More

    ವಿಡಿಯೋ ಕಾನ್ಫರೆನ್ಸ್​​ನಲ್ಲಿ ಪ್ರಧಾನಿ ನರೇಂದ್ರ ಮೋದಿಯವರಿಗೆ ದೆಹಲಿ ಸಿಎಂ ಅರವಿಂದ್​ ಕೇಜ್ರಿವಾಲ್​ ನೀಡಿದ ಸಲಹೆ ಇದು….

    ನವದೆಹಲಿ: ಇಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್​ ನಡೆಸುತ್ತಿದ್ದು, ಆಯಾ ರಾಜ್ಯಗಳಲ್ಲಿನ ಕರೊನಾ ಪರಿಸ್ಥಿತಿಯ ಬಗ್ಗೆ ಮಾಹಿತಿ ಪಡೆಯುತ್ತಿದ್ದಾರೆ.

    ಇಂದು ಪಿಎಂ ಮತ್ತು ಎಲ್ಲ ರಾಜ್ಯಗಳ ಸಿಎಂಗಳ ನಡುವೆ ಸಂವಾದ ನಡೆದ ಬಳಿಕವಷ್ಟೇ ಲಾಕ್​ಡೌನ್​ ಅವಧಿ ಮುಂದುವರಿಯಲಿದೆಯಾ, ಎಷ್ಟುದಿನ ಇರುತ್ತದೆ ಎಂಬುದನ್ನು ನಿರ್ಧಾರ ಮಾಡಲಾಗುತ್ತದೆ.

    ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ನಡೆಯುತ್ತಿರುವ ಸಂವಾದದಲ್ಲಿ ಭಾಗವಹಿಸಿರುವ ಮುಖ್ಯಮಂತ್ರಿಗಳಲ್ಲಿ ಬಹುತೇಕರು ಲಾಕ್​ಡೌನ್​ ಅವಧಿ ವಿಸ್ತರಣೆ ಮಾಡುವಂತೆ ಕೇಳಿಕೊಂಡಿದ್ದಾರೆ. ದೆಹಲಿ ಮುಖ್ಯಮಂತ್ರಿ ಅರವಿಂದ್​ ಕೇಜ್ರಿವಾಲ್​ ಕೂಡ ಅದನ್ನೇ ಒತ್ತಾಯಿಸಿದ್ದಾರೆ.

    ಈಗಾಗಲೇ ಒಂದೊಂದೇ ರಾಜ್ಯಗಳು ಲಾಕ್​ಡೌನ್​ ಅವಧಿಯನ್ನು ವಿಸ್ತರಿಸಿಕೊಳ್ಳುತ್ತಿವೆ. ಆದರೆ ಕೇಂದ್ರ ಸರ್ಕಾರ ರಾಷ್ಟ್ರಮಟ್ಟದಲ್ಲಿಯೇ ಈ ನಿರ್ಧಾರ ತೆಗೆದುಕೊಳ್ಳಬೇಕು. ಇಡೀ ಭಾರತದ ಲಾಕ್​ಡೌನ್​ ಅವಧಿ ಮುಂದುವರಿಸಬೇಕು. ಆಯಾ ರಾಜ್ಯಗಳು ತಮಗೆ ಬೇಕಾದಂತೆ ವಿಸ್ತರಿಸಿಕೊಳ್ಳುವುದರಿಂದ ಕರೊನಾವನ್ನು ಪರಿಣಾಮಕಾರಿಯಾಗಿ ಹಿಮ್ಮೆಟ್ಟಲು ಸಾಧ್ಯವಿಲ್ಲ. ಹಾಗಾಗಿ ಒಟ್ಟಾರೆ ಲಾಕ್​ಡೌನ್ ಮುಂದುವರಿಸಿ ಎಂದು ಅರವಿಂದ್ ಕೇಜ್ರಿವಾಲ್​ ಪ್ರಧಾನಿ ಮೋದಿಯವರ ಬಳಿ ಸಂವಾದದಲ್ಲಿ ಮನವಿ ಮಾಡಿದ್ದಾರೆ.

    ರಾಷ್ಟ್ರಮಟ್ಟದಲ್ಲಿ ರೈಲ್ವೆ, ರಸ್ತೆ ಸೇರಿ ಎಲ್ಲ ರೀತಿಯ ಸಾರಿಗೆ ವ್ಯವಸ್ಥೆಗಳನ್ನು ಸಂಪೂರ್ಣವಾಗಿ ಬಂದ್ ಮಾಡಿದರೆ ಮಾತ್ರ ಲಾಕ್​ಡೌನ್​ ಪರಿಣಾಮಕಾರಿಯಾಗಲು ಸಾಧ್ಯ. ಕೆಲವೇ ರಾಜ್ಯಗಳು ನಿರ್ಧಾರ ತೆಗೆದುಕೊಂಡರೆ ಆಗುವುದಿಲ್ಲ ಎಂದು ಕ್ರೇಜಿವಾಲ್​ ನರೇಂದ್ರ ಮೋದಿಯವರ ಬಳಿ ಹೇಳಿದ್ದಾರೆ.

    ಸದ್ಯ ದೆಹಲಿ ಕರೊನಾ ವೈರಸ್​ ಪ್ರಕರಣದಲ್ಲಿ ಮೂರನೇ ಸ್ಥಾನದಲ್ಲಿ ಇದೆ.(ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts