More

    ಹರಿಹರಪುರ ಶ್ರೀಗಳಿಂದ ಸತ್ಸಂಗ, ಸಾಮೂಹಿಕ ಶಿವ ದೀಕ್ಷೆ ಕಾರ್ಯಕ್ರಮ 31ಕ್ಕೆ

    ಎನ್.ಆರ್.ಪುರ: ನಾಗರಮಕ್ಕಿ ದುರ್ಗಾಪರಮೇಶ್ವರಿ ದೇವಸ್ಥಾನದ ಆವರಣದಲ್ಲಿ ಜ.31ರಂದು ಹರಿಹರಪುರದ ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿಯಿಂದ ‘ನಮ್ಮ ಹಳ್ಳಿಗೆ ನಮ್ಮ ಸ್ವಾಮಿಗಳು’ ಜೀವನ ಜಾಗೃತಿ ಸತ್ಸಂಗ ಆಯೋಜಿಸಲಾಗಿದೆ ಎಂದು ಜೀವನ ಜಾಗೃತಿ, ಶಿವ ದೀಕ್ಷಾ ಸಮಿತಿ ಸ್ವಾಗತ ಸಮಿತಿ ಅಧ್ಯಕ್ಷ ಬಿ.ಪಿ.ಮೋಹನ್ ತಿಳಿಸಿದರು.

    ನಾಗರಮಕ್ಕಿ ದೇವಸ್ಥಾನದ ಆವರಣದಲ್ಲಿ ಸೋಮವಾರ ಏರ್ಪಡಿಸಿದ್ದ ಸ್ವಾಗತ ಸಮಿತಿ ಎರಡನೇ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಸೀತೂರು ಗ್ರಾಪಂನ ಎಲ್ಲ ಗ್ರಾಮಗಳ ಭಕ್ತರು ಒಟ್ಟಾಗಿ ಶಿವದೀಕ್ಷೆ ಆಯೋಜಿಸಲಾಗಿದೆ. ಕಾರ್ಯಕ್ರಮಕ್ಕೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜೋಡಿಸಲಿದ್ದಾರೆ. ಅಂದಾಜು 1,500 ಜನರು ಶಿವದೀಕ್ಷೆ ಪಡೆಯಲಿದ್ದಾರೆ. ಹರಿಹರಪುರ ಶ್ರೀಗಳು ಹಿಂದು ಧರ್ಮದಲ್ಲಿ ಏಕತೆ, ಸಾಮರಸ್ಯ ಹಾಗೂ ಸಾತ್ವಿಕತೆ ಬೆಳೆಸಲು 7 ವರ್ಷಗಳಿಂದ ದಕ್ಷಿಣ ಭಾರತದಲ್ಲಿ ಶಿವದೀಕ್ಷೆ ಆಯೋಜಿಸುತ್ತಿದ್ದಾರೆ ಎಂದು ಮಾಹಿತಿ ನೀಡಿದರು.

    ಸ್ವಾಗತ ಸಮಿತಿ ಉಪಾಧ್ಯಕ್ಷ ಮಲ್ಲಂದೂರು ಶಂಕರನಾರಾಯಣ ಭಟ್ ಮಾತನಾಡಿ, ಹರಿಹರಪುರ ಶ್ರೀಗಳು ಶಿವದೀಕ್ಷಾ ಕಾರ್ಯಕ್ರಮದ ಮೂಲಕ ಹಿಂದು ಧರ್ಮದ ಸಂಘಟನೆ ಮಾಡುತ್ತಿದ್ದಾರೆ. ಇದರಿಂದ ನಮ್ಮ ಸಂಸ್ಕೃತಿ ಉಳಿಯಲಿದೆ ಎಂದರು.

    ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾಧಿಕಾರಿ ಡಿ.ದಿನೇಶ್, ಸೀತೂರು ಗ್ರಾಪಂ ಅಧ್ಯಕ್ಷ ಎನ್.ಪಿ.ರಮೇಶ್, ಸ್ವಾಗತ ಸಮಿತಿ ಕಾರ್ಯದರ್ಶಿ ಎ.ಎಸ್.ವೆಂಕಟರಮಣ, ಸಾಲೇಸಿಮಕ್ಕಿ ಚೇತನ್, ಕುದುರೆಗುಂಡಿ ಚೇತನ್ ಜೈನ್, ನಾಗೇಶ್ ನಾಯಕ್, ರಾಘವೇಂದ್ರ , ಹೇಮಂತ್ ಶೆಟ್ಟಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts