More

    ಮೊರಟೋರಿಯಂ ಅವಧಿಯಲ್ಲಿನ ಇಎಂಐ ಬಡ್ಡಿ ವಿಚಾರ ಸುಪ್ರೀಂ ಕೋರ್ಟ್​ನಲ್ಲಿ ನಾಳೆ ವಿಚಾರಣೆ

    ನವದೆಹಲಿ: ಕೋವಿಡ್ 19 ಸಂಕಷ್ಟದಿಂದಾಗಿ ಇಡೀ ಅರ್ಥವ್ಯವಸ್ಥೆ ತಾಳತಪ್ಪಿದ್ದು, ಕೇಂದ್ರ ಸರ್ಕಾರ ಆರಂಭದಲ್ಲಿ ಮೂರು ತಿಂಗಳು ಲೋನ್​ ಮೊರಟೋರಿಯಂ ಘೋಷಿಸಿತ್ತು. ನಂತರದಲ್ಲಿ ಮತ್ತೆ ಮೂರು ತಿಂಗಳು ವಿಸ್ತರಣೆಮಾಡಿತ್ತು. ಈಗ ಈ ಅವಧಿಯನ್ನು ಎರಡು ವರ್ಷದ ತನಕ ವಿಸ್ತರಿಸಬಹುದು ಎಂದು ಸುಪ್ರೀಂ ಕೋರ್ಟ್​ಗೆ ಕೇಂದ್ರ ಸರ್ಕಾರ ಮಂಗಳವಾರ ಮಾಹಿತಿ ನೀಡಿದೆ.

    ಕೇಂದ್ರ ಸರ್ಕಾರ ಮತ್ತು ಆರ್​ಬಿಐ ಪರವಾಗಿ ಕೋರ್ಟ್​ಗೆ ಹಾಜರಾದ ಸೋಲಿಸಿಟರ್ ಜನರಲ್ ತುಷಾರ್ ಮೆಹ್ತಾ ಈ ವಿಷಯವನ್ನು ನ್ಯಾಯಮೂರ್ತಿ ಅಶೋಕ್ ಭೂಷಣ್ ನೇತೃತ್ವದ ನ್ಯಾಯಪೀಠಕ್ಕೆ ತಿಳಿಸಿದ್ದಾರೆ. ಸಂಕಷ್ಟಕ್ಕೀಡಾಗಿರುವ ಸೆಕ್ಟರ್​ಗಳ ನೆರವಿಗೆ ಸರ್ಕಾರ ಧಾವಿಸಿದ್ದು, ಅನೇಕ ಕ್ರಮಗಳನ್ನು ತೆಗೆದುಕೊಂಡಿದೆ. ಸಾಂಕ್ರಾಮಿಕದ ಕಾರಣಕ್ಕೆ ಆರ್ಥಿಕತೆ ಶೇಕಡ 23 ಕುಸಿತ ಕಂಡಿದೆ. ಇದನ್ನು ಮೇಲೆತ್ತುವುದಕ್ಕೂ ಪ್ಯಾಕೇಜ್​ಗಳನ್ನು ಘೋಷಿಸಿ, ಅನುಷ್ಠಾನಗೊಳಿಸುತ್ತಿದೆ.

    ಇದನ್ನೂ ಓದಿ: ಐವರು ನಕ್ಸಲರ ಬಂಧನ, ಜೈಲ್ಲಿನಲ್ಲಿದ್ದ ನಕ್ಸಲ್ ಒಬ್ಬನ ಸಾವು

    ಮೊರಟೋರಿಯಂ ಅವಧಿಯಲ್ಲೂ ಬ್ಯಾಂಕುಗಳು ಸಾಲದ ಮೇಲೆ ಬಡ್ಡಿ, ಆ ಬಡ್ಡಿಯ ಮೇಲೆ ಬಡ್ಡಿ ವಿಧಿಸುತ್ತಿರುವ ಬಗ್ಗೆ ಪ್ರಶ್ನಿಸಿ ಸಲ್ಲಿಸಿದ ಅನೇಕ ಅರ್ಜಿಗಳ ವಿಚಾರಣೆಯನ್ನು ನಡೆಸುತ್ತಿದ್ದ ನ್ಯಾಯಪೀಠ, ಈ ಕುರಿತ ಇನ್ನಷ್ಟು ವಿಚಾರಣೆಯನ್ನು ನಾಳೆ ನಡೆಸುವುದಾಗಿ ಘೋಷಿಸಿದೆ. ಇದಕ್ಕೂ ಮುನ್ನ, ಈ ವಿಷಯವನ್ನು ಪರಿಶೀಲಿಸುವಂತೆ ಕೇಂದ್ರ ಸರ್ಕಾರ ಮತ್ತು ಆರ್​ಬಿಐಗೆ ಸೂಚಿಸಿತ್ತು. (ಏಜೆನ್ಸೀಸ್)

    ಬೇಗೂರಿನ ವಿಶ್ವಪ್ರಿಯ ಲೇಔಟ್​ನಲ್ಲಿ ಗಾಂಜಾ ಮಾರುತ್ತಿದ್ದವರು ಪೊಲೀಸ್​ ಬಲೆಗೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts