆ. ದೆವ್ವ ಬಿಡಿಸೋಣ. ಕೇಳಿ. ‘ಗ್ರಹ’ ಎಂದರೆ ಹಿಡಿಯುವುದು, ‘ಹಿಡಿತ=ಗ್ರಹಣ’, ‘ಪಾಣಿಗ್ರಹಣ’ ಇದೆ. ‘ಅಧಿಕಾರಗ್ರಹಣ’ ಇದೆ. ಎಂತೆಂಥದೋ ಗ್ರಹಣಗಳಿವೆ. ‘ಭೂತಗ್ರಹ, ಪಿಶಾಚಗ್ರಹ, ಕೂಶ್ಮಾಂಡಗ್ರಹ… ಇವುಗಳ ಉಚ್ಚಾಟನೆಗೆ ಸುದರ್ಶನ ಮಹಾಮಂತ್ರವೇ ಇದೆ. ಈ ‘ಗ್ರಹ’ ಶಬ್ದದಲ್ಲಿ ಆಕ್ಷೇಪಣೀಯವಿಲ್ಲ.

    ಸೂರ್ಯ ಚಂದ್ರರ ನಡುವೆ ಭೂಮಿಯೋ, ಸೂರ್ಯ ಭೂಮಿಯ ನಡುವೆ ಚಂದ್ರನೋ ಹಾಯ್ದಾಗ ‘ನೆರಳು’ ಬೀಳುತ್ತದೆ. ಆ ಆಕಾರದ ದಪ್ಪನೆಯ ಭಾಗವನ್ನು ತಲೆ, ಕೇತುವೆಂದೂ, ತಲೆ ಇಲ್ಲದ ಬಾಲವನ್ನು ರಾಹುವೆಂದೂ ವ್ಯವಹರಿಸುತ್ತೇವೆ. ನೆರಳಿಗೂ ‘ಹಿಡಿಯುವ’ ಶಕ್ತಿಯುಂಟು. ಬಿಸಿಲಿದ್ದರೆ ತಾನೇ ನೆರಳು? ಆದರೆ ಕೆಲವು ಸಮುದಾಯಗಳು ಕತ್ತಲೆಯನ್ನೇ ಪ್ರೀತಿಸುತ್ತವೆ! ರಾವಣನ ಸೇನೆಯಲ್ಲಿ ‘ಸೂರ್ಯಶತ್ರು’ ಎಂದೊಬ್ಬ ಇದ್ದ ಅಂತ ರಾಮಾಯಣ ಹೇಳುತ್ತದೆ. ಹನುಮಂತ ಸಮುದ್ರ ಹಾರಿದಾಗ ಲಂಕೆಯ ಬಳಿ, ಸಮುದ್ರದಲ್ಲಿ ಸಿಂಹಿಕೆ ಎಂಬ ರಾಕ್ಷಸಿ ಇದ್ದಳು. ‘ನೆರಳನ್ನೇ ಹಿಡಿದು’ ಹಾರುವವನನ್ನು ಹಾರದಂತೆ ಮಾಡುತ್ತಿದ್ದಳೆಂದು ಅವಳನ್ನು ವಾಲ್ಮೀಕಿ ‘ಛಾಯಾಗ್ರಾಹೀ’ ಎಂದು ವರ್ಣಿಸಿದ್ದಾರೆ. ಇದು ಫೋಟೋಗ್ರಾಫರ್ ಎಂದರ್ಥದಲ್ಲಿ ಅಲ್ಲ. ಅದನ್ನೇ ‘ಹಿಡಿದು’=‘ಗ್ರಹಣ ಮಾಡಿ’-ಬ್ಲಾಕ್​ವೆುೕಲ್ ಮಾಡುವವರೂ ಈಗ ರಾಹು-ಕೇತುಗಳೇ. ಇರಲಿ. ಸೂರ್ಯ-ಚಂದ್ರರಂತೆ ಬೆಳಗುವ ಜ್ಯೋತಿಗಳಿಗೆಲ್ಲ ಗ್ರಹಣವುಂಟು. ಕಾಣದೇ ಇರಬಹುದು. ಸಮುದಾಯಗಳು, ಇತಿಹಾಸದಲ್ಲಿ ರಾಷ್ಟ್ರಗಳೂ, ಮತಶ್ರದ್ಧೆಗಳೂ ‘ಗ್ರಹಣ’ ಹಿಡಿಯುವುದುಂಟು! ಭಾರತಕ್ಕೆ ಅಲೆಕ್ಸಾಂಡರ್, ಹಿಂದಿನ ಡೇರಿಯಸ್, ಮಿನಾಂಡರ್, ಆಮೇಲೆ ಮೊಗಲರು, ಖಿಲ್ಜಿ, ಘಸ್ನಿ, ತುಗಲಖ್- ಈ ಎಲ್ಲರೂ ರಾಹು, ಕೇತುಗಳಾಗಿಯೇ ವಕ್ಕರಿಸಿದರು. ಗೊತ್ತಿದೆ. ಆದರೆ, ‘ಗ್ರಹಣ’ದ ವಿಮೋಚನೆಯ ಕಾಲದಲ್ಲಿ, ದೇಶ ತುಂಡಾಗಿ, ಗಾಂಧಿ, ನೆಹ್ರೂ, ಕಾಂಗ್ರೆಸ್ಸುಗಳು ಮತ್ತೆ ಗ್ರಹಣ ಹಿಡಿಸಿದವು!

    ಸ್ವಾತಂತ್ರ್ಯ ಬಂದದ್ದು ಅರ್ಧರಾತ್ರಿಯಲ್ಲಿ! ಮಂಗಳವಾರ ಅಂತ ನೆನಪು! ‘ರಾತ್ರಿ’ ಗ್ರಹಣವಲ್ಲವೇನಿರಯ್ಯ? ನೆಹ್ರೂ ಕುಟುಂಬದಲ್ಲೂ ‘ರಾಹು’. ಇಂದಿರಾರು ‘ಸಿಂಹಿಕೆ’. ಪ್ರಿಯಾಂಕಾ, ರಾಹುಲರು ಎಲ್ಲಿ ಎಲ್ಲಿ ಸಲ್ಲುತ್ತಾರಯ್ಯ? ಇವರ ಕಥೆ ಹೇಳಬೇಕಾಗಿದೆ. ‘ಗೋವಾ ಕ್ರಾನಿಕಲ್’ ಅಂತ ಒಂದು ಪತ್ರಿಕೆಯಲ್ಲಿ ಬಂದ ವರದಿ ಓದಿ! 1992ರಲ್ಲಿ ರಷ್ಯಾದ ಒಬ್ಬ ಮಹಿಳೆ ಒಂದು ಪುಸ್ತಕ ಬರೆದಳು-‘The State within a State-KGB and Russia’ ಎಂಬುದು ಅದರ ಶೀರ್ಷಿಕೆ. ಲೇಖಕಿಯ ಹೆಸರು Yevgenia Albats, ಇವಳು ಪತ್ರಿಕಾಕರ್ತಳು. 1991ರಲ್ಲಿ ಇವಳನ್ನು ಆಗಿನ ರಷ್ಯಾಅಧ್ಯಕ್ಷ ಯೆಲ್ಟ್​ಸಿನ್ ಒಂದು ವಿಚಾರಣಾ ಸಮಿತಿಗೆ ನೇಮಿಸಿದ್ದ. ವಿಚಾರಣಾ ವಿಷಯ ಕೆಜಿಬಿಯ ವ್ಯವಹಾರ, ಆಳ-ಅಗಲ ಶೋಧನೆ ಕುರಿತು. ಈಕೆ ಸಂಶೋಧನೆ ಮಾಡಿ ಬರೆದಿದ್ದರಲ್ಲಿ, ಸೋನಿಯಾ, ರಾಹುಲ್, ಸೋನಿಯಾ ಮಾತಾಪಿತೃಗಳು, ರಷ್ಯಾದ ಗೂಢಚಾರರಾಗಿ ಕೆಲಸ ಮಾಡುತ್ತ, ಸಂಬಳ ಪಡೆಯುತ್ತಿದ್ದರು ಅಂತ! ನೋಡಿ, ಇಂದಿರಾ ಕಾಲದಿಂದ ರಾಹುಲ್​ವರೆಗೆ ಇವರೆಲ್ಲ ಕಮ್ಯುನಿಷ್ಟರ ಏಜೆಂಟರು-ಈಗ ಚೀನಾಕ್ಕೆ ಮಾರಿಕೊಂಡವರು ಎನ್ನಿ. ‘ಸೋವಿಯತ್’ ಬಿದ್ದ ಮೇಲೆ ಇವರಿಗೆ ಆಶ್ರಯ ಬೇಕಲ್ಲ? Change Of Masters ಅಷ್ಟೇ. ಈಗ ಲಡಾಖ್​ನಲ್ಲಿ ನಮ್ಮ ಯೋಧರು ಸತ್ತರೂ, ಇವರ ನಿಷ್ಠೆ ಚೀನಾಕ್ಕೆ. ನಮ್ಮ ಸೇನೆಯನ್ನೇ ತೇಜೋವಧೆ ಮಾಡುವ, ಮೋದಿಯವರನ್ನು ತೆಗಳುವ ಇವರ ‘ರಾಹು’ ಚಟಕ್ಕೆ ಬೇರೇನು ಅರ್ಥಮಾಡುತ್ತೀರಯ್ಯ? ಕಾಂಗ್ರೆಸ್ಸಿಗರೇ?

    2001ರಲ್ಲೇ ಸುಬ್ರಮಣಿಯನ್ ಸ್ವಾಮಿಯವರು, ಹೊಸದಾದ ತನಿಖೆಗಾಗಿ ದೆಹಲಿ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿ, ‘ಇವರೆಲ್ಲ ರಷ್ಯಾ ಏಜೆಂಟರು, ಕೆಜಿಬಿಯ ಗೂಢಚಾರರು, ಆದುದರಿಂದ ಭಾರತಕ್ಕೆ ಶತ್ರುಗಳೆಂದು ಘೋಷಿಸಬೇಕೆಂದೂ, ಇವರ ಕಾರುಬಾರು ಇಲ್ಲಿ ನಡೆಯಲು ತಡೆ ನೀಡಬೇಕೆಂದೂ’ ಅರ್ಜಿ ಹಾಕಿದರು. ಅರ್ಜಿ ವಿವರ CWP NO-529, 2001ರದ್ದು. ಅರ್ಜಿಯಲ್ಲಿ ಸುಬ್ರಮಣಿಯನ್ ಸ್ವಾಮಿಯವರು ಈಕೆಯ ಪುಸ್ತಕದಲ್ಲಿನ ವಿವರಗಳನ್ನು ಕೊಟ್ಟು, ದಾಖಲೆಗಳನ್ನು ಒದಗಿಸಿ, ಇವರು ಭಾರತದ ಸುರಕ್ಷೆಗೆ ಕಂಟಕರು ಎಂದು ಹೇಳಿದ್ದರು. ಕೆಜಿಬಿ ಮೂಲದ ರಷ್ಯಾ ಭಾಷೆಯ ದಾಖಲೆಗಳನ್ನೂ, ಆಂಗ್ಲ ಭಾಷಾಂತರಗಳನ್ನೂ ಒದಗಿಸಿದ್ದ ಸ್ವಾಮಿ ಅಭಿನಂದನಾರ್ಹರು. ಆಗಿನ ಸರ್ಕಾರ? ಕಾಂಗ್ರೆಸ್ಸಲ್ಲವೇ? ಸಿಬಿಐ ಅದರ ಕೈಯಲ್ಲೇ ಇತ್ತಲ್ಲ? ಅದು ‘ಇಲ್ಲಿ ಎಫ್​ಐಆರ್ ಹಾಕಿಲ್ಲವಲ್ಲ’ ಅಂತ ತಕರಾರು ಎಬ್ಬಿಸಿ, ಆಕ್ಷೇಪಿಸಿ, ಅರ್ಜಿಗೆ ತಡೆಯೊಡ್ಡಿತು. ಅಲ್ಲದೆ ಇದಕ್ಕೆ ರಷ್ಯಾದ ಸಮ್ಮತಿಯೂ ಬೇಕೇಂದು ‘ಗೊದಮ’ (ಅಡಚಣೆ) ಹಾಕಿಟ್ಟಿತು. ದೆಹಲಿ ಹೈಕೋರ್ಟ್, ‘ಇದೆಲ್ಲ ಸರಿಯಾದ ಸಾಕ್ಷ್ಯ ಆಧಾರ ಅಲ್ಲ’ ಅಂತ ಅರ್ಜಿಯನ್ನೇ ವಜಾ ಮಾಡಿತು.

    ರಷ್ಯಾದ ಹೆಣ್ಣುಮಗಳು ಕೆಜಿಬಿ ಮುಖ್ಯಸ್ಥ ಚಬ್ರಿಕೋವ್ ಎಂಬುವನು, Communist Party of the Soviet Union, Central Committeeಗೆ ಬರೆದ ದಾಖಲೆಯನ್ನು ತನ್ನ ಪುಸ್ತಕದಲ್ಲಿ ಉಲ್ಲೇಖಿಸಿದ್ದಳು! ಇದು ನಮ್ಮ ಕೋರ್ಟಿಗೆ, ಸಿಬಿಐಗೆ ಪ್ರಮಾಣವೇ ಆಗಲಿಲ್ಲ! ಅವಳ ಪುಸ್ತಕದ ಆಂಗ್ಲ ಭಾಷಾಂತರ ನ್ಯೂರ್ಯಾನ ಒಂದು ಪುಸ್ತಕ ಪ್ರಕಟನಾಲಯದಲ್ಲಿ ದೊರೆಯುತ್ತದೆ. ಭಾಷಾಂತರಕಾರ ಫಾರಾ›ರ್, ಸ್ಟ್ರಾಸ್ ಮತ್ತು ಗಿರಾಕ್ಸ್ ಎಂಬುವರು. ಸುಬ್ರಮಣಿಯನ್ ಸ್ವಾಮಿ ಈ ಬಗ್ಗೆ ಹಿಂದೆಯೇ 2001 ಮೇ 26ರಂದು ಆಗಿನ ಗೃಹಮಂತ್ರಿಗೆ ಪತ್ರ ಬರೆದಿದ್ದರು. ಗೃಹಮಂತ್ರಿಗೇ ಗ್ರಹಣ! ಕಾಂಗ್ರೆಸ್ ಸರ್ಕಾರಕ್ಕೇ ಗ್ರಹಣ ಕಾಲ! ಭಾರತಕ್ಕೆ ವಕ್ಕರಿಸಿದ ಸುದೀರ್ಘ ಗ್ರಹಣ ಕಾಲ ಅದು. ಇನ್ನೂ ಕೇಳಿ. ಈ ಆತಂಕಕಾರಿ ಮಾಹಿತಿ. 1992 ಜುಲೈ 3ರಂದು ಚೆನ್ನೈನ ಆಂಗ್ಲ ಪತ್ರಿಕೆಯಲ್ಲೂ ಪ್ರಕಟವಾಗಿತ್ತು. ಅದರ ಶೀರ್ಷಿಕೆ ಹೀಗಿತ್ತು- ‘KGB helped firm controlled by Rajiv’s family’. ಲೇಖಕ ವ್ಲಾಡಿಮಿರ್ ರಡ್ಯೂಹ್ಸುಯೆನ್. ಸುಬ್ರಮಣಿಯನ್ ಸ್ವಾಮಿ ಈ ದಾಖಲೆಯನ್ನು ಕೋರ್ಟಿಗೆ ಒದಗಿಸಿದ್ದರು. ಕೋರ್ಟು, ‘ಪತ್ರಿಕಾ ರಿಪೋರ್ಟು ಆಧಾರ ಅಲ್ಲ’ ಎಂದು ತಳ್ಳಿ ಹಾಕಲು ನೆಪವೂ ಆಯಿತು. ಪತ್ರಿಕೆ ವರದಿಯಲ್ಲಿ ಒಂದು ತಪು್ಪ ಮಾಡಿತ್ತು, ಏನಂತ? ‘ರಷ್ಯಾದ ಕೆಜಿಬಿಯು ರಾಜೀವರ ಕುಟುಂಬಕ್ಕೆ ಲಾಭದಾಯಕವಾದ ರಷ್ಯಾ ಕಾಂಟ್ರಾಕ್ಟುಗಳನ್ನು ಕೊಟ್ಟಿರಬಹುದಾದ ಸಂಭವ ಇದೆ’ ಎಂದು ತೇಲಿಸಿ ಬರೆದಿತ್ತಲ್ಲ? ರಷ್ಯಾದ ಪುಸ್ತಕದ ಪುಟ 33-35ರ ಜೆರಾಕ್ಸ್ ಪ್ರತಿಗಳನ್ನೂ ಸ್ವಾಮಿ ಒದಗಿಸಿದ್ದರು. ‘ಇದು ಒರಿಜನಲ್ ಅಲ್ಲ’ ಎಂದು ಕೋರ್ಟ್ ತಿರಸ್ಕರಿಸಿತು. ರಷ್ಯಾ ಪುಸ್ತಕದ ಆಂಗ್ಲ ಭಾಷಾಂತರವನ್ನೂ ಕೋರ್ಟು ಒಪ್ಪಲಿಲ್ಲ.

    ನೆಹ್ರೂರು ಪ್ರಕಟವಾಗಿ ಕೋರ್ಟ್ ಖಟ್ಲೆಗಳಲ್ಲಿ ಸಿಕ್ಕಿಹಾಕಿಕೊಳ್ಳಲಿಲ್ಲ. ಏಕೆಂದರೆ, ಚರಿತ್ರೆ ಬಯಲಾಗುವ ಮುಂಚೆಯೇ ಅವರ ನಿಧನವಾಯಿತು. ಈಗಿನ ಅನ್ಯಾಯ ಅಕ್ರಮ, ದಡ್ಡತನ ಭೋಗೀ ಜೀವನದ ರಾಜಕೀಯ ಅಪರಾಧ ಮುಖಗಳು, ತಪು್ಪಗಳು ಎಲ್ಲ ಬಯಲಾಗುತ್ತಿವೆ. ಅದು ಕಾಂಗ್ರೆಸ್ಸಿಗೆ ಸಂಕಟ! ಚಿಲುಮೆಯೇ ಬತ್ತಿದ ಸ್ಥಿತಿ! ಚೀನಾ ಹಗರಣಗಳಿಗೆಲ್ಲ ನೆಹ್ರೂ, ಇಂದಿರಾ, ರಾಜೀವ್, ಸೋನಿಯಾ, ಮನಮೋಹನರು ಇಂಥವರು ಕಾರಣ ಎಂದು ಈಗ ಎಲ್ಲ ಬಯಲಾಗಿದೆ. ರಾಹುಲ್ ಕೋಪಕ್ಕೆ ಕಾರಣ ಇದು. ನೀವು ಒಂದು ಬೆಕ್ಕನ್ನು ಅಟ್ಟಿಸಿಕೊಂಡು ಹೋಗುತ್ತೀರೆನ್ನಿ. ಅದು ಇನ್ನು ಓಡಲಾರದೆ ಗೋಡೆ ಅಡ್ಡ ಬಂದರೆ ನಿಮ್ಮ ಮೇಲೇ ಹಾರುತ್ತದಲ್ಲ? ಹಾಗೆ. ಮೋದಿ ಕರೆದ ಸರ್ವಪಕ್ಷ ಸಭೆಯಲ್ಲಿ- ಇಬ್ಬರೂ ಸೋನಿಯಾ ಬಾಲ ಹಿಡಿದವರು ಬಿಟ್ಟು ಉಳಿದವರೆಲ್ಲ ರಾಷ್ಟ್ರೀಯತೆಯನ್ನು ಎತ್ತಿ ಹಿಡಿದರು. ಸೋನಿಯಾ ಚೀನಾ ಪಕ್ಷವನ್ನೇ ಹಿಡಿದಂತೆ, ಮೋದಿಯವರನ್ನೇ ದೂಷಿಸಿದರು! ಒಂದು ದೊಡ್ಡ ಕೆರೆಯಲ್ಲಿ ‘ಮೋಳೆ’ ಎಂದರೆ ದೊಡ್ಡ ತೂತು ಏರ್ಪಟ್ಟರೆ, ಒಳಗಿಂದ ಮುಚ್ಚಬೇಕು! ಹೊರಗಿಂದ ಅಲ್ಲ! ತಿಳಿಯಿತೇನ್ರಿ? ರಾಷ್ಟ್ರಕ್ಕೆ ಆಪತ್ತಿನ ಕಾಲದಲ್ಲಿ ಈ ಒಳಶತ್ರುಗಳನ್ನೇ ಹಿಡಿದು ಬಾಯಿಮುಚ್ಚಿಸಿ, ಎಲ್ಲಿ ಇಡಬೇಕೋ ಅಲ್ಲಿ ಇಡಬೇಕು. ಅದಕ್ಕೆ ಇಲ್ಲಿ ಪ್ರಜಾತಂತ್ರದ ದುರುಪಯೋಗದಲ್ಲಿ ಗ್ರಹಣ ಹಿಡಿಸಿದವರು ರಾಹುಕೇತುಗಳ ಮೊರೆ ಹೋಗುತ್ತಾ ಇದ್ದಾರೆ. ರಾಹುಲ್ ಇನ್ನೆಷ್ಟು ದಿನ ಅರಚಾಡಬೇಕು? ಮೋದಿಯವರೇ? ಈ ವಾದ್ರಾ ಕುಟುಂಬ, ಸೋನಿಯಾ, ರಾಹುಲ್ ಎಲ್ಲ ‘ಬೇಲ್’ ಮೇಲಿರುವವರಲ್ಲವೇ? ಇನ್ನೆಷ್ಟು ದಿನ ಈ ‘ಸೌಲಭ್ಯ’ ಅವರಿಗೆ ಕೊಡುವುದು ಸರಿ!

    ಕರ್ನಾಟಕದಲ್ಲಿ ಒಬ್ಬರು ಮಾಜಿ, ಒಂದು ಪತ್ರಿಕಾಗೋಷ್ಠಿ, ಸರ್ವಪಕ್ಷ ಸಭೆ ಕರೆದು ಏನು ಸಾಧಿಸಿದರೋ? ಅವರ ಕಾಲದಲ್ಲಿ ಭಾರತಕ್ಕೆ ಮುಳುವಾಗಬಹುದಾದ ಒಂದು ಚೀನೀ ಒಡಂಬಡಿಕೆಯಿತ್ತಲ್ಲ? ‘ಕುಂಬಳಕಾಯಿ ಕಳ್ಳ’ ಎಂದರೆ ‘ನಾನಲ್ಲ’ ಎಂದನಂತೆ ಒಬ್ಬ ಹೆಗಲು ಮುಟ್ಟಿ ನೋಡಿಕೊಂಡು! ಹಾಗೆ. ಕಾಂಗ್ರೆಸ್ ಮರಿ ಸರ್ಕಾರಗಳಿಗೆ ಯಾವುದಕ್ಕೂ ಈಗಿನ ಮೋದಿಯವರ ತಾಕತ್ತು ಇರಲಿಲ್ಲ. ಕಾರಣ? ದೇಶಭಕ್ತಿಯ ಕೊರತೆ? ‘ಹೇಗೋ ತೂಗಿಸಿಕೊಂಡು ಹೋದರಾಯ್ತು’ ಅಧಿಕಾರ, ಭೋಗಸ್ಥಾನ ಆದಷ್ಟು ಬಳಿದುಕೊಂಡು ಹೋದರಾಯ್ತು ಎಂಬ ಉದಾಸೀನ ಧೋರಣೆ! ಅದಕ್ಕೆ ಇನ್ನೂ ಈಗ ನಾವು ನೀವೂ ಬೆಲೆ ತೆರುತ್ತಿದ್ದೇವೆ. ಸೋನಿಯಾ ಪಿತೃಗಳು ಹಿಂದೆಯೂ ಅತ್ತ ನಾಝೀ, ಇತ್ತ ಕೆಜಿಬಿಗಳಿಗೆ ಡಬಲ್ ಗೂಢಚರ್ಯು ಮಾಡುತ್ತಿದ್ದರೆಂದು ಕೇಳಿದ್ದೇವೆ. ಅದೆಲ್ಲ ಬಯಲಾಗಬೇಕು. ಈಗಿನ ಕಾಂಗ್ರೆಸಿನಲ್ಲಿ ಇನ್ನೂ ಚೀನಿ ಏಜೆಂಟರು ಉಂಟು. ಮಾವೋವಾದಿಗಳು, ಸಿಪಿಐ(ಎಂ)ದವರು, ಅವರ ಯುವ ಸೇನೆಗಳು, ಹಿಂದೂದಮನ ದೀಕ್ಷಿತರು, ಅವರ ಮುಖವಾಣಿ ಪತ್ರಿಕೆ, ಟಿ.ವಿ.ಗಳು, ಎಲ್ಲ ಬಯಲಾಗುತ್ತಿದ್ದಾರೆ. ಅದಕ್ಕೆ ದಾರಿ ತಪ್ಪಿಸಲು ಕ್ಷುಲ್ಲಕ ಕಾರಣಕ್ಕೆ ಜನರಿಗೆ ಗ್ರಹಣ ಹಿಡಿಸಲು, ನಾನಾ ತಂತ್ರಗಳು! ಒಬ್ಬರು ಪೆಟ್ರೋಲ್ ಬೆಲೆ ಏರಿಕೆ ಖಂಡಿಸಿ, ತಾವು 25 ರೂಪಾಯಿಗೆ ಪೆಟ್ರೋಲ್ ಮಾರಿದರು. ಅಯ್ಯನವರೇ! ಎಷ್ಟು ದಿನ ಈ ಮಾರಾಟ? ಹಾರಾಟ? ಹಣ ಎಲ್ಲಿಯದು? ಏಕೀ ಪ್ರಚಾರ? ಏಕೀ ಗ್ರಹಣ? ಒಳ್ಳೆಯ ಗ್ರಹಚಾರವಾಯ್ತು ಭಾರತಕ್ಕೆ. ‘ರಾಹು, ಕೇತುಗಳು’ ಈಗ ಚೀನಾ, ಭೂತಾನ್, ಪಾಕ್, ಭಾರತದ ಏಜೆಂಟರು-ಎಲ್ಲರನ್ನೂ ಹಿಡಿದಿದ್ದಾರೆ. Wait! ಗ್ರಹಣ ಮೋಕ್ಷ ಕಾಲ ಬಂದಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts