ಒಂದೇ ದೇಹ ಎರಡು ತಲೆ ಹೊಂದಿದ್ದ ನವಜಾತ ಶಿಶು ಒಂದೇ ವಾರದಲ್ಲಿ ಸಾವು: ಶವ ಸ್ವೀಕರಿಸಲು ಪೋಷಕರ ನಕಾರ..! Two Headed Baby

ಒಡಿಶಾದ ಗಂಜಾಂ ಜಿಲ್ಲೆಯ ಬ್ರಹ್ಮಪುರದಲ್ಲಿರುವ ಸರ್ಕಾರಿ ಆಸ್ಪತ್ರೆಯಲ್ಲಿ ಎರಡು ತಲೆ ಹಾಗೂ ಒಂದೇ ದೇಹವನ್ನು ಹೊಂದಿದ್ದ ಅಪರೂಪದ ಗಂಡು ಮಗುವೊಂದು ಜನಿಸಿತ್ತು. ಒಡಿಶಾದ ಕಂಧಮಾಲ್ ಜಿಲ್ಲೆಯ ತುಮುದಿಬಂಧ ಗ್ರಾಮದ 22 ವರ್ಷದ ಯುವತಿಯೊಬ್ಬಳಿಗೆ ಮೊದಲ ಗರ್ಭಧಾರಣೆಯಾಗಿದ್ದು, ಅಕ್ಟೋಬರ್ 10 ರಂದು ಸಿಸೇರಿಯನ್ (ಶಸ್ತ್ರಚಿಕಿತ್ಸೆ) ಮೂಲಕ ಮಗುವಿನ ಜನನವಾಗಿತ್ತು.
Two Headed Baby
ಒಂದೇ ದೇಹ ಎರಡು ತಲೆ ಹೊಂದಿದ್ದ ನವಜಾತ ಶಿಶು ಒಂದೇ ವಾರದಲ್ಲಿ ಸಾವು
Published on: 

ಭುವನೇಶ್ವರ: ಒಡಿಶಾದಲ್ಲಿ ಜನಿಸಿದ್ದ ಎರಡು ತಲೆ ಹಾಗೂ ಒಂದೇ ಮೈಯುಳ್ಳ ಅಪರೂಪದ ನವಜಾತ ಶಿಶು ( Two Headed Baby ) ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದೆ. ಬ್ರಹ್ಮಪುರದ ಸರ್ಕಾರಿ ಆಸ್ಪತ್ರೆಯಲ್ಲಿ ಈ ಹೃದಯವಿದ್ರಾವಕ ಘಟನೆ ನಡೆದಿದೆ. ಅಷ್ಟಕ್ಕೂ ಈ ಮಗುವಿನ ಸಾವಿಗೆ ಕಾರಣವೇನು? ಈ ಬಗ್ಗೆ ವೈದ್ಯರು ಹೇಳಿದ್ದೇನು ಎಂಬುದರ ಕಂಪ್ಲೀಟ್​ ಮಾಹಿತಿ ಇಲ್ಲಿದೆ.

ಒಡಿಶಾದ ಗಂಜಾಂ ಜಿಲ್ಲೆಯ ಬ್ರಹ್ಮಪುರದಲ್ಲಿರುವ ಸರ್ಕಾರಿ ಆಸ್ಪತ್ರೆಯಲ್ಲಿ ಎರಡು ತಲೆ ಹಾಗೂ ಒಂದೇ ದೇಹವನ್ನು ಹೊಂದಿದ್ದ ಅಪರೂಪದ ಗಂಡು ಮಗುವೊಂದು ಜನಿಸಿತ್ತು. ಒಡಿಶಾದ ಕಂಧಮಾಲ್ ಜಿಲ್ಲೆಯ ತುಮುದಿಬಂಧ ಗ್ರಾಮದ 22 ವರ್ಷದ ಯುವತಿಯೊಬ್ಬಳಿಗೆ ಮೊದಲ ಗರ್ಭಧಾರಣೆಯಾಗಿದ್ದು, ಅಕ್ಟೋಬರ್ 10 ರಂದು ಸಿಸೇರಿಯನ್ (ಶಸ್ತ್ರಚಿಕಿತ್ಸೆ) ಮೂಲಕ ಮಗುವಿನ ಜನನವಾಗಿತ್ತು.

Also Read
ಒಂದೇ ದೇಹ ಎರಡು ತಲೆ: ಅಪರೂಪದ ಮಗುವಿಗೆ ಜನ್ಮ ನೀಡಿದ ಒಡಿಶಾ ಮಹಿಳೆ, ಮುಂದಿದೆ ಈ ಸವಾಲು? Two Headed Baby
Two Headed Baby

ಆಸ್ಪತ್ರೆಯ ಇತಿಹಾಸದಲ್ಲೇ ಇಂತಹ ಪ್ರಕರಣ ವರದಿಯಾಗಿರುವುದು ಇದೇ ಮೊದಲು ಎಂದು ವೈದ್ಯರು ತಿಳಿಸಿದ್ದರು. ಅಲ್ಲದೆ, ಮಗುವನ್ನು ಉಳಿಸಲು ವೈದ್ಯರ ತಂಡ ಹಪಹಪಿಸಿತ್ತಾದರೂ ದುರದೃಷ್ಟವಶಾತ್ ಶನಿವಾರ (ಅ.17) ಮಗು ಕೊನೆಯುಸಿರೆಳೆದಿದೆ.

ಸಾವಿಗೆ ಕಾರಣವೇನು?

ಮಗು ಜನಿಸಿದ ಮರುದಿನವೇ ಉಸಿರಾಟದ ತೊಂದರೆ ಸೇರಿದಂತೆ ವಿವಿಧ ಆರೋಗ್ಯ ಸಮಸ್ಯೆಗಳು ಉಲ್ಬಣಗೊಂಡಿದ್ದವು. ವೈದ್ಯಕೀಯ ತಪಾಸಣೆಯ ಪ್ರಕಾರ ಮಗುವಿಗೆ ಶಸ್ತ್ರಚಿಕಿತ್ಸೆ ನಡೆಸಿ ಉಳಿಸಲು ಸಾಧ್ಯವಾಗದಷ್ಟು ಸಂಕೀರ್ಣ ಸ್ಥಿತಿ ಇತ್ತು ಎಂದು ಮಕ್ಕಳ ಶಸ್ತ್ರಚಿಕಿತ್ಸಾ ವಿಭಾಗದ ಮುಖ್ಯಸ್ಥರು ಸ್ಪಷ್ಟಪಡಿಸಿದ್ದಾರೆ. ಸಂಕೀರ್ಣ ಆರೋಗ್ಯ ಸಮಸ್ಯೆಗಳೇ ಮಗುವಿನ ಸಾವಿಗೆ ಪ್ರಮುಖ ಕಾರಣ ಎಂದು ಆಸ್ಪತ್ರೆಯ ಅಧೀಕ್ಷಕರು ಅಧಿಕೃತವಾಗಿ ತಿಳಿಸಿದ್ದಾರೆ.

ಶವ ಸ್ವೀಕರಿಸಲು ನಕಾರ

ಮಗುವಿನ ವಿಚಿತ್ರ ಜನನದಿಂದ ತೀವ್ರ ಆಘಾತಕ್ಕೊಳಗಾಗಿದ್ದ ಪೋಷಕರು, ಮಗು ಮೃತಪಟ್ಟ ನಂತರ ಆರಂಭದಲ್ಲಿ ಶವವನ್ನು ಸ್ವೀಕರಿಸಲು ನಿರಾಕರಿಸಿದ್ದರು. ಈ ವಿಷಯ ತಿಳಿದ ಗಂಜಾಂ ಜಿಲ್ಲಾ ಆಡಳಿತವು ತಕ್ಷಣವೇ ಮಧ್ಯಪ್ರವೇಶಿಸಿ, ಪೋಷಕರಿಗೆ ಸಾಂತ್ವನ ಹೇಳಿ ಮನವೊಲಿಸಿತು. ಅಂತಿಮವಾಗಿ ಜಿಲ್ಲಾ ಆಡಳಿತದ ಸಹಾಯದಿಂದ ಆಂಬುಲೆನ್ಸ್ ಮೂಲಕ ಪೋಷಕರು ಮಗುವಿನ ಮೃತದೇಹವನ್ನು ತಮ್ಮ ಸ್ವಗ್ರಾಮಕ್ಕೆ ಕೊಂಡೊಯ್ದಿದ್ದಾರೆ.

Also Read
ನಟ ಟೈಗರ್ ಶ್ರಾಫ್ ಮೇಲೆ ನಡೆದ ಗುಂಡಿನ ದಾಳಿಗೆ ಕಾರಣವೇನು? ಈ ಒಂದು ಮಾತು ಕೇಳಿ ಬೆಚ್ಚಿಬಿದ್ದ ಬಾಲಿವುಡ್! Tiger Shroff Firing
Two Headed Baby

ಜನನದ ಸಮಯದಲ್ಲಿ 2.25 ಕೆಜಿ ತೂಕವಿದ್ದ ಈ ಮಗುವಿಗೆ ಎರಡು ತಲೆ ಮತ್ತು ಎರಡು ಕುತ್ತಿಗೆಗಳಿದ್ದವು. ಆದರೆ, ದೇಹ ಮಾತ್ರ ಒಂದೇ ಆಗಿತ್ತು. ಎರಡು ಬೆನ್ನುಮೂಳೆಗಳು ಮತ್ತು ಒಂದೇ ಜೊತೆ ಕಾಲು-ಕೈಗಳನ್ನು ಹೊಂದಿದ್ದ ಈ ಮಗುವಿಗೆ ಕೇವಲ ಒಂದೇ ಹೃದಯ ಮತ್ತು ಒಂದೇ ಯಕೃತ್ತು (ಲಿವರ್) ಇತ್ತು. ಅಲ್ಲದೆ, ಒಂದೇ ಮೂತ್ರಜನಕಾಂಗ ವ್ಯವಸ್ಥೆ ಹಾಗೂ ಬಾಹ್ಯ ಜನನಾಂಗವಿದ್ದರೂ ಸಹ ಗುದದ್ವಾರ (Anus) ಇರಲಿಲ್ಲ ಎಂದು ವೈದ್ಯರು ವಿವರಣೆ ನೀಡಿದ್ದಾರೆ.

ಈ ಅಪರೂಪದ ಸ್ಥಿತಿಯನ್ನು ವೈದ್ಯಕೀಯ ಭಾಷೆಯಲ್ಲಿ 'ಡಿಸೆಫಾಲಿಕ್ ಪ್ಯಾರಾಪಾಗಸ್' (Dyscephalic Parapagus) ಎಂದು ಕರೆಯಲಾಗುತ್ತದೆ. ಇದು ಕಾಂಜಾಯ್ನ್ಡ್ ಟ್ವಿನ್ಸ್ (ಒಂದೇ ಮೈಯುಳ್ಳ ಅವಳಿ ಮಕ್ಕಳು) ನ ಒಂದು ವಿಧವಾಗಿದ್ದು, ಎರಡು ತಲೆಗಳು ಒಂದೇ ದೇಹವನ್ನು ಹಂಚಿಕೊಳ್ಳುತ್ತವೆ. ಪ್ರತಿ ಮೂರು ಲಕ್ಷ ಜನನಗಳಲ್ಲಿ ಕೇವಲ ಒಂದರಂತೆ ಅತ್ಯಂತ ವಿರಳವಾಗಿ ಈ ಸ್ಥಿತಿ ಸಂಭವಿಸುತ್ತದೆ. ಈ ರೀತಿಯ ಪರಿಸ್ಥಿತಿಯಲ್ಲಿ ಹುಟ್ಟುವ ಶಿಶುಗಳು ಬದುಕುಳಿಯುವ ಸಾಧ್ಯತೆಗಳು ಅತ್ಯಂತ ಕಡಿಮೆ ಎಂದು ವೈದ್ಯಕೀಯ ತಜ್ಞರು ತಿಳಿಸಿದ್ದಾರೆ, (ಏಜೆನ್ಸೀಸ್​).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net