More

    ವೀರಶೈವರು ಒಗ್ಗೂಡಿದಾಗ ಮಾತ್ರ ಸಮಾಜಕ್ಕೆ ಬಲ

    ರಾಮನಗರ: ವಿವಿಧ ಸಂಘಟನೆಗಳಲ್ಲಿ ಗುರುತಿಸಿಕೊಂಡಿರುವ ಜಿಲ್ಲೆಯ ವೀರಶೈವರು ಒಗ್ಗೂಡಿದಾಗ ಮಾತ್ರ ವೀರಶೈವ ಸಮಾಜಕ್ಕೆ ಬಲ ಬರಲಿದೆ ಎಂದು ಚನ್ನಪಟ್ಟಣ ತಾಲೂಕಿನ ಬೇವೂರು ಶ್ರೀ ಮಲ್ಲಿಕಾರ್ಜುನಸ್ವಾಮಿ ಮಠಾಧ್ಯಕ್ಷ ಶ್ರೀ ಮೃತ್ಯುಂಜಯ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.

    ಅಖಿಲ ಭಾರತ ವೀರಶೈವ ಮಹಾಸಭಾ ತಾಲೂಕು ಘಟಕದ ವತಿಯಿಂದ ಅರ್ಚಕರಹಳ್ಳಿಯ ಯೂನಿವರ್ಸಲ್ ಪಬ್ಲಿಕ್ ಶಾಲೆ ಆವರಣದಲ್ಲಿ ಭಾನುವಾರ ನಡೆದ ತಾಲೂಕು ಮಟ್ಟದ ಪ್ರತಿಭಾ ಪುರಸ್ಕಾರ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿ, ಎಲ್ಲಿಯವರೆಗೆ ಕೀಳರಿಮೆ ಬದಿಗಿರಿಸಿ, ಒಬ್ಬ ಸೇವಕ ಎಂಬ ಚಿಂತನೆ ಬೆಳೆಸಿಕೊಳ್ಳುವುದಿಲ್ಲವೋ ಅಲ್ಲಿಯವರೆಗೆ ಈ ಸಮಾಜ ಪ್ರಗತಿ ಕಾಣಲಿಕ್ಕೆ ಸಾಧ್ಯವಿಲ್ಲ ಎಂದರು.

    ಪ್ರತಿಭಾ ಪುರಸ್ಕಾರಕ್ಕೆ ಭಾಜನರಾಗಿರುವ ವಿದ್ಯಾರ್ಥಿಗಳು ಭವಿಷ್ಯವನ್ನು ರೂಪಿಸಿಕೊಳ್ಳುವ ಮೂಲಕ ನಮ್ಮ ಧರ್ಮ ಮತ್ತು ಚಿಂತನೆಯನ್ನು ಬೆಳೆಸಿಕೊಂಡು ಒಳ್ಳೆಯ ಸಂಸ್ಕಾರ ಬೆಳೆಸಿಕೊಳ್ಳಬೇಕು. ವಿದ್ಯಾರ್ಥಿಗಳು ನಿಮ್ಮ ಶಕ್ತಿ ಮೀರಿ ಜ್ಞಾನಾರ್ಜನೆ ಮಾಡಿದ್ದಲ್ಲಿ ನೀವು ಉನ್ನತ ಮಟ್ಟಕ್ಕೆ ಹೋಗಲು ಸಾಧ್ಯ. ಆ ನಿಟ್ಟಿನಲ್ಲಿ ಪ್ರತಿಭಾನ್ವಿತ 30 ವಿದ್ಯಾರ್ಥಿಗಳನ್ನು ಇಂದು ಗುರುತಿಸಿ, ಪ್ರೋತ್ಸಾಹಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಸಮಾಜದ ಸೇವೆಯಲ್ಲಿ ತೊಡಗಿಸಿಕೊಳ್ಳಿ ಎಂದು ಸಲಹೆ ನೀಡಿದರು.

    ಅಖಿಲ ಭಾರತ ವೀರಶೈವ ಮಹಾಸಭಾ ರಾಜ್ಯ ಉಪಾಧ್ಯಕ್ಷ ನಂಜುಂಡೇಶ್ ಮಾತನಾಡಿ, ಸಮಾಜದ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಚಟುವಟಿಕೆಯಲ್ಲಿ ಪಾಲ್ಗೊಳ್ಳಬೇಕು. ಇಂಜಿನಿಯರ್ ಮತ್ತು ವೈದ್ಯರಾಗುವ ಜತೆಗೆ ಕೆಎಎಸ್ ಮತ್ತು ಐಎಎಸ್ ಮಾಡಲು ಶ್ರಮಿಸಬೇಕು ಎಂದು ತಿಳಿಸಿದರು.

    ಮಹಾಸಭಾ ತಾಲೂಕು ಅಧ್ಯಕ್ಷ ಎಂ.ಎಸ್. ಶಂಕರಪ್ಪ ಮಾತನಾಡಿ, ಜನಾಂಗದ ಮುಖಂಡರನ್ನು ಪಕ್ಷಾತೀತವಾಗಿ ಒಂದುಗೂಡಿಸುವಂಥ ಕೆಲಸವನ್ನು ಮಹಾಸಭೆ ಮಾಡುತ್ತಿದೆ ಎಂದರು.

    ಚನ್ನಪಟ್ಟಣ ವಿರಕ್ತ ಮಠದ ಅಧ್ಯಕ್ಷ ಶ್ರೀ ಶಿವರುದ್ರಸ್ವಾಮಿ ಆಶೀರ್ವಚನ ನೀಡಿದರು. ಜೆಡಿಎಸ್ ಮುಖಂಡ ರಾಜಶೇಖರ್, ಪಿಎಲ್​ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಎಂ.ಆರ್. ಶಿವಕುಮಾರ ಸ್ವಾಮಿ, ಶರಣ ಸಾಹಿತ್ಯ ಪರಿಷತ್​ನ ಜಿಲ್ಲಾಧ್ಯಕ್ಷ ಯೋಗಾನಂದ್, ಯೂನಿವರ್ಸಲ್ ಪಬ್ಲಿಕ್ ಸ್ಕೂಲ್ ಸಂಸ್ಥಾಪಕ ಎ.ಜೆ. ಸುರೇಶ್, ವೀರಶೈವ ಮುಖಂಡ ಹೊನ್ನಶೆಟ್ಟಿ ಮಾತನಾಡಿದರು.

    ತಾಪಂ ಅಧ್ಯಕ್ಷ ಭದ್ರಯ್ಯ, ಮಾಜಿ ಅಧ್ಯಕ್ಷ ಶಂಕರಯ್ಯ, ವೀರಶೈವ ಮುಖಂಡರಾದ ವೇದಮೂರ್ತಿ, ರಾಜ್ಯ ವೀರಶೈವ ಲಿಂಗಾಯಿತ ಸರ್ಕಾರಿ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಚಿಕ್ಕಹೊನ್ನಯ್ಯ, ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಮತ್ತು ತಾಲೂಕು ಪದಾಧಿಕಾರಿಗಳಾದ ಸರಸ್ವತಮ್ಮ, ಪಿ.ಶಿವಾನಂದ, ಹೇಮಾವತಿ, ಮೃತ್ಯಂಜಯ, ದಿವಾಕರ್, ಗಿರಿಜಾ, ಪರಮಶಿವಯ್ಯ, ಶಿವಸ್ವಾಮಿ, ಶಿವರುದ್ರಯ್ಯ, ಶಿವಕುಮಾರಸ್ವಾಮಿ, ಶಿವಾನಂದ ಸ್ವಾಮಿ, ಅರ್ಚಕರಹಳ್ಳಿ ಶಿವಸ್ವಾಮಿ, ಶಿಕ್ಷಕ ಶಿವಸ್ವಾಮಿ, ಹರೀಶ್, ಉಮಾ ಉಪಸ್ಥಿತರಿದ್ದರು. ಅರ್ಚಕರಹಳ್ಳಿ ವಿಜಯ್ಕುಮಾರ್ ಕಾರ್ಯಕ್ರಮ ನಿರೂಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts