More

    ಶಿಕ್ಷಕರ ವರ್ಗಾವಣೆ ನಿಯಂತ್ರಣ ಮಸೂದೆಯಲ್ಲಿ ಕೋರಿಕೆಯ ವರ್ಗಾವಣೆ ವಿಚಾರದ ಅಂಶಗಳೇನಿವೆ?

    ಬೆಂಗಳೂರು: ರಾಜ್ಯ ವಿಧಾನಸಭೆಯಲ್ಲಿ ಮಂಗಳವಾರ ಮಂಡಿಸಲ್ಪಟ್ಟಿರುವ ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳು(ಶಿಕ್ಷಕರ ವರ್ಗಾವಣೆ ನಿಯಂತ್ರಣ) ವಿಧೇಯಕ 2020 ರಲ್ಲಿ ಶಿಕ್ಷಕರ ವರ್ಗಾವಣೆ ವಿಚಾರದಲ್ಲಿ ಪದೇಪದೆ ಚರ್ಚೆಗೊಳಗಾಗುವ ವಲಯವಾರು ವರ್ಗಾವಣೆ ಮತ್ತು ಕೋರಿಕೆ ವರ್ಗಾವಣೆಯ ಕುರಿತು ಕೆಲವು ಪ್ರಮುಖ ಅಂಶಗಳಿವೆ.

    ಈ ಪೈಕಿ ವಲಯವಾರು ವರ್ಗಾವಣೆ ಬಗ್ಗೆ ಮಸೂದೆಯಲ್ಲಿರುವ ಅಂಶ ಇಂತಿದೆ- ವಲಯ ಸಿ ನಲ್ಲಿ ಕನಿಷ್ಠ 10 ವರ್ಷ ಸೇವೆ ಸಲ್ಲಿಸಿಲ್ಲದ ಮತ್ತು ವಲಯ ಎ ನಲ್ಲಿ ನಿರಂತರ 10 ವರ್ಷಕ್ಕೂ ಹೆಚ್ಚಿನ ಸೇವೆ ಸಲ್ಲಿಸಿದ ಪ್ರತಿಯೊಬ್ಬ ಶಿಕ್ಷಕರನ್ನೂ ಷರತ್ತುಗಳಿಗೆ ಒಳಪಟ್ಟು ವಲಯ-ಸಿ ಅಥವಾ ವಲಯ ಬಿಗೆ ವರ್ಗಾವಣೆ ಮಾಡತಕ್ಕದ್ದು. ಅದೇ ರೀತಿ. (i)ನೆ ಉಪಖಂಡದ ಅಡಿಯಲ್ಲಿ ವಲಯ-ಸಿಗೆ ವರ್ಗಾವಣೆಗೊಂಡ ಶಿಕ್ಷಕನ ಸ್ಥಳ ನಿಯುಕ್ತಿಗಾಗಿ ಯಾವುದೇ ಖಾಲಿ ಹುದ್ದೆ ಲಭ್ಯ ಇಲ್ಲದೇ ಹೋದರೆ, ವಲಯ ಸಿ ಅಥವಾ ವಲಯ ಬಿನಲ್ಲಿ ಕನಿಷ್ಠ ಸೇವಾವಧಿ ಪೂರೈಸಿರುವ ಮತ್ತು ವರ್ಗಾವಣೆಗೆ ಸಮ್ಮತಿಸಿರುವ ಶಿಕ್ಷಕರನ್ನು ಆದ್ಯತೆಯ ಮೇರೆಗೆ ವಲಯ-ಎ ಗೆ ವರ್ಗಾವಣೆ ಮಾಡುವ ಮೂಲಕ ಖಾಲಿ ಹುದ್ದೆ ಸೃಜಿಸಬಹುದು.

    ಇದೇ ರೀತಿ, ಕೋರಿಕೆಯ ವರ್ಗಾವಣೆ ವಿಚಾರಕ್ಕೆ ಸಂಬಂಧಿಸಿರುವ ಅಂಶ ಇಂತಿದೆ – ಒಂದು ಶಾಲೆಯಲ್ಲಿ ಕನಿಷ್ಠ ಸೇವಾ ಅವಧಿಯಲ್ಲಿ ಪೂರೈಸಿರುವ ಶಿಕ್ಷಕನಿಗೆ ಖಾಲಿ ಹುದ್ದೆಗಳ ಲಭ್ಯತೆಗೆ ಮತ್ತು ನಿಯಮಿಸಬಹುದಾದ ಅಂಥ ಇತರ ಷರತ್ತುಗಳಿಗೆ ಒಳಪಟ್ಟು ವರ್ಗಾವಣೆಯನ್ನು ಕೋರುವ ಆಯ್ಕೆಯನ್ನು ನೀಡತಕ್ಕದ್ದು. ಆದರೆ, ಸಮರ್ಪಕ ಮರುಹಂಚಿಕೆ ಅಥವಾ ವಲಯವಾರು ವರ್ಗಾವಣೆಯ ಪರಿಣಾಮವಾಗಿ ಒಂದು ಶಾಲೆಯಿಂದ ಮತ್ತೊಂದಕ್ಕೆ ಶಿಕ್ಷಕನ ವರ್ಗಾವಣೆಯಾದ ಪ್ರಕರಣದಲ್ಲಿ ಒಂದು ಶಾಲೆಯಲ್ಲಿ ಕನಿಷ್ಠ ಸೇವೆಯನ್ನು ಲೆಕ್ಕಹಾಕುವ ಉದ್ದೇಶಕ್ಕಾಗಿ ಹಿಂದಿನ ಶಾಲೆಯಲ್ಲಿ ಸಲ್ಲಿಸಿದ ಸೇವೆಯನ್ನು ಪರಿಗಣಿಸತಕ್ಕದ್ದು. ಆದಾಗ್ಯೂ, ಕಲ್ಯಾಣ ಕರ್ನಾಟಕ ಪ್ರದೇಶದ ಯಾವುದೇ ಆರು ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕನು, ಕಲ್ಯಾಣ ಕರ್ನಾಟಕದ ಹೊರಗೆ ವರ್ಗಾವಣೆಯನ್ನು ಕೋರುವುದಕ್ಕಾಗಿ ಎಲ್ಲಾ ಇತರ ಅರ್ಹತಾ ಷರತ್ತುಗಳ ಜೊತೆಗೆ ಆ ಪ್ರದೇಶದಲ್ಲಿ ಕನಿಷ್ಠ 10 ವರ್ಷಗಳ ಸೇವೆಯನ್ನು ಕೂಡ ಪೂರೈಸಿರತಕ್ಕದ್ದು.

    ಶಿಕ್ಷಕರ ವರ್ಗಾವಣೆ ಮ್ಯಾನ್ಯುಯಲ್ ಕೌನ್ಸೆಲಿಂಗ್​ಗೆ ನಿಷೇಧ, ಕೋರಿಕೆ ವರ್ಗಾವಣೆಗಳಿಗೆ ಆದ್ಯತೆ ಸೇರಿ ಹಲವು ಅಂಶಗಳ ಮಸೂದೆ ಮಂಡನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts