More

    ರೆಸಲೂಷನ್​ 2019 ಏನಾಯ್ತು?|ಮೊದಲ ದಿನವೇ ‘ಗುಡ್​ಬೈ’

    ಹೊಸ ವರ್ಷ ಆರಂಭ ಆಗುತ್ತಿದ್ದಂತೆಯೇ ಆ ವರ್ಷವಿಡೀ ಏನಾದರೊಂದು ಸಾಧಿಸಬೇಕು, ಕೆಟ್ಟ ಚಟ ಬಿಡಬೇಕು, ಒಳ್ಳೆಯದನ್ನೇ ಮಾಡಬೇಕು ಎಂದೆಲ್ಲಾ ಸಂಕಲ್ಪ ಮಾಡಿಕೊಳ್ಳುವವರೇ ಹೆಚ್ಚು. ಕೆಲವರು ಅದನ್ನು ಸಾಧಿಸಿದರೆ, ಇನ್ನು ಹಲವರ ರೆಸಲೂಷನ್ ಠುಸ್ ಆಗತ್ತೆ. ಅಂಥ ವಿಶಿಷ್ಟ ಅನುಭವಗಳನ್ನು ಹಂಚಿಕೊಳ್ಳುವಂತೆ ವಿಜಯವಾಣಿ ನೀಡಿದ ಕರೆಗೆ ನಿರೀಕ್ಷೆಗೂ ಮೀರಿದ ಪತ್ರಗಳು ಬಂದಿವೆ. ಆಯ್ದ ಕೆಲವು ಪತ್ರಗಳ ಮೊದಲ ಕಂತು ಇದು…

    ಫ್ರೆಂಡ್ಸ್ ಜತೆ ಜಗಳ ಆಡಿದ್ದು ಸಾಕು, ಇಲ್ಲಿಯವರೆಗೆ ಕ್ಲಾಸ್ ಬಂಕ್ ಮಾಡಿದ್ದು ಸಾಕು. ಈ ವರ್ಷ ಇವೆಲ್ಲಾ ಮಾಡದೇ ಗುಡ್ ಗರ್ಲ್ ಆಗಿರಬೇಕು ಎಂದುಕೊಂಡು ಹೊಸ ವರ್ಷದ ಮೊದಲ ದಿನ ದೊಡ್ಡದೊಂದು ಸಂಕಲ್ಪ ಮಾಡಿದ್ದೆ. ಆದರೆ ಹೊಸ ವರ್ಷದ ಮೊದಲ ದಿನ ಎಂದ ಮೇಲೆ ಮನಸ್ಸು ಕೇಳುತ್ತದೆಯೇ? ಮತ್ತೆ ಹೊಸ ವರ್ಷ ಬರಲು ಇನ್ನೊಂದು ವರ್ಷ ಕಾಯಬೇಕಲ್ಲ, ಅದಕ್ಕಾಗಿಯೇ ಮೊದಲ ದಿನವೇ ಕಾಲೇಜಿಗೆ ಚಕ್ಕರ್ ಹೊಡೆದು ಫ್ರೆಂಡ್ಸ್ ಜತೆ ಸುತ್ತಾಡಲು ಹೋದೆ. ಎಲ್ಲ ಫ್ರೆಂಡ್ಸ್ ಒಟ್ಟಿಗೆ ಇದ್ದ ಮೇಲೆ ಇನ್ನೇನು ಕೇಳುವುದು. ನಮ್ಮ ನಡುವೆ ಜಗಳವಾಯಿತು. ನನ್ನ ರೆಸಲೂಷನ್ ನೆನಪು ಮಾಡಿಕೊಂಡು ಜಗಳ ಆಡಬಾರದು ಎಂದುಕೊಂಡೆ. ಆದರೆ ಪ್ರತಿ ಸಲವೂ ನಾನೇ ಯಾಕೆ ಅನುಸರಿಸಿಕೊಂಡು ಹೋಗಬೇಕು ಎಂದುಕೊಂಡು ಜಗಳನೂ ಆಡಿದೆ. ಈ ಜಗಳ ಸ್ವಲ್ಪ ಜಾಸ್ತಿಯೇ ಆದ್ದರಿಂದ ಓದಲು ಮನಸ್ಸು ಬರಲಿಲ್ಲ. ಅಲ್ಲಿಗೆ ಮೊದಲ ದಿನವೇ ರೆಸಲೂಷನ್​ಗೆ ಗುಡ್​ಬೈ ಹೇಳಬೇಕಾಯ್ತು.

    | ಶುಭಾ ಹತ್ತಳ್ಳಿ ವಿಜಯಪುರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts